‘ಪುನೀತ್ಗೆ ಕನ್ನಡ ಬರಲ್ಲ ಅಂತ ಹೇಳಿದ್ದ’: ಗುರುಪ್ರಸಾದ್ ವರ್ತನೆಗೆ ಜಗ್ಗೇಶ್ ಅಸಮಾಧಾನ
ನಿರ್ದೇಶಕ ಗುರುಪ್ರಸಾದ್ ಅವರು ನಿಧನರಾಗಿದ್ದಾರೆ. ಅವರ ಜೊತೆ 3 ಸಿನಿಮಾಗಳಲ್ಲಿ ಕೆಲಸ ಮಾಡಿದ್ದ ಜಗ್ಗೇಶ್ ಅವರು ಕೆಲವು ಗಂಭೀರವಾದ ವಿಚಾರಗಳನ್ನು ಮೆಲುಕು ಹಾಕಿದ್ದಾರೆ. ‘ಕನ್ನಡದ ಕೋಟ್ಯಧಿಪತಿ’ ಕಾರ್ಯಕ್ರಮದ ತಂಡದಲ್ಲಿ ಕೆಲಸ ಮಾಡುತ್ತಾ ಇದ್ದಾಗ ಪುನೀತ್ ಬಗ್ಗೆ ಗುರುಪ್ರಸಾದ್ ಹಬ್ಬಿಸಿದ್ದ ಗಾಸಿಪ್ ಬಗ್ಗೆ ಜಗ್ಗೇಶ್ ಈಗ ಪ್ರಸ್ತಾಪಿಸಿದ್ದಾರೆ.
‘ಪುನೀತ್ಗೆ ಕನ್ನಡವೇ ಮಾತಾಡೋಕೆ ಬರಲ್ಲ ಅಂತ ಗುರುಪ್ರಸಾದ್ ಹೇಳಿಬಿಟ್ಟಿದ್ದ. ತಾನೇ ಅವರಿಗೆ ಕನ್ನಡ ಮಾತಾಡೋಕೆ ಹೇಳಿಕೊಟ್ಟಿದ್ದು ಅಂದಿದ್ದ. ಆ ವಿಷಯವನ್ನು ಪುನೀತ್ ನನ್ನ ಬಳಿ ಹೇಳಿಕೊಂಡು ನೊಂದಿದ್ದರು. ನಾನು ಮತ್ತು ಅವರು ತಿರುಪತಿಗೆ ಹೋಗುವಾಗ ‘ಏನಣ್ಣ ಆ ಮನುಷ್ಯ ಆ ಥರ ಮಾತನಾಡುತ್ತಾನೆ? ನನಗೆ ಕನ್ನಡವೇ ಬರಲ್ಲ ಅಂತ ಎಲ್ಲರ ಬಳಿ ಹೇಳಿದ್ದಾನೆ’ ಅಂತ ಪುನೀತ್ ಬೇಸರ ಮಾಡಿಕೊಂಡು ನನ್ನ ಬಳಿ ಹೇಳಿದ್ದರು. ಆ ರೀತಿಯ ಕಾಂಟ್ರವರ್ಸಿ ವ್ಯಕ್ತಿತ್ವ ಅವನದ್ದು. ರಕ್ಷಿತಾ ಅವರ ಹತ್ತಿರವೇ ಹೋಗುತ್ತಿರಲಿಲ್ಲ’ ಎಂದಿದ್ದಾರೆ ಜಗ್ಗೇಶ್.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Latest Videos