ಮೊದಲ ಅವಕಾಶ ನೀಡಿದ್ದ ಗುರುಪ್ರಸಾದ್ ನಿಧನಕ್ಕೆ ಡಾಲಿ ಧನಂಜಯ ಭಾವುಕ ಮಾತು

ಮೊದಲ ಅವಕಾಶ ನೀಡಿದ್ದ ಗುರುಪ್ರಸಾದ್ ನಿಧನಕ್ಕೆ ಡಾಲಿ ಧನಂಜಯ ಭಾವುಕ ಮಾತು

ಮದನ್​ ಕುಮಾರ್​
|

Updated on: Nov 03, 2024 | 6:59 PM

ಗುರುಪ್ರಸಾದ್ ನಿರ್ದೇಶನ ಮಾಡಿದ್ದ ‘ಡೈರೆಕ್ಟರ್ಸ್​ ಸ್ಪೆಷಲ್’ ಸಿನಿಮಾದಲ್ಲಿ ಮೊದಲ ಬಾರಿಗೆ ಡಾಲಿ ಧನಂಜಯ್ ನಟಿಸಿದ್ದರು. ಆ ಬಳಿಕ ಅವರಿಬ್ಬರ ನಡುವೆ ಒಡನಾಟ ಬೆಳೆದಿತ್ತು. ಇಂದು (ನವೆಂಬರ್​ 3) ಗುರುಪ್ರಸಾದ್ ಅವರ ನಿಧನದ ಸುದ್ದಿ ತಿಳಿದು ಡಾಲಿ ಧನಂಜಯ್ ಅವರು ಅಂತಿಮ ನಮನ ಸಲ್ಲಿಸಲು ಬಂದಿದ್ದಾರೆ. ಈ ವೇಳೆ ಅವರು ಮಾಧ್ಯಮಗಳ ಜೊತೆ ಮಾತನಾಡಿದರು.

ನಟ ಡಾಲಿ ಧನಂಜಯ್ ಅವರು ಗುರುಪ್ರಸಾದ್​ ಅವರಿಗೆ ಅಂತಿಮ ನಮನ ಸಲ್ಲಿಸಿದ್ದಾರೆ. ‘ಇತ್ತೀಚೆಗೆ ಅವರನ್ನು ಭೇಟಿಯಾಗದೇ ಬಹಳ ಗ್ಯಾಪ್ ಆಗಿತ್ತು. ನನ್ನ ‘ಬಡವ ರಾಸ್ಕಲ್’ ಸಿನಿಮಾದಲ್ಲಿ ಅತಿಥಿ ಪಾತ್ರ ಮಾಡಿದ್ದರು. ನನ್ನನ್ನು ಮೊದಲ ಸಿನಿಮಾ ಮೂಲಕ ಪರಿಚಯಿಸಿದ್ದೇ ಅವರು. ಆ ಪ್ರೀತಿ, ಆ ಗೌರವಕ್ಕೋಸ್ಕರ ನಾನು ಇಂದು ಬಂದಿದ್ದೇನೆ. ಅವರು ಕೊಟ್ಟ ಅವಕಾಶಕ್ಕೆ ನಾನು ಚಿರಋಣಿ ಆಗಿರುತ್ತೇನೆ’ ಎಂದು ಡಾಲಿ ಧನಂಜಯ ಹೇಳಿದ್ದಾರೆ. ಅಂತ್ಯ ಸಂಸ್ಕಾರಕ್ಕೆ ವ್ಯವಸ್ಥೆ ಮಾಡಿದ ದುನಿಯಾ ವಿಜಯ್ ಅವರಿಗೂ ಡಾಲಿ ಧನ್ಯವಾದ ಅರ್ಪಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.