‘ವೀರ ಕಂಬಳ’ ಸಿನಿಮಾನಲ್ಲಿ ವೀರೇಂದ್ರ ಹೆಗ್ಗಡೆ ನಟನೆ: ಬೆದರಿಕೆ ಕರೆಗಳು ಬಂದಿದ್ದವು ಎಂದ ನಿರ್ದೇಶಕ ಬಾಬು

Updated on: Feb 26, 2026 | 2:49 PM

Veerendra Heggade movie: ರಾಜೇಂದ್ರ ಸಿಂಗ್ ಬಾಬು ನಿರ್ದೇಶನ ಮಾಡಿರುವ ‘ವೀರ ಕಂಬಳ’ ಸಿನಿಮಾನಲ್ಲಿ ಧರ್ಮಸ್ಥಳ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರು ನಟಿಸಿದ್ದಾರೆ. ಸಿನಿಮಾದ ಬಗ್ಗೆ ಟಿವಿ9 ಜೊತೆಗೆ ಮಾತನಾಡಿರುವ ರಾಜೇಂದ್ರ ಸಿಂಗ್ ಬಾಬು, ಧರ್ಮಾಧಿಕಾರಿಗಳು ನನ್ನ ಸಿನಿಮಾನಲ್ಲಿ ನಟಿಸಿದ್ದಕ್ಕೆ ಕೆಲವರು ನನಗೆ ಬೆದರಿಕೆ ಹಾಕಿದ್ದರು ಎಂದಿದ್ದಾರೆ. ವಿಡಿಯೋ ನೋಡಿ...

ಹಿರಿಯ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು (Rajendra Singh Babu) ಅವರು ‘ವೀರ ಕಂಬಳ’ ಹೆಸರಿನ ಸಿನಿಮಾ ನಿರ್ದೇಶಿಸಿದ್ದು, ಈ ಸಿನಿಮಾ ಕಂಬಳ ಕ್ರೀಡೆಯ ಕುರಿತಾದ ಕತೆಯನ್ನು ಒಳಗೊಂಡಿದೆ. ಸಿನಿಮಾನಲ್ಲಿ ಆದಿತ್ಯ ಸೇರಿದಂತೆ ಹಲವರು ನಟಿಸಿದ್ದಾರೆ. ಸಿನಿಮಾನಲ್ಲಿ ಧರ್ಮಸ್ಥಳ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರು ಸಹ ನಟಿಸಿದ್ದಾರೆ. ಈ ಬಗ್ಗೆ ಟಿವಿ9 ಜೊತೆಗೆ ಮಾತನಾಡಿರುವ ರಾಜೇಂದ್ರ ಸಿಂಗ್ ಬಾಬು, ‘ಕ್ಲೈಮ್ಯಾಕ್ಸ್​​ನಲ್ಲಿ ಸಂದೇಶ ನೀಡುವ ಪಾತ್ರವೊಂದು ಬೇಕಾಗಿತ್ತು, ಆ ಪಾತ್ರ ಬಹಳ ಘನವಾದ ಪಾತ್ರ ಆಗಿರಬೇಕಿತ್ತು, ನನಗೆ ಹೆಗ್ಗಡೆ ಅವರು ಚಿಕ್ಕದ್ದಿನಿಂದ ಪರಿಚಯ, ಒಟ್ಟಿಗೆ ಕ್ರಿಕೆಟ್ ಆಡಿದ್ದೆವು, ಹಾಗಾಗಿ ನಾನು ಕೇಳಿದೆ ಅವರೂ ಸಹ ಒಪ್ಪಿಕೊಂಡರು. ಆದರೆ ಕೆಲ ತಿಂಗಳ ಹಿಂದೆ ಕೆಲವರು ಕರೆ ಮಾಡಿ, ಹೆಗ್ಗಡೆ ಅವರು ನಟಿಸಿರುವ ಸೀನ್ ಅನ್ನು ತೆಗೆದು ಹಾಕಬೇಕು ಎಂದು ಬೆದರಿಕೆ ಹಾಕಿದರು. ಆದರೆ ನಾನು ಯಾವುದಕ್ಕೂ ಮಣಿಯಲಿಲ್ಲ’ ಎಂದಿದ್ದಾರೆ. ರಾಜೇಂದ್ರ ಸಿಂಗ್ ಬಾಬು ಹೇಳಿರುವುದೇನು? ವಿಡಿಯೋ ನೋಡಿ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Feb 26, 2026 11:44 AM
Follow Us