ಗುರುಪ್ರಸಾದ್​ಗೆ ಆ ಕಾಯಿಲೆ ಇತ್ತು, ನಾವು ದೂರ ಇರುತ್ತಿದ್ವಿ: ಜಗ್ಗೇಶ್ ಹೇಳಿಕೆ

ಗುರುಪ್ರಸಾದ್​ಗೆ ಆ ಕಾಯಿಲೆ ಇತ್ತು, ನಾವು ದೂರ ಇರುತ್ತಿದ್ವಿ: ಜಗ್ಗೇಶ್ ಹೇಳಿಕೆ

ಮದನ್​ ಕುಮಾರ್​
|

Updated on: Nov 03, 2024 | 4:44 PM

‘ಎರಡು ಒಳ್ಳೆಯ ಕೃತಿಗಳನ್ನು ಕೊಟ್ಟು ಹೋಗಿದ್ದಾನೆ. ಅವನ ಆತ್ಮಕ್ಕೆ ಶಾಂತಿ ಸಿಗಲಿ. ಫೋಟೋ ನೋಡಿ ತುಂಬ ಸಂಕಟ ಆಯಿತು. ಏನೋ ಬ್ಲೀಡಿಂಗ್ ಆಗಿದೆ. ನನಗೆ ಅರ್ಥವೇ ಆಗಿಲ್ಲ. ಒಂಥರಾ ವಿಚಿತ್ರವಾಗಿದೆ’ ಎಂದು ಜಗ್ಗೇಶ್ ಅವರು ಹೇಳಿದ್ದಾರೆ. ಗುರುಪ್ರಸಾದ್ ಜೊತೆಗೆ ಇಷ್ಟು ವರ್ಷ ಒಡನಾಟ ಇದ್ದಿದ್ದಕ್ಕೆ ಅವರ ಮಗುವಿಗೆ ಸಹಾಯ ಮಾಡುವುದಾಗಿ ಜಗ್ಗೇಶ್ ತಿಳಿದ್ದಾರೆ.

ನಿರ್ದೇಶಕ ಗುರುಪ್ರಸಾದ್ ಸಾವಿನ ಬಗ್ಗೆ ಜಗ್ಗೇಶ್ ಮಾತನಾಡಿದ್ದಾರೆ. ‘ಅವನಿಗೆ ಮೈಯೆಲ್ಲ ಕಡಿತ ಬರುತ್ತಲ್ಲ, ಆ ಕಾಯಿಲೆ ಇತ್ತು. ಕೆರೆದುಕೊಂಡಾಗ ಮುಖ, ಮೈಯಲ್ಲಿ ಕೀವು, ರಕ್ತ ಬರುತ್ತಿತ್ತು. ನಾವು ತಿನ್ನುವ ತಟ್ಟೆಗೆ ಕೈ ಹಾಕುತ್ತಿದ್ದ. ನಮಗೆ ಒಂದೇ ಭಯ. ಹಾಗಾಗಿ ಅವನಿಗೆ ಕಾಣದ ರೀತಿಯಲ್ಲಿ ದೂರ ಕುಳಿತುಕೊಂಡು ಊಟ ಮಾಡುತ್ತಿದ್ದೆ. ಚಿಕಿತ್ಸೆಗೆ ಹೋಗು ಎಂದರೆ ಹೋಗುತ್ತಿರಲಿಲ್ಲ. ಇಡೀ ಮೈಯೆಲ್ಲ ಆಗಬೇಕು, ಅದನ್ನು ನೋಡಬೇಕು ಅಂತ ಹೇಳುತ್ತಿದ್ದ. ಅಂಥವರಿಗೆ ಏನು ಹೇಳೋದು? ತಪ್ಪು ಮಾಡಿ, ಮಾನಸಿಕವಾಗಿ ಕುಗ್ಗಿದ್ದ’ ಎಂದು ಜಗ್ಗೇಶ್ ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.