ಕಾಂಗ್ರೆಸ್ ಇಲ್ಲವಾಗಲಿದೆ ಎಂದು ಹೇಳುವ ಹೆಚ್ ಡಿ ದೇವೇಗೌಡರು ಮೊದಲು ತಮ್ಮ ಪಕ್ಷದ ಬಗ್ಗೆ ಯೋಚಿಸಲಿ: ಪ್ರಿಯಾಂಕ್ ಖರ್ಗೆ
ಲೋಕಸಭಾ ಚುನಾವಣೆಯ ಬಳಿಕ ಜೆಡಿಎಸ್ ಪಕ್ಷದ ಭವಿಷ್ಯ ಏನಾಗಲಿದೆ ಅನ್ನೋದನ್ನು ದೇವೇಗೌಡರು ಯೋಚನೆ ಮಾಡಿದಂತಿಲ್ಲ, ಅವರ ಪಕ್ಷದ ಎಷ್ಟು ಸದಸ್ಯರು ಹೊರಬೀಳಲಿದ್ದಾರೆ ಅಂತ ಅವರು ತಿಳಿಯುವ ಬದಲು ಕಾಂಗ್ರೆಸ್ ಮುಳುಗಿ ಹೋಗಲಿದೆ ಅಂತ ಹೇಳುವುದು ಅಸಮಂಜಸ ಎನಿಸುತ್ತದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.
ಕಲಬುರಗಿ: ನಗರದಲ್ಲಿಂದು ಪತ್ರಿಕಾ ಗೋಷ್ಟಿ ನಡೆಸಿದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ಬಹಳ ಲಹರಿಯಲ್ಲಿ ಜೋಕ್ ಗಳನ್ನು ಕಟ್ ಮಾಡುತ್ತಾ ಮಾತಾಡಿದರು. ಗೃಹ ಸಚಿವ ಪರಮೇಶ್ವರ್ (G Parameshwar) ಮನೆಯಲ್ಲಿ ನಡೆದ ಡಿನ್ನರ್ ಮೀಟಿಂಗ್ (dinner meeting) ನಡೆದ ಮಾತುಕತೆಯೇನು ಅಂತ ಪತ್ರಕರ್ತರೊಬ್ಬರು ಕೇಳಿದರೆ, ಗೊತ್ತಿಲ್ಲ ಸರ್, ನಾನು ಊಟಕ್ಕೆ ಹೋಗಿರಲಿಲ್ಲ, ನನಗೆ ಆಹ್ವಾನವಿರಲಿಲ್ಲ ಎಂದಾಗ ಅವರ ಜೊತೆ ಕೂತಿದ್ದ ವಿಧಾನ ಪರಿಷತ್ ಸದಸ್ಯರಾದ ಅಲ್ಲಮ ಪ್ರಭು ಪಾಟೀಲ್ ಮತ್ತು ತಿಪ್ಪಣ್ಣಪ್ಪ ಕಮಕ್ನೂರ್ ಜೊತೆ ಮಾಧ್ಯಮ ಪ್ರತಿನಿಧಿಗಳು ಸಹ ಜೋರಾಗಿ ನಕ್ಕರು. ನಿನ್ನೆ ಬೆಂಗಳೂರಲ್ಲಿ ನಡೆದ ಜೆಡಿಎಸ್ ಪಕ್ಷದ ಸುದ್ದಿಗೋಷ್ಟಿಯಲ್ಲಿ ಮಾಜಿ ಪ್ರಧಾನ ಮಂತ್ರಿ ಹೆಚ್ ಡಿ ದೇವೇಗೌಡ ಅವರು, ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಜೊತೆಗೂಡಿ ಕಾಂಗ್ರೆಸ್ ಪಕ್ಷವನ್ನು ಮುಗಿಸಲಿದ್ದಾರೆಂದು ಹೇಳಿದ್ದನ್ನು ಅವರ ಗಮನಕ್ಕೆ ತಂದಾಗ, ಮೊದಲು ಅವರು ತಮ್ಮ ಪಕ್ಷದ ಬಗ್ಗೆ ಯೋಚನೆ ಮಾಡಲಿ, ಅವರು ಹೇಗೆ ಮುಖ್ಯಮಂತ್ರಿಯಾದರು, ಸಂಸದರಾದರು ಅನ್ನೊದನ್ನು ಇತಿಹಾಸದ ಪುಟಗಳನ್ನು ತಿರುವಿ ನೋಡಲಿ ಎಂದು ಹೇಳಿದ ಖರ್ಗೆ, ಕಾಂಗ್ರೆಸ್ ಪಕ್ಷಕ್ಕೆ 138 ವರ್ಷಗಳ ಇತಿಹಾಸವಿದೆ, ಹಿಂದೆಯೂ ಬಹಳ ಜನ ಪಕ್ಷದ ಅಸ್ತಿತ್ವ ಇಲ್ಲದಂತಾಗುತ್ತದೆ ಅಂತ ಹೇಳಿದ್ದರು ಆದರೆ ಕಾಂಗ್ರೆಸ್ ಸುಭದ್ರವಾಗಿದೆ ಎಂದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ