ಬಸನಗೌಡ ಯತ್ನಾಳ್ ಕನಸು ಕಾಣುತ್ತಿದ್ದಾರೆ, ಕಾಂಗ್ರೆಸ್ ಪಕ್ಷದ ಬಗ್ಗೆ ಮಾತಾಡುವ ಯೋಗ್ಯತೆ ಅವರಿಗಿಲ್ಲ: ಶಿವರಾಜ ತಂಗಡಗಿ, ಸಚಿವ

ಬಸನಗೌಡ ಯತ್ನಾಳ್ ಕನಸು ಕಾಣುತ್ತಿದ್ದಾರೆ, ಕಾಂಗ್ರೆಸ್ ಪಕ್ಷದ ಬಗ್ಗೆ ಮಾತಾಡುವ ಯೋಗ್ಯತೆ ಅವರಿಗಿಲ್ಲ: ಶಿವರಾಜ ತಂಗಡಗಿ, ಸಚಿವ

ಅರುಣ್​ ಕುಮಾರ್​ ಬೆಳ್ಳಿ
|

Updated on: Aug 15, 2023 | 6:22 PM

ಬಜೆಟ್ ಅಧಿವೇಶನ ಮತ್ತು ರಾಜ್ಯಪಾಲರ ವಂದನಾ ನಿರ್ಣಯ ಮುಗಿದರೂ ವಿರೋಧ ಪಕ್ಷದ ಆಯ್ಕೆ ಮಾಡಿಕೊಳ್ಳಲಾಗದೆ ಕಾಂಗ್ರೆಸ್ ಸರ್ಕಾರದ ಬಗ್ಗೆ ಮಾತಾಡುವ ಬಸನಗೌಡ ಯತ್ನಾಳ್, ಸಿಟಿ ರವಿ, ಬಸವರಾಜ ಬೊಮ್ಮಾಯಿ ಮೊದಲಾದವರಿಗೆಲ್ಲ ನಾಚಿಕೆ ಮಾನ-ಮರ್ಯಾದೆ ಇಲ್ಲ ಎಂದು ತಂಗಡಗಿ ಹೇಳಿದರು.

ಕೊಪ್ಪಳ: ನಿನ್ನೆ ವಿಜಯಪುರದಲ್ಲಿ ಸುದ್ದಿಗಾರರೊಂದಿಗೆ ಮಾತಾಡುವಾಗ ಇನ್ನಾರು ತಿಂಗಳಲ್ಲಿ ಕಾಂಗ್ರೆಸ್ ಸರ್ಕಾರ ಬಿದ್ದು ಹೋಗುತ್ತದೆ ಎಂದು ಹೇಳಿದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basanagouda Patil Yatnal) ಅವರಿಗೆ ಕಾಂಗ್ರೆಸ್ ನಾಯಕರು ತಿರುಗೇಟು ನೀಡುತ್ತಿದ್ದಾರೆ. ನಗರದಲ್ಲಿಂದು ಸುದ್ದಿಗೋಷ್ಟಿ ನಡೆಸಿ ಮಾತಾಡಿದ ಕೊಪ್ಪಳ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ (Shivaraj Tangadagi), ಒಂದು ವಿಧಾನ ಸಭೆ ಅಧಿವೇಶನ ಮುಗಿದರೂ ಒಬ್ಬ ವಿರೋಧ ಪಕ್ಷದ ನಾಯಕನ್ನು (Leader of Opposition) ಆರಿಸಿಕೊಳ್ಳಲಾಗದ ಬಿಜೆಪಿಯ ನಾಯಕರಾಗಿರುವ ಯತ್ನಾಳ್ ಗೆ ಕಾಂಗ್ರೆಸ್ ಪಕ್ಷದ ಬಗ್ಗೆ ಮಾತಾಡುವ ಯೋಗ್ಯತೆ ಇಲ್ಲ. ಅವರು ಕನಸು ಕಾಣುತ್ತಿದ್ದಾರೆ, ಕಾಂಗ್ರೆಸ್ 135 ಸೀಟುಗಳನ್ನು ಗೆದ್ದು ಅಧಿಕಾರಕ್ಕೆ ಬಂದಿದೆ, ತಮ್ಮ ಸರ್ಕಾರವನ್ನು ಯಾರು ಅಲ್ಲಾಡಿಸಲಾರರು. ಬಜೆಟ್ ಅಧಿವೇಶನ ಮತ್ತು ರಾಜ್ಯಪಾಲರ ವಂದನಾ ನಿರ್ಣಯ ಮುಗಿದರೂ ವಿರೋಧ ಪಕ್ಷದ ಆಯ್ಕೆ ಮಾಡಿಕೊಳ್ಳಲಾಗದೆ ಕಾಂಗ್ರೆಸ್ ಸರ್ಕಾರದ ಬಗ್ಗೆ ಮಾತಾಡುವ ಬಸನಗೌಡ ಯತ್ನಾಳ್, ಸಿಟಿ ರವಿ, ಬಸವರಾಜ ಬೊಮ್ಮಾಯಿ ಮೊದಲಾದವರಿಗೆಲ್ಲ ನಾಚಿಕೆ ಮಾನ-ಮರ್ಯಾದೆ ಇಲ್ಲ ಎಂದು ತಂಗಡಗಿ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ