ವಿಜಯೇಂದ್ರ ಸೈಲೆಂಟ್ ಆಗಿಲ್ಲ ಅಂದ್ರೆ ನಾನು ವೈಲೆಂಟ್ ಆಗ್ತೇನೆ: ಶಾಸಕ ಯತ್ನಾಳ್
ವಿಜಯೇಂದ್ರ ಸೈಲೆಂಟ್ ಆಗಿಲ್ಲ ಅಂದ್ರೆ ನಾನು ವೈಲೆಂಟ್ ಆಗುತ್ತೇನೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ. ವಿಜಯಪುರದಲ್ಲಿ ಮಾತನಾಡಿದ ಅವರು, ವಿಜಯೇಂದ್ರ ಯಾವ ಪಕ್ಷ ಕಟ್ಟಿದ್ದಾನಂತೆ ಎಂದು ಕಿಡಿಕಾರಿದ್ದಾರೆ. ಯಡಿಯೂರಪ್ಪ ಒಬ್ಬರೇ ಪಕ್ಷ ಕಟ್ಟಿಲ್ಲ ಎಂದು ಹೇಳಿದ್ದಾರೆ.
ವಿಜಯಪುರ, ನವೆಂಬರ್ 03: ಇಷ್ಟು ದಿನ ನಮ್ಮ ಹಾಗೂ ನಮ್ಮ ಕುಟುಂಬದ ವಿರುದ್ಧ ಮಾತಾಡಿದರೂ ಸೈಲೆಂಟ್ ಇದ್ದೆ, ಮುಂದೆ ಸೈಲೆಂಟ್ ಆಗಿ ಇರಲ್ಲ ಎಂಬ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಎಚ್ಚರಿಕೆ ನೀಡಿರುವ ವಿಚಾರವಾಗಿ ಮಾತನಾಡಿದ ಶಾಸಕ ಯತ್ನಾಳ್ (Basanagouda Patil Yatnal), ವಿಜಯೇಂದ್ರ ಸೈಲೆಂಟ್ ಆಗಿಲ್ಲ ಅಂದ್ರೆ ನಾನು ವೈಲೆಂಟ್ ಆಗುತ್ತೇನೆ ಎಂದು ಹೇಳಿದ್ದಾರೆ. ಬಿಎಸ್ ಯಡಿಯೂರಪ್ಪ ಪಕ್ಷ ಕಟ್ಟದಿದ್ದರೆ ನೀವ್ಯಾರೂ ಇರುತ್ತಿರಲಿಲ್ಲವೆಂದು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಹೇಳಿಕೆಗೆ ಶಾಸಕ ಯತ್ನಾಳ್ ತಿರುಗೇಟು ನೀಡಿದ್ದಾರೆ. ಯಡಿಯೂರಪ್ಪ ಒಬ್ಬರೇ ಪಕ್ಷ ಕಟ್ಟಿಲ್ಲ. ವಾಜಪೇಯಿ, ಅಡ್ವಾಣಿ ಸೇರಿದಂತೆ ಹಲವರು ಪಕ್ಷವನ್ನು ಕಟ್ಟಿದ್ದಾರೆ. ರಾಜ್ಯದಲ್ಲಿ ಬಿ.ಬಿ.ಶಿವಪ್ಪನವರು ಪಕ್ಷ ಕಟ್ಟಿದ್ದಾರೆ. ಪಾಪ ಪಕ್ಷ ಕಟ್ಟಿದ ಅವರನ್ನೆಲ್ಲಾ ಮುಗಿಸಿದ್ದಾರೆ. ಇದರ ಬಗ್ಗೆ ಆಮೇಲೆ ಮಾತನಾಡುತ್ತೇನೆ. ವಿಜಯೇಂದ್ರ ಯಾವ ಪಕ್ಷ ಕಟ್ಟಿದ್ದಾನಂತೆ ಎಂದು ಕಿಡಿಕಾರಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.
ಡಿಕೆ ಶಿವಕುಮಾರ್ ಪದಗ್ರಹಣದ ಬಗ್ಗೆ ಶಿವರಾಜ್ ಕುಮಾರ್ ಮಾತು: ವಿಡಿಯೋ
ಸಚಿವರಾಗಿ ಪ್ರಮಾಣದ ಬೆನ್ನಲ್ಲೇ ತಂದೆ ಸಿದ್ದರಾಮಯ್ಯ ಆಶೀರ್ವಾದ ಪಡೆದ ಯತೀಂದ್ರ
ಡಿಕೆ ಶಿವಕುಮಾರ್ ಸಿಎಂ ಆಗಿದ್ದಕ್ಕೆ ತುಂಬಾ ಖುಷಿ ಆಗುತ್ತಿದೆ: ನಟಿ ರಮ್ಯಾ
ಡಿಕೆಶಿ ಪದಗ್ರಹಣದ ಬೆನ್ನಲ್ಲೇ ವಿಧಾನಸೌಧದಲ್ಲಿ ಬದಲಾದ ಸಿಎಂ ಕಚೇರಿ ನಾಮಫಲಕ

