Loading video

ಗವಿಸಿದ್ದೇಶ್ವರ ಜಾತ್ರೆ ನೋಡಿ ಸಂತಸ ವ್ಯಕ್ತ ಪಡಿಸಿದ ಡಿಕೆ ಶಿವಕುಮಾರ್; ಏನಂದ್ರು ಗೊತ್ತಾ?

| Updated By: ಕಿರಣ್ ಹನುಮಂತ್​ ಮಾದಾರ್

Updated on: Jan 27, 2024 | 10:03 PM

ಗವಿಸಿದ್ದೇಶ್ವರ ಜಾತ್ರೆ ನೋಡಿ ಸಂತಸ ವ್ಯಕ್ತ ಪಡಿಸಿದ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ (DK Shivakumar) ‘ನನ್ನ ಜೀವನದಲ್ಲಿ ಇಂತಹ ದೊಡ್ಡ ಜಾತ್ರೆಯನ್ನು ನಾನು ನೋಡಿಲ್ಲ ಎಂದರು.

ಕೊಪ್ಪಳ, ಜ.27: ಗವಿಸಿದ್ದೇಶ್ವರ ಜಾತ್ರೆ ನೋಡಿ ಸಂತಸ ವ್ಯಕ್ತ ಪಡಿಸಿದ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ (DK Shivakumar) ‘ನನ್ನ ಜೀವನದಲ್ಲಿ ಇಂತಹ ದೊಡ್ಡ ಜಾತ್ರೆಯನ್ನು ನಾನು ನೋಡಿಲ್ಲ ಎಂದರು. ಕೊಪ್ಪಳದಲ್ಲಿ ಮಾತನಾಡಿದ ಅವರು ‘ಕೊಪ್ಪಳದ ಗವಿಮಠ ಬರೀ ಮಠ ಅಲ್ಲ, ಅತಿದೊಡ್ಡ ಶಕ್ತಿ ಕೇಂದ್ರವಾಗಿದೆ. ನಾನು ಡಿಸಿಎಂ ಆಗಿ ಬಂದಿಲ್ಲ, ಗವಿಸಿದ್ದೇಶ್ವರನ ಭಕ್ತನಾಗಿ ಬಂದಿರುವೆ ಎಂದರು.

2017ರಲ್ಲಿ ಗವಿಮಠದ ಉತ್ಸವದಲ್ಲಿ ದೇವೇಗೌಡರು ಭಾಗಿಯಾಗಿದ್ದರು. ದೇವೇಗೌಡರು ಬಂದು ಹೋದ್ಮೇಲೆ ಹೆಚ್​ಡಿಕೆ ಸಿಎಂ ಆಗಿದ್ದು, ಭಕ್ತನಿಗೂ ಭಗವಂತನಿಗೂ ವ್ಯವಹಾರ ನಡೆಯುವ ಸ್ಥಳ ದೇವಾಲಯವಾಗಿದೆ. ನಾನು ಏನ್ ಕೇಳಿದ್ದೀನಿ, ದೇವರು ಏನ್ ಕೊಡುತ್ತಾನೆ ನೋಡೋಣ. ನಮಗೂ ನಿಮಗೂ ಸಂಬಂಧವಿಲ್ಲ, ನನಗೆ ದೇವರಿಗೆ ಸಂಬಂಧಿಸಿದ್ದು, ನನಗೂ ದೇವರಿಗೂ ಇರಲಿ ಎಂದು ಹೇಳಿದರು.

ರಾಜ್ಯದ ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ