ನಿರ್ದೇಶಕ ಗುರುಪ್ರಸಾದ್ ಅಂತ್ಯಕ್ರಿಯೆ ಮುಗಿಸಿ ಹೊರಟ ಮೊದಲ ಪತ್ನಿ, ಮಗಳು
ಎರಡು ಮದುವೆ ಆಗಿದ್ದ ಗುರುಪ್ರಸಾದ್ ಬದುಕಿನಲ್ಲಿ ಸಾಕಷ್ಟು ಗೊಂದಲಗಳು ತುಂಬಿದ್ದವು. ಅನುಮಾನಾಸ್ಪದ ರೀತಿಯಲ್ಲಿ ಅವರ ಸಾವು ಸಂಭವಿಸಿದೆ. ಬೆಂಗಳೂರಿನ ವಿಲ್ಸನ್ ಗಾರ್ಡನ್ ಚಿತಾಗಾರದಲ್ಲಿ ಗುರುಪ್ರಸಾದ್ ಅವರ ಅಂತ್ಯಕ್ರಿಯೆ ನಡೆದಿದೆ. ಭಾನುವಾರ (ನ.3) ಅಂತ್ಯಕ್ರಿಯೆಯಲ್ಲಿ ಮೊದಲ ಪತ್ನಿ, ಮಗಳು ಹಾಗೂ ಎರಡನೇ ಪತ್ನಿ ಭಾಗಿ ಆಗಿದ್ದರು.
ಗುರುಪ್ರಸಾದ್ ಅವರ ಅಂತ್ಯಕ್ರಿಯೆಗೆ ಮೊದಲ ಪತ್ನಿ ಆರತಿ ಹಾಗೂ ಮಗಳು ಹಾಜರಾದರು. ಬಳಿಕ ಅವರು ಭಾರವಾದ ಮನಸ್ಸಿನಿಂದ ವಾಪಸ್ ತೆರಳಿದರು. ಎರಡನೇ ಪತ್ನಿ ಸುಮಿತ್ರಾ ಕೂಡ ಅಂತ್ಯಕ್ರಿಯೆಗೆ ಬಂದು ಕಣ್ಣೀರು ಹಾಕಿದರು. ಪೊಲೀಸರಿಗೆ ಸುಮಿತ್ರಾ ದೂರು ನೀಡಿದ್ದು, ಪತಿಯ ಸಾವಿನ ಬಗ್ಗೆ ಯಾವುದೇ ಅನುಮಾನ ಇಲ್ಲ ಎಂದು ಅವರು ಹೇಳಿದ್ದಾರೆ. ಗುರುಪ್ರಸಾದ್ ನಿಧನಕ್ಕೆ ಕನ್ನಡ ಚಿತ್ರರಂಗದ ಅನೇಕರ ಸಂತಾಪ ಸೂಚಿಸಿದ್ದಾರೆ. ಡಾಲಿ ಧನಂಜಯ್, ಸತೀಶ್ ನೀನಾಸಂ, ಯೋಗರಾಜ್ ಭಟ್, ದುನಿಯಾ ವಿಜಯ್ ಮುಂತಾದವರು ಅಂತಿಮ ನಮನ ಸಲ್ಲಿಸಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.