ಇವು ವಜ್ರಗಳಾ, ಜಸ್ಟ್ ಬಣ್ಣದ ಕಲ್ಲುಗಳಾ? ಕರ್ನೂಲು ಜಿಲ್ಲೆಯ ರೈತರು ಹೊಲಗಳಲ್ಲಿ ವಜ್ರದ ಬೇಟೆಯಲ್ಲಿ ಬೆವರು ಸುರಿಸುತ್ತಿದ್ದಾರೆ!
ಸ್ಥಳೀಯರು ಹೆಚ್ಚಿನ ಸಂಖ್ಯೆಯಲ್ಲಿ ಅಲ್ಲಿಗೆ ತಲುಪಿ ವಜ್ರ ಬೇಟೆಯಲ್ಲಿ ತೊಡಗಿದ್ದಾರೆ. ಆದರೆ, ಸಿಕ್ಕ ವಜ್ರಗಳು ನಿಜವೋ ಅಲ್ಲವೋ ಎಂಬ ಅನುಮಾನ ಅವರಲ್ಲಿ ಮೂಡಿದೆ. ಹಾಗಾಗಿ ವ್ಯಕ್ತಿಯೊಬ್ಬರು ಆನ್‌ಲೈನ್‌ನಲ್ಲಿ ವಜ್ರ ಅಳತೆ ಮೀಟರ್ ಖರೀದಿಸಿದ್ದಾರೆ.
ಸಾಮಾನ್ಯವಾಗಿ ಮಳೆಗಾಲ ಬಂತೆಂದರೆ ಕರ್ನೂಲು ಜಿಲ್ಲೆಯ ರೈತರು, ಜನ ಸಾಮಾನ್ಯರು ಹೊಲಗಳಿಗೆ ನುಗ್ಗುತ್ತಾರೆ. ಬೆಳೆಗಳನ್ನು ಬೆಳೆಯಲು ಅಲ್ಲ, ಆದರೆ ವಜ್ರಗಳನ್ನು ಬೇಟೆಯಾಡಲು! ಅಲ್ಲಿ ಮಳೆಯಾದರೆ ವಜ್ರಗಳು ಸಿಗುತ್ತವಂತೆ. ಅದಕ್ಕಾಗಿಯೇ ರೈತರು ಹೊಲಗಳಲ್ಲಿ ವಜ್ರಗಳ ಬೇಟೆಯನ್ನು ಮುಂದುವರೆಸಿದ್ದಾರೆ. ಇದೀಗ ಈ ವಜ್ರದ ಬೇಟೆ ಗುಂಟೂರಿಗೂ ಹಬ್ಬಿದೆ. ಹೌದು, ಪಲ್ನಾಡು ಜಿಲ್ಲೆಯ ಸತ್ತೇನಪಲ್ಲಿ ಬಸವಮ್ಮ ವಾಗುವಿನಲ್ಲಿ ವಜ್ರಗಳು ಪತ್ತೆಯಾಗಿವೆ ಎಂಬ ಪ್ರಚಾರ ಗರಿಗೆದರುತ್ತಿದೆ. ಅದರೊಂದಿಗೆ ಸ್ಥಳೀಯರು ಹೆಚ್ಚಿನ ಸಂಖ್ಯೆಯಲ್ಲಿ ಅಲ್ಲಿಗೆ ತಲುಪಿ ವಜ್ರ ಬೇಟೆಯಲ್ಲಿ ತೊಡಗಿದ್ದಾರೆ. ಆದರೆ, ಸಿಕ್ಕ ವಜ್ರಗಳು ನಿಜವೋ ಅಲ್ಲವೋ ಎಂಬ ಅನುಮಾನ ಅವರಲ್ಲಿ ಮೂಡಿದೆ. ಹಾಗಾಗಿ ವ್ಯಕ್ತಿಯೊಬ್ಬರು ಆನ್‌ಲೈನ್‌ನಲ್ಲಿ ವಜ್ರ ಅಳತೆ ಮೀಟರ್ ಖರೀದಿಸಿದ್ದಾರೆ. ಅದನ್ನು ತೆಗೆದುಕೊಂಡು ಬಸವಮ್ಮ ವಾಗುವಿಗೆ ಬಂದಿದ್ದಾರೆ. ಅಲ್ಲಿ ದೊರೆತ ಕಲ್ಲನ್ನು ಮೀಟರ್ ಗೆ ಹಾಕಿದಾಗ ಬಿಂದುಗಳ ರೂಪದಲ್ಲಿ ಕಲ್ಲಿನ ಗುಣಮಟ್ಟ ತೋರಿಸುತ್ತಿದೆ!
ಸ್ಫೋಟಕ ಬ್ಯಾಟರ್ಗಳನ್ನು ಪೆವಿಲಿಯನ್ಗಟ್ಟಿದ ಶ್ರೇಯಾಂಕ
ಪೊಲೀಸ್ ಠಾಣೆಗೆ ಬೆಂಕಿ ಹಚ್ಚುತ್ತೇನೆ; ಬಜರಂಗದಳದ ವ್ಯಕ್ತಿಯಿಂದ ಬೆದರಿಕೆ
ಬಸ್ನಲ್ಲಿ 240 ಗ್ರಾಂ ಚಿನ್ನ ಕದ್ದಾಕೆ ಸಿಕ್ಕಿಬಿದ್ದಿದ್ಹೇಗೆ ಗೊತ್ತಾ?
ಹಠವಾದಿ, ಛಲಗಾರ್ತಿ, ಕಿಚ್ಚು ಇತ್ಯಾದಿ; ಅಶ್ವಿನಿ ಗೌಡಗೆ ಸಿಕ್ಕ ಬಿರುದು ನೋಡಿ

