ಹಿಂದೂಗಳ ಜಾತ್ರೆಯಲ್ಲಿ ಮುಸ್ಲಿಮರಿಂದ ಆರೇಂಜ್ ಜ್ಯೂಸ್ ವಿತರಣೆ; ವಿಡಿಯೋ ವೈರಲ್

|

Updated on: May 16, 2023 | 10:16 AM

ಧಾರವಾಡ ತಾಲೂಕಿನ ಮುಗದ ಗ್ರಾಮದ ಕಲ್ಮೇಶ್ವರ ದೇವರ ಜಾತ್ರೆಯಲ್ಲಿ ಮುಸ್ಲಿಂ ಸಮುದಾಯದವರಿಂದ ಆರೇಂಜ್ ಜ್ಯೂಸ್ ವಿತರಣೆ ಮಾಡಲಾಗುತ್ತಿದ್ದು, ಈ ಮೂಲಕ ಮುಗದ ಗ್ರಾಮ ಭಾವೈಕ್ಯತೆಗೆ ಸಾಕ್ಷಿಯಾಗಿದೆ.

ಧಾರವಾಡ: ತಾಲೂಕಿನ ಮುಗದ ಗ್ರಾಮದ ಕಲ್ಮೇಶ್ವರ ದೇವರ ಜಾತ್ರೆಯಲ್ಲಿ ಮುಸ್ಲಿಂ(Muslims) ಸಮುದಾಯದವರಿಂದ ಆರೇಂಜ್ ಜ್ಯೂಸ್ ವಿತರಣೆ ಮಾಡಲಾಗುತ್ತಿದೆ. ಹೌದು 40 ವರ್ಷಗಳ ಬಳಿಕ ಜಾತ್ರೆ ನಡೆಯುತ್ತಿದ್ದು, ರಥೋತ್ಸವದ ಮೆರವಣಿಗೆಯಲ್ಲಿ ಆರೇಂಜ್ ಜ್ಯೂಸ್ ವಿತರಣೆ ಮಾಡುವ ಮೂಲಕ ಮುಗದ ಗ್ರಾಮ ಭಾವೈಕ್ಯತೆಗೆ ಸಾಕ್ಷಿಯಾಗಿದೆ. ರಾಜ್ಯದಲ್ಲಿ ಹಿಂದೂ ಮುಸ್ಲಿಂ(Hindu Muslims)ಗಲಾಟೆ ಜೋರಾಗಿದ್ದು, ಹಿಂದೂಗಳ ಜಾತ್ರೆಯಲ್ಲಿ ಮುಸ್ಲಿಂರಿಗೆ ವ್ಯಾಪಾರ ನಿಷೇದ, ಹಿಜಾಬ್​ ಗಲಾಟೆ ಇಂತಹ ಘಟನೆಗಳ ಮಧ್ಯೆ ಇದೀಗ ಧಾರವಾಡ ತಾಲೂಕು ಭಾವೈಕ್ಯತೆಗೆ ಸಾಕ್ಷಿಯಾಗಿದೆ.

ಇನ್ನಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow us on