‘ಮಹಿಳೆ ಧರಿಸುವ ಉಡುಪುಗಳು ರೇಪ್​ಗೆ ಕಾರಣ ಅಲ್ಲ’: ಗ್ಯಾಂಗ್​ ರೇಪ್​ ಪ್ರಕರಣಕ್ಕೆ ಕವಿತಾ ಲಂಕೇಶ್​ ಪ್ರತಿಕ್ರಿಯೆ

| Updated By: ಮದನ್​ ಕುಮಾರ್​

Updated on: Aug 28, 2021 | 9:57 AM

ನಿರ್ದೇಶಕಿ ಕವಿತಾ ಲಂಕೇಶ್​ ಅವರು ಮೈಸೂರು ಸಾಮೂಹಿಕ ಅತ್ಯಾಚಾರದ ಬಗ್ಗೆ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡಿದ್ದಾರೆ. ‘ಯುವತಿಗೆ ನ್ಯಾಯ ಸಿಗಬೇಕು. ಹೋರಾಟಕ್ಕೆ ನಾವೆಲ್ಲ ಇದ್ದೇನೆ’ ಎಂದು ಅವರು ಹೇಳಿದ್ದಾರೆ.

ಮೈಸೂರಿನ ಗ್ಯಾಂಗ್​ ರೇಪ್​ ಪ್ರಕರಣದಿಂದ ಇಡೀ ಸಮಾಜವೇ ತಲೆ ತಗ್ಗಿಸಬೇಕಾಗಿದೆ. ಈ ಘಟನೆ ಕುರಿತು ಅನೇಕ ಅಭಿಪ್ರಾಯಗಳು ಕೇಳಿಬರುತ್ತಿವೆ. ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಹಲವು ಸೆಲೆಬ್ರಿಟಿಗಳು ಈ ಬಗ್ಗೆ ಮಾತನಾಡುತ್ತಿದ್ದಾರೆ. ನಿರ್ದೇಶಕಿ ಕವಿತಾ ಲಂಕೇಶ್​ ಕೂಡ ಸಾಮೂಹಿಕ ಅತ್ಯಾಚಾರದ ಈ ದುರ್ಘಟನೆಯನ್ನು ಖಂಡಿಸಿದ್ದಾರೆ. ಈ ಬಗ್ಗೆ ಅವರು ಟಿವಿ9 ಜೊತೆ ಮಾತನಾಡಿದ್ದು, ‘ಮಹಿಳೆ ಧರಿಸುವ ಉಡುಪುಗಳು ರೇಪ್​ಗೆ ಕಾರಣ ಅಲ್ಲ’ ಎಂದಿದ್ದಾರೆ. ಸಂಪ್ರದಾಯಸ್ಥ ಹೆಣ್ಣುಮಕ್ಕಳು ಭಯಪಡುತ್ತಾರೆ. ಅವರು ಫೈಟ್​ ಮಾಡುವುದಿಲ್ಲ. ಅಂಥವರ ಮೇಲೆ ದಬ್ಬಾಳಿಕೆ ಮಾಡಬಹುದು ಎಂಬ ಕಲ್ಪನೆ ಹಲವರ ತಲೆಯಲ್ಲಿ ಇದೆ. ಅದೇ ಕಾರಣಕ್ಕಾಗಿ ಅಂಥ ಹುಡುಗಿಯರ ಮೇಲೆ ಅತ್ಯಾಚಾರಗಳು ಆಗುತ್ತವೆ ಎಂದು ಕವಿತಾ ಅಭಿಪ್ರಾಯಪಟ್ಟಿದ್ದಾರೆ.

ಗ್ಯಾಂಗ್​ ರೇಪ್​ ಕುರಿತಂತೆ ನಟಿ ರಮ್ಯಾ ಅವರು ಇತ್ತೀಚೆಗೆ ಸೋಶಿಯಲ್​ ಮೀಡಿಯಾದಲ್ಲಿ ದೀರ್ಘವಾದ ಒಂದು ಪೋಸ್ಟ್​ ಮಾಡಿದ್ದರು. ರಮ್ಯಾ ಮಾತುಗಳು ಸರಿಯಾಗಿವೆ ಎಂದು ಕವಿತಾ ಲಂಕೇಶ್​ ಹೇಳಿದ್ದಾರೆ. ಅಪರಾಧಿಗಳಿಗೆ ಶಿಕ್ಷೆ ಆಗಲಿ ಎಂದು ಅವರು ಒತ್ತಾಯಿಸಿದ್ದಾರೆ.

ಇದನ್ನೂ ಓದಿ:

ಗ್ಯಾಂಗ್​ ರೇಪ್​: ಹುಡುಗಿಯದ್ದೇ ತಪ್ಪು ಅನ್ನೋರಿಗೆ ರಮ್ಯಾ ಛೀಮಾರಿ; ಪರಿಸ್ಥಿತಿ ಬದಲಾಗ್ಬೇಕು ಎಂದ ನಟಿ

‘ನಾಳೆ ನಮ್ಮ-ನಿಮ್ಮೆಲ್ಲರ ತಂಗಿ-ತಾಯಿಗೂ ಹೀಗಾಗಬಹುದು; ಎಚ್ಚೆತ್ತುಕೊಳ್ಳಿ’: ಮೈಸೂರು​ ಗ್ಯಾಂಗ್ ರೇಪ್​ಗೆ ಅದಿತಿ ಆಕ್ರೋಶ