Free power supply: ಉಚಿತ ವಿದ್ಯುತ್ ಪೂರೈಕೆ ಕುರಿತು ಸೃಷ್ಟಿಯಾಗಿರುವ ಗೊಂದಲವನ್ನು ಸರ್ಕಾರ ಕೂಡಲೇ ಪರಿಹರಿಸಬೇಕು, ಎಸ್ಕಾಂ ಸಿಬ್ಬಂದಿ ಅಪಾಯದಲ್ಲಿದೆ!

|

Updated on: May 27, 2023 | 10:18 AM

ಕೆಲ ಗ್ರಾಮಗಳಲ್ಲಿ ಎಸ್ಕಾಂ ಸಿಬ್ಬಂದಿ ಮೇಲೆ ಹಲ್ಲೆ ನಡೆದ ಪ್ರಕರಣಗಳು ಸಹ ವರದಿಯಾಗಿವೆ. ಹಾಗಾಗಿ ಸರ್ಕಾರ ಕೂಡಲೇ ಎಚ್ಚೆತ್ತುಕೊಂಡು ಆದೇಶ ಹೊರಡಿಸಬೇಕಿದೆ.

ಯಾದಗಿರಿ: ಕಾಂಗ್ರೆಸ್ ಪಕ್ಷ ಚುನಾವಣೆ ಸಮಯದಲ್ಲಿ ನೀಡಿದ 5 ಗ್ಯಾರಂಟಿಗಳ (5 guarantees) ಪೈಕಿ ಒಂದಾಗಿರುವ 200 ಯೂನಿಟ್ ಉಚಿತ ವಿದ್ಯುತ್ ಯೋಜನೆ ಕುರಿತು ಜನರಲ್ಲಿ ಉಂಟಾಗಿರುವ ಗೊಂದಲವನ್ನು ಕೂಡಲೇ ದೂರ ಮಾಡಬೇಕಿರುವ ಜರೂರು ಅವಶ್ಯಕತೆ ತಲೆದೋರಿದೆ. ಇಲ್ಲದಿದ್ದರೆ, ಯಾದಗಿರಿ ತಾಲ್ಲೂಕಿನ ಅಬ್ಬೆತುಮಕೂರು ಗ್ರಾಮದಲ್ಲಿ ಇಂದು ಬೆಳಗ್ಗೆ ನಡೆದ ಘಟನೆ ರಾಜ್ಯದ ಎಲ್ಲ ಭಾಗಗಳಲ್ಲಿ ಮರುಕಳಿಸಬಹುದು. ವಿದ್ಯುತ್ ಬಿಲ್ (electricity bill) ಕೇಳಲು ಹೋದ ಜೆಸ್ಕಾಂ (GESCOM) ಸಿಬ್ಬಂದಿಯ ಮೇಲೆ ಗ್ರಾಮದ ಮಹಿಳೆಯರು ಮುಗಿಬಿದ್ದಿದ್ದಾರೆ. ಸರ್ಕಾರವೇ ಬಿಲ್ ಕಟ್ಟಬೇಡಿ ಅಂತ ಹೇಳಿದೆ ಅನ್ನೋದು ಅವರ ವಾದ. ಕೆಲ ಗ್ರಾಮಗಳಲ್ಲಿ ಎಸ್ಕಾಂ ಸಿಬ್ಬಂದಿ ಮೇಲೆ ಹಲ್ಲೆ ನಡೆದ ಪ್ರಕರಣಗಳು ಸಹ ವರದಿಯಾಗಿವೆ. ಹಾಗಾಗಿ ಸರ್ಕಾರ ಕೂಡಲೇ ಎಚ್ಚೆತ್ತುಕೊಂಡು ಆದೇಶ ಹೊರಡಿಸಬೇಕಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ