Loading video

ಕೊಲ್ಲೂರು ಮೂಕಾಂಬಿಕಾ ದರ್ಶನಕ್ಕಾಗಿ ಬೈಂದೂರಿಗೆ ಹೆಲಿಕಾಪ್ಟರ್​ನಲ್ಲಿ ಆಗಮಿಸಿದ ಡಿಕೆ ಶಿವಕುಮಾರ್

|

Updated on: Nov 21, 2024 | 12:26 PM

ಅರೆ ಶಿರೂರು ಹೆಲಿಪ್ಯಾಡ್ ನಲ್ಲಿ ಕೆಲವು ಗಣ್ಯರು, ಪಕ್ಷದ ಕಾರ್ಯಕರ್ತರು ಮತ್ತು ಅಧಿಕಾರಿಗಳು ಶಿವಕುಮಾರ್​ರನ್ನು ಸ್ವಾಗತಿಸಲು ನೆರೆದಿದ್ದರು. ಸಚಿವ ಮಂಕಾಳೆ ವೈದ್ಯ, ಮಾಜಿ ಶಾಸಕ ಗೋಪಾಲ ಪೂಜಾರಿ ಮತ್ತು ಉದ್ಯಮಿ ಬಿಬಿ ಶೆಟ್ಟಿ ಮೊದಲಾದವರನ್ನು ದೃಶ್ಯಗಳಲ್ಲಿ ನೋಡಬಹುದು.

ಉಡುಪಿ: ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಲು ರಾಜ್ಯದ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಇಂದು ಜಿಲ್ಲೆಯ ಬೈಂದೂರಿಗೆ ಹೆಲಿಕಾಪ್ಟರ್​ನಲ್ಲಿ ಆಗಮಿಸಿದರು. ಅವರನ್ನು ಹೊತ್ತ ಚಾಪರ್ ಬೈಂದೂರಿನ ಅರೆ ಶಿರೂರು ಹೆಲಿಪ್ಯಾಡ್​ನಲ್ಲಿ ಲ್ಯಾಂಡ್ ಅಗಿರುವುದನ್ನು ದೃಶ್ಯಗಳಲ್ಲಿ ನೋಡಬಹುದು. ಬೆಂಗಳೂರುನಿಂದ ಬೈಂದೂರುವರೆಗೆ ಬಂದಿರುವ ಶಿವಕುಮಾರ್ ಅವರಿಗೆ ತಮ್ಮ ಟ್ರಿಪ್ ಶೆಡ್ಯೂಲ್ ಗೊಂದಲ ಹುಟ್ಟಿಸಿದಂತಿದೆ. ಹೆಲಿಕಾಪ್ಟರ್ ನಲ್ಲಿ ಕೂತೇ ಅವರು ಮೊದಲು ಮುರುಡೇಶ್ವರನಾ ಅಥವಾ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನವಾ ಅಂತ ವಿಚಾರಿಸುತ್ತಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಮನೆಯಲ್ಲಿ ಸಲಗೆನಾ.. ಇಲ್ಲಾ ಸ್ಟ್ರೀಕ್ಟಾ? ವಿದ್ಯಾರ್ಥಿನಿ ಪ್ರಶ್ನೆಗೆ ಡಿಕೆ ಶಿವಕುಮಾರ್ ಉತ್ತರ ಹೀಗಿದೆ