ಜನಸ್ಪಂದನಾ ಕಾರ್ಯಕ್ರಮ: ಅಂಧ ದಂಪತಿಯ ಮನವಿ ಆಲಿಸಿ ಅವರು ಹೊರಡುವಾಗ ನೋಟುಗಳನ್ನು ನೀಡಿದ ಡಿಕೆ ಶಿವಕುಮಾರ್

|

Updated on: Jan 06, 2024 | 4:37 PM

ಅವರ ಮನವಿಯನ್ನು ಸ್ವೀಕರಿಸಿ ಜಿಲ್ಲಾಧಿಕಾರಿಗಳಿಗೆ ನೋಟ್ ಹಾಕುವ ಶಿವಕುಮಾರ್, ಡಿಸಿ ಸಾಹೇಬರು ಕಾರ್ಡನ್ನು ನಿನ್ನ ಮನೆಗೆ ಕಳಿಸುತ್ತಾರೆ, ಚಿಂತೆ ಬೇಡ ಅಂತ ಹೇಳಿ ಮಹಿಳೆ ಹೊರಡಲನುವಾದಾಗ ತಮ್ಮ ಜೇಬಿಂದ ಒಂದಷ್ಟು ಕರೆನ್ಸಿ ಮೋಟುಗನ್ನು ತೆಗೆದು ಆಕೆಯ ಕೈಗೆ ಕೊಡುತ್ತಾರೆ.

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಬರುವ ವಿಧಾನಸಭಾ ಕ್ಷೇತ್ರಗಳಲ್ಲಿ ಜನಸ್ಪಂದನಾ ಕಾರ್ಯಕ್ರಮ (Janaspandana programme) ನಡೆಸುತ್ತಿರುವ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ನಾವು ನಿನ್ನೆ ಹೇಳಿದ ಹಾಗೆ ತಮ್ಮ ಮಾನವೀಯ ಮುಖವನ್ನು ಪ್ರದರ್ಶಿಸುತ್ತಿದ್ದಾರೆ. ಶುಕ್ರವಾರ ಬ್ಯಾಟರಾಯನಪುರ,ದಾಸರಹಳ್ಳಿ ಮತ್ತು ಯಲಹಂಕ ಕ್ಷೇತ್ರಗಳಲ್ಲಿನ ಜನನ ದೂರು ಆಲಿಸಿದ್ದ ಶಿವಕುಮಾರ್, ಇಂದು ಶಿವಾಜಿನಗರ ಮತ್ತು ಹೆಬ್ಬಾಳ ವಿಧಾನಸಭಾ ಕ್ಷೇತ್ರಗಳ ಜನರ ಸಮಸ್ಯೆಗಳನ್ನು ಹಲಸೂರಿನ ಕಾಲೇಜೊಂದರ ಮೈದಾನದಲ್ಲಿ ಏರ್ಪಡಿಸಲಾಗಿದ್ದ ಕಾರ್ಯಕ್ರಮದಲ್ಲಿ ಅಲಿಸಿದರು. ಯಲಹಂಕ ನ್ಯೂ ಟೌನ್ ನಿಂದ ವಯಸ್ಸಾದ ಅಂಧ ದಂಪತಿ (visually impaired couple) ತಮಗೆ ಬಿಪಿಎಲ್ ಕಾರ್ಡ್ ಬೇಕಿದೆಯೆಂದು ಮನವಿ ಮಾಡುತ್ತಿರುವುದನ್ನು ದೃಶ್ಯಗಳಲ್ಲಿ ನೋಡಬಹುದು. ವಿಡಿಯೋದಲ್ಲಿ ಮಹಿಳೆ ಮಾತ್ರ ಕಾಣುತ್ತಾರೆ. ಅವರ ಮನವಿಯನ್ನು ಸ್ವೀಕರಿಸಿ ಜಿಲ್ಲಾಧಿಕಾರಿಗಳಿಗೆ ನೋಟ್ ಹಾಕುವ ಶಿವಕುಮಾರ್, ಡಿಸಿ ಸಾಹೇಬರು ಕಾರ್ಡನ್ನು ನಿನ್ನ ಮನೆಗೆ ಕಳಿಸುತ್ತಾರೆ, ಚಿಂತೆ ಬೇಡ ಅಂತ ಹೇಳಿ ಮಹಿಳೆ ಹೊರಡಲನುವಾದಾಗ ತಮ್ಮ ಜೇಬಿಂದ ಒಂದಷ್ಟು ಕರೆನ್ಸಿ ಮೋಟುಗನ್ನು ತೆಗೆದು ಆಕೆಯ ಕೈಗೆ ಕೊಡುತ್ತಾರೆ. ವಿಡಿಯೋದಲ್ಲಿ ಶಿವಾಜಿನಗರ ಕಾಂಗ್ರೆಸ್ ಶಾಸಕ ರಿಜ್ವಾನ್ ಅರ್ಷದ್ ಸಹ ಕಾಣುತ್ತಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow us on