Video: ಹಾಡಹಗಲಲ್ಲಿ ಮುಸ್ಲಿಂ ವ್ಯಕ್ತಿಯಿಂದ ಹಿಂದೂ ಯುವತಿಯ ಅಪಹರಣ

Updated on: Jul 31, 2025 | 7:52 AM

ಹಾಡಹಗಲಲ್ಲಿ ವ್ಯಕ್ತಿಯೊಬ್ಬ ಯುವತಿಯ ಅಪಹರಿಸಿರುವ ಘಟನೆ ಬಿಹಾರದ ದರ್ಭಂಗಾದಲ್ಲಿ ನಡೆದಿದೆ. ಈ ಘಟನೆ ಜುಲೈ 29 ರಂದು ಅಲಿನಗರ ಪೊಲೀಸ್ ಠಾಣೆ ವ್ಯಾಪ್ತಿಯ ಹಾತ್‌ಗಚಿ ಗ್ರಾಮದಲ್ಲಿ ನಡೆದಿರುವುದಾಗಿ ವರದಿಯಾಗಿದೆ. ಆರೋಪಿ ಹಿಜ್ಬುಲ್ ರೆಹಮಾನ್ ಅಲಿಯಾಸ್ ಅರ್ಜೂ, ಲಕ್ಷ್ಮಿ ಕುಮಾರಿ ಎಂಬಾಕೆಯನ್ನು ಬಲವಂತವಾಗಿ ಬೈಕ್​​ನಲ್ಲಿ ಹೊತ್ತೊಯ್ದಿರುವ ಘಟನೆ ನಡೆದಿದೆ. ರೆಹಮಾನ್ ಮೊದಲು ಯುವತಿಯ ಮುಂದೆ ಬೈಕ್​ ನಿಲ್ಲಿಸಿ ಬಲವಂತವಾಗಿ ಬೈಕ್​​ನಲ್ಲಿ ಎಳೆದು ಕೂರಿಸಿಕೊಂಡು ಅಲ್ಲಿಮದ ಪರಾರಿಯಾಗಿದ್ದಾನೆ.

ಬಿಹಾರ, ಜುಲೈ 31: ಹಾಡಹಗಲಲ್ಲಿ ವ್ಯಕ್ತಿಯೊಬ್ಬ ಯುವತಿಯ ಅಪಹರಿಸಿರುವ ಘಟನೆ ಬಿಹಾರದ ದರ್ಭಂಗಾದಲ್ಲಿ ನಡೆದಿದೆ. ಈ ಘಟನೆ ಜುಲೈ 29 ರಂದು ಅಲಿನಗರ ಪೊಲೀಸ್ ಠಾಣೆ ವ್ಯಾಪ್ತಿಯ ಹಾತ್‌ಗಚಿ ಗ್ರಾಮದಲ್ಲಿ ನಡೆದಿರುವುದಾಗಿ ವರದಿಯಾಗಿದೆ. ಆರೋಪಿ ಹಿಜ್ಬುಲ್ ರೆಹಮಾನ್ ಅಲಿಯಾಸ್ ಅರ್ಜೂ, ಲಕ್ಷ್ಮಿ ಕುಮಾರಿ ಎಂಬಾಕೆಯನ್ನು ಬಲವಂತವಾಗಿ ಬೈಕ್​​ನಲ್ಲಿ ಹೊತ್ತೊಯ್ದಿರುವ ಘಟನೆ ನಡೆದಿದೆ.
ರೆಹಮಾನ್ ಮೊದಲು ಯುವತಿಯ ಮುಂದೆ ಬೈಕ್​ ನಿಲ್ಲಿಸಿ ಬಲವಂತವಾಗಿ ಬೈಕ್​​ನಲ್ಲಿ ಎಳೆದು ಕೂರಿಸಿಕೊಂಡು ಅಲ್ಲಿಮದ ಪರಾರಿಯಾಗಿದ್ದಾನೆ.

ಆತ ಬೈಕ್ ತಂದು ನಿಲ್ಲಿಸಿದಾಗ ಆಕೆ ವಾಪಸ್ ಅಲ್ಲಿಂದ ಹಿಂದೆ ಓಡಲು ಮುಂದಾಗುತ್ತಾಳೆ ಆದರೆ ಆತ ಆಕೆಯನ್ನು ಬಲವಂತವಾಗಿ ಎಳೆದೊಯ್ಯುತ್ತಾನೆ. ಜುಲೈ 27ರಂದು ಲಕ್ಷ್ಮಿ ತಂದೆಯ ಪಾನ್ ಅಂಗಡಿ ಹಾಗೂ ಮನೆ ಮುಂದೆ ಬಂದು ಗಲಾಟೆ ಮಾಡಿದ್ದ, ಯುವತಿ ತಂದೆ ಹಾಗೂ ಆ ವ್ಯಕ್ತಿ ನಡುವೆ ಭಿನ್ನಾಭಿಪ್ರಾಯವಿತ್ತು. ಜುಲೈ 28 ರಂದು ಅಲಿನಗರ ಪೊಲೀಸ್ ಠಾಣೆಯಲ್ಲಿ ಪೊಲೀಸ್ ದೂರು ದಾಖಲಿಸಿದ್ದರೂ ಯಾವುದೇ ಕ್ರಮ ಕೈಗೊಳ್ಳದ ಕಾರಣ ಮರುದಿನ ಅಪಹರಣಕ್ಕೆ ಕಾರಣವಾಯಿತು ಎಂದು ಆರೋಪಿಸಿದ್ದಾರೆ.ಪೊಲೀಸರು ರೆಹಮಾನ್​​ನನ್ನು ಬಂಧಿಸಿದ್ದಾರೆ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ