ವಾಟ್ ಎ ಸೆಲೆಬ್ರೇಷನ್: ದೀಪೇಂದ್ರ ಸಿಂಗ್ ಪಲ್ಟಿಗೆ ಕ್ರಿಕೆಟ್ ಪ್ರೇಮಿಗಳು ಫಿದಾ

Updated on: Oct 09, 2025 | 2:06 PM

ಆರಂಭಿಕನಾಗಿ ಕಣಕ್ಕಿಳಿದ ಆ್ಯಂಟೊ 2 ಸಿಕ್ಸರ್​ಗಳೊಂದಿಗೆ 26 ರನ್ ಬಾರಿಸಿದ್ದರು. ಈ ಹಂತದಲ್ಲಿ ದಾಳಿಗಿಳಿದ ದೀಪೇಂದ್ರ ಸಿಂಗ್ ಅಯಿರಿ ಡೈರೆಕ್ಟ್ ಥ್ರೋ ಮೂಲಕ ರನೌಟ್ ಮಾಡಿ ಆ್ಯಂಟೊ ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು. ಈ ವಿಕೆಟ್ ಸಿಗುತ್ತಿದ್ದಂತೆ ಓಡಿ ಹೋದ ದೀಪೇಂದ್ರ ಸಿಂಗ್ ಅಯಿರಿ ಸಮ್ಮರ್​ಸಾಲ್ಟ್ ಹೊಡೆದು ಸಂಭ್ರಮಿಸಿದರು.

ನೇಪಾಳ ತಂಡದ ಆಟಗಾರ ದೀಪೇಂದ್ರ ಸಿಂಗ್ ಅಯಿರಿ ಅವರ ಸಂಭ್ರಮದ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಹೀಗೆ ವೈರಲ್ ಆಗಲು ಕಾರಣ ಮುಖ್ಯ ಕಾರಣ ದೀಪೇಂದ್ರ ಸಿಂಗ್ ಪಲ್ಟಿ ಹೊಡೆದು ಸಂಭ್ರಮಿಸಿದರು.

ಕುವೈತ್ ವಿರುದ್ಧದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ನೇಪಾಳ ತಂಡವು 20 ಓವರ್​ಗಳಲ್ಲಿ 7 ವಿಕೆಟ್ ಕಳೆದುಕೊಂಡು 141 ರನ್ ಕಲೆಹಾಕಿದ್ದರು. ಈ ಗುರಿ ಬೆನ್ನತ್ತಿದ ಕುವೈತ್ ತಂಡಕ್ಕೆ ಕ್ಲಿಂಟೊ ಆ್ಯಂಟೊ ಉತ್ತಮ ಆರಂಭ ಒದಗಿಸಿದ್ದರು.

ಆರಂಭಿಕನಾಗಿ ಕಣಕ್ಕಿಳಿದ ಆ್ಯಂಟೊ 2 ಸಿಕ್ಸರ್​ಗಳೊಂದಿಗೆ 26 ರನ್ ಬಾರಿಸಿದ್ದರು. ಈ ಹಂತದಲ್ಲಿ ದಾಳಿಗಿಳಿದ ದೀಪೇಂದ್ರ ಸಿಂಗ್ ಅಯಿರಿ ಡೈರೆಕ್ಟ್ ಥ್ರೋ ಮೂಲಕ ರನೌಟ್ ಮಾಡಿ ಆ್ಯಂಟೊ ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು.

ಈ ವಿಕೆಟ್ ಸಿಗುತ್ತಿದ್ದಂತೆ ಓಡಿ ಹೋದ ದೀಪೇಂದ್ರ ಸಿಂಗ್ ಅಯಿರಿ ಸಮ್ಮರ್​ಸಾಲ್ಟ್ ಹೊಡೆದು ಸಂಭ್ರಮಿಸಿದರು. ಇದೀಗ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಭಾರೀ ಮೆಚ್ಚುಗೆಗಳು ವ್ಯಕ್ತವಾಗುತ್ತಿದೆ.

ಇನ್ನು ಈ ಪಂದ್ಯದಲ್ಲಿ ನೇಪಾಳ ತಂಡ ನೀಡಿದ 141 ರನ್​ಗಳ ಗುರಿ ಬೆನ್ನತ್ತಿದ ಕುವೈತ್ ತಂಡವು ಕೇವಲ 83 ರನ್​ಗಳಿಗೆ ಆಲೌಟ್ ಆಗಿದೆ. ಈ ಮೂಲಕ ನೇಪಾಳ ತಂಡ 58 ರನ್​ಗಳ ಭರ್ಜರಿ ಜಯ ಸಾಧಿಸಿದೆ.