ಬಿಗ್​ಬಾಸ್ ಮನೆಯಲ್ಲಿ ತ್ರಿಕೋನ ಪ್ರೇಮಕತೆ, ನಕ್ಕು ಸುಸ್ತಾದ ಮನೆ ಮಂದಿ

ಬಿಗ್​ಬಾಸ್ ಮನೆಯಲ್ಲಿ ತ್ರಿಕೋನ ಪ್ರೇಮಕತೆ, ನಕ್ಕು ಸುಸ್ತಾದ ಮನೆ ಮಂದಿ

ಮಂಜುನಾಥ ಸಿ.
|

Updated on: Nov 03, 2024 | 2:15 PM

ಬಿಗ್​ಬಾಸ್ ಕನ್ನಡ ಸೀಸನ್ 11ರ ಭಾನುವಾರದ ಎಪಿಸೋಡ್ ಸಖತ್ ಮಜವಾಗಿರಲಿದೆ. ವಾರದಲ್ಲಿ ನಡೆದ ಘಟನೆಗಳನ್ನು ವಿಮರ್ಶಿಸಲು ಶನಿವಾರವನ್ನು ಮೀಸಲಿಟ್ಟರೆ, ಭಾನುವಾರವನ್ನು ನಕ್ಕು ಹಗುರಾಗಲೆಂದು ಮೀಸಲಿಡುತ್ತಾರೆ ಸುದೀಪ್. ಈಗ ಮನೆ ಮಂದಿ, ಮನೆಯಲ್ಲಿ ನಡೆಯುತ್ತಿರುವ ತ್ರಿಕೋನ ಪ್ರೇಮಕತೆಯನ್ನು ಮರುಸೃಷ್ಟಿ ಮಾಡಿದ್ದಾರೆ.

ಬಿಗ್​ಬಾಸ್ ಕನ್ನಡ ಸೀಸನ್ 11 ವೇದಿಕೆಗೆ ಸುದೀಪ್ ಮರಳಿದ್ದಾರೆ. ಸುದೀಪ್ ಬಂದರೆಂದರೆ ವಿಮರ್ಶೆ, ವಾದ-ವಿವಾದ, ಚರ್ಚೆಗಳ ಜೊತೆಗೆ ನಗು ಸಹ ಜೋರಾಗಿಯೇ ಇರುತ್ತದೆ. ವೀಕೆಂಡ್ ಎಪಿಸೋಡ್​ಗೆ ಬರುವ ಸುದೀಪ್, ಶನಿವಾರ ವಾರದ ಘಟನೆಗಳನ್ನು ವಿಮರ್ಶಿಸಲು ಮೀಸಲಿಟ್ಟರೆ ಭಾನುವಾರವನ್ನು ನಗುವಿಗೆ ಮೀಸಲಿಡುತ್ತಾರೆ. ನಿನ್ನೆಯ ಶನಿವಾರದ ಎಪಿಸೋಡ್​ನಲ್ಲಿ ವಾರದಲ್ಲಿ ನಡೆದ ಘಟನೆಗಳನ್ನು ವಿಮರ್ಶೆ ಮಾಡಿದರೆ ಭಾನುವಾರ ಮನೆ ಮಂದಿಯನ್ನು ನಕ್ಕು ನಗಿಸಿದ್ದಾರೆ. ಅದರಲ್ಲೂ ಮನೆಯಲ್ಲಿ ನಡೆಯುತ್ತಿರುವ ತ್ರಿಕೋನ ಪ್ರೇಮಕತೆಯನ್ನು ಇತರೆ ಸ್ಪರ್ಧಿಗಳಿಂದ ಮರುಸೃಷ್ಟಿ ಮಾಡಿಸಿದ್ದಾರೆ. ಧನರಾಜ್ ಹಾಗೂ ಉಗ್ರಂ ಮಂಜು ಮಾಡಿರುವ ಕಾಮಿಡಿಗೆ ಸುದೀಪ್ ಸೇರಿದಂತೆ ಮನೆ ಮಂದಿ ನಕ್ಕು ಸುಸ್ತಾಗಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ