AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Karnataka Assembly Polls: ಡಿಕೆ ಶಿವಕುಮಾರ್ ಹಿಂದಿ ಭಾಷೆಯಲ್ಲಿ ಮಾತಾಡಲಾರರು ಆದರೆ ಪತ್ನಿ ಉಷಾ ಶಿವಕುಮಾರ್ ಮಾತಾಡುತ್ತಾರೆ!

Karnataka Assembly Polls: ಡಿಕೆ ಶಿವಕುಮಾರ್ ಹಿಂದಿ ಭಾಷೆಯಲ್ಲಿ ಮಾತಾಡಲಾರರು ಆದರೆ ಪತ್ನಿ ಉಷಾ ಶಿವಕುಮಾರ್ ಮಾತಾಡುತ್ತಾರೆ!

ಅರುಣ್​ ಕುಮಾರ್​ ಬೆಳ್ಳಿ
| Edited By: |

Updated on:May 11, 2023 | 5:12 PM

Share

ನಿಮ್ಮ ಪತಿ ರಾಜ್ಯದ ಮುಖ್ಯಮಂತ್ರಿಯಾಗುತ್ತಾರಾ ಅಂತ ಕೇಳಿದ ಪ್ರಶ್ನೆಗೆ ಅವರು ಮುಗಳ್ನಗುತ್ತಾ, ಅದರ ಬಗ್ಗೆ ತನಗೇನೂ ಗೊತ್ತಿಲ್ಲ, ಹೈಕಮಾಂಡ್ ನಿರ್ಧಾರ ತೆಗೆದುಕೊಳ್ಳುತ್ತದೆ ಎಂದು ಉಷಾ ಹೇಳಿದರು.

ರಾಮನಗರ: ಡಿಕೆ ಶಿವಕುಮಾರ್ (DK Shivakumar) ಕನ್ನಡ ಮತ್ತು ಇಂಗ್ಲಿಷ್ ಭಾಷೆಯಲ್ಲಿ ಮಾತಾಡುವುದನ್ನು ನಾವು ಕೇಳಿಸಿಕೊಳ್ಳುತ್ತಿರುತ್ತೇವೆ. ಅವರು ಹಿಂದಿ ಭಾಷೆಯಲ್ಲಿ (Hindi language) ಮಾತಾಡಿದ್ದು? ಊಹುಂ, ಕೇಳಿಸಿಕೊಂಡಿಲ್ಲ. ಆದರೆ, ಅವರ ಪತ್ನಿ ಉಷಾ ಶಿವಕುಮಾರ್ (Usha Shivakumar) ನಿರರ್ಗಳವಾಗಿ ಅಲ್ಲದಿದ್ದರೂ ತಪ್ಪಿಲ್ಲದೆ ಮಾತಾಡುತ್ತಾರೆ. ಇಂದು ಕನಕಪುರದಲ್ಲಿರುವ ಶಿವಕುಮಾರ್ ಸ್ವಗ್ರಾಮ ದೊಡ್ಡಲಹಳ್ಳಿಯಲ್ಲಿ ಮತದಾನ ಮಾಡಿದ ಬಳಿಕ ಅವರು ಎಎನ್ ಐ ವರದಿಗಾರ ಹಿಂದಿಯಲ್ಲಿ ಕೇಳಿದ ಪ್ರಶ್ನೆಗಳಿಗೆ ಹಿಂದಿ ಭಾಷೆಯಲ್ಲೇ ಉತ್ತರಿಸಿದರು. ನಿಮ್ಮ ಪತಿ ರಾಜ್ಯದ ಮುಖ್ಯಮಂತ್ರಿಯಾಗುತ್ತಾರಾ ಅಂತ ಕೇಳಿದ ಪ್ರಶ್ನೆಗೆ ಅವರು ಮುಗಳ್ನಗುತ್ತಾ, ಅದರ ಬಗ್ಗೆ ತನಗೇನೂ ಗೊತ್ತಿಲ್ಲ, ಹೈಕಮಾಂಡ್ ನಿರ್ಧಾರ ತೆಗೆದುಕೊಳ್ಳುತ್ತದೆ ಎಂದು ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮತ್ತಷ್ಟು ಚುನಾವಣಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: May 10, 2023 06:31 PM