ಪಕ್ಷ ಬಿಟ್ಟುಹೋದವರನ್ನು ಪುನಃ ಪಕ್ಷಕ್ಕೆ ಸೇರಿಸಿಕೊಳ್ಳುವ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಸ್ಪಷ್ಟ ನಿಲುವು ಪ್ರಕಟಿಸಲಿಲ್ಲ!

|

Updated on: Aug 15, 2023 | 5:36 PM

ಬಿಟ್ಟು ಹೋದವರಲ್ಲಿ ಯಾರೊಬ್ಬರೂ ತನ್ನನ್ನು ಸಂಪರ್ಕಿಸಿಲ್ಲ, ಆದರೆ ತಾವು ಮಿನಿಸ್ಟ್ರಾಗಿರುವುದರಿಂದ ಎಲ್ಲರನ್ನು ಜೊತೆ ಸೇರಿಸಿಕೊಂಡು ಹೋಗಬೇಕಿದೆ ಎಂದು ಹೇಳಿದರು. ಸದ್ಯಕ್ಕಂತೂ ಅಂಥ ಸ್ಥಿತಿ ತಲೆದೋರಿಲ್ಲ, ಆದರೆ ತಮ್ಮ ಕಾರ್ಯಕರ್ತರಿಗೆ ವೋಟ್ ಬೇಸ್ ಹೆಚ್ಚಿಸುವಂತೆ ಹೇಳಿರುವುದಾಗಿ ಅವರು ಹೇಳಿದರು.

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯನವರ (CM Siddaramaiah) ಜೊತೆ ಹೋಟೆಲೊಂದರಲ್ಲಿ ಮಧ್ಯಾಹ್ನದ ಭೋಜನ ಸೇವಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತಾಡಿದ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar); ಕಾಂಗ್ರೆಸ್ ಬಿಟ್ಟು ಬಿಜೆಪಿ (BJP ) ಸೇರಿದ್ದ ನಾಯಕರಲ್ಲಿ ಕೆಲವರು ಪಕ್ಷಕ್ಕೆ ಮರಳುವ ಇಂಗಿತ ವ್ಯಕ್ತಪಡಿಸುತ್ತಿರುವುದರಿಂದ ಅವರನ್ನು ಪುನಃ ಪಕ್ಷಕ್ಕೆ ಸೇರಿಸಿಕೊಳ್ಳುವ ಇರಾದೆ ಇದೆಯೇ ಅಂತ ಕೇಳಿದ ಹೌದು ಅಥವಾ ಇಲ್ಲ ಅಂತ ಉತ್ತರ ಕೊಡದೆ, ಗೋಡೆಯ ಮೇಲೆ ದೀಪವಿಟ್ಟಂತೆ ಮಾತಾಡಿದರು. ಬಿಟ್ಟು ಹೋದವರಲ್ಲಿ ಯಾರೊಬ್ಬರೂ ತನ್ನನ್ನು ಸಂಪರ್ಕಿಸಿಲ್ಲ, ಆದರೆ ತಾವು ಮಿನಿಸ್ಟ್ರಾಗಿರುವುದರಿಂದ ಎಲ್ಲರನ್ನು ಜೊತೆ ಸೇರಿಸಿಕೊಂಡು ಹೋಗಬೇಕಿದೆ ಎಂದು ಹೇಳಿದರು. ಸದ್ಯಕ್ಕಂತೂ ಅಂಥ ಸ್ಥಿತಿ ತಲೆದೋರಿಲ್ಲ, ಆದರೆ ತಮ್ಮ ಕಾರ್ಯಕರ್ತರಿಗೆ ವೋಟ್ ಬೇಸ್ ಹೆಚ್ಚಿಸುವಂತೆ ಹೇಳಿರುವುದಾಗಿ ಅವರು ಹೇಳಿದರು. ಕೇಳಿದ ಪ್ರಶ್ನೆ ಮತ್ತು ವೋಟ್ ಬೇಸ್ ಹೆಚ್ಚಿಸುವ ನಡುವೆ ಅದೆಂಥ ಸಂಬಂಧವಿದೆಯೋ?

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ