ಡಿಸಿಎಂ ಡಿ.ಕೆ. ಶಿವಕುಮಾರ್ ಬಳಿ ಎಷ್ಟು ಮನೆಯಿದೆ ಗೊತ್ತಾ? ಇಲ್ಲಿದೆ ನೋಡಿ
ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಕುಟುಂಬಕ್ಕೆ ಸಂಬಂಧಿಸಿದ ಆರ್ಥಿಕ, ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ವಿವರಗಳನ್ನು ಅಧಿಕಾರಿಗಳು ಪಡೆದಿದ್ದಾರೆ. ಕುಟುಂಬವು ಹೊಂದಿರುವ ನಾಲ್ಕರಿಂದ ಐದು ವಾಸದ ಮನೆಗಳು, ಇಪ್ಪತ್ತು ಹಸುಗಳು, ನಾಲ್ಕು ಎಮ್ಮೆಗಳು ಮತ್ತು ಹತ್ತರಿಂದ ಹದಿನೈದು ಕುರಿಗಳ ಇದೆ ಎಂದು ಹೇಳಲಾಗಿದೆ. ಇದರ ಜತೆಗೆ ಹೈನುಗಾರಿಕೆ, ಕೋಳಿ ಸಾಕಾಣಿಕೆ ಮತ್ತು ರೇಷ್ಮೆ ಕೃಷಿ ಪ್ರಮುಖ ಚಟುವಟಿಕೆಗಳಾಗಿವೆ .
ಬೆಂಗಳೂರು, ಅ.4: ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (DK Shivakumar) ಅವರ ಮನೆಯಲ್ಲಿ ಇಂದು ಅಧಿಕಾರಿಗಳು ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ಮಾಹಿತಿ ಪಡೆದರು. ಈ ಸಮೀಕ್ಷೆಯಲ್ಲಿ ಕುಟುಂಬದ ಸಾಲದ ಮೂಲಗಳು, ಜಾನುವಾರುಗಳ ವಿವರಗಳು, ಕೃಷಿ ಚಟುವಟಿಕೆಗಳು ಮತ್ತು ಸ್ಥಿರಾಸ್ತಿಗಳ ಕುರಿತು ಮಾಹಿತಿ ಪಡೆಯಲಾಗಿದೆ.ಸಮೀಕ್ಷೆಯ ಪ್ರಕಾರ, ಡಿ.ಕೆ. ಶಿವಕುಮಾರ್ ಕುಟುಂಬದ ಸಾಲದ ಮೂಲಗಳು ಬ್ಯಾಂಕುಗಳು ಮತ್ತು ಸಹಕಾರಿ ಬ್ಯಾಂಕುಗಳಾಗಿವೆ. ಕುಟುಂಬವು ಸುಮಾರು ಇಪ್ಪತ್ತು ಹಸುಗಳನ್ನು ಹೊಂದಿದ್ದು, ಅದರಲ್ಲಿ ನಾಲ್ಕು ಎಮ್ಮೆಗಳು ಹೇಳಲಾಗಿದೆ. ಹತ್ತರಿಂದ ಹದಿನೈದು ಕುರಿಗಳು ಇದೆ ಎಂದು ಹೇಳಲಾಗಿದೆ. ಕೃಷಿ ಸಂಬಂಧಿತ ಚಟುವಟಿಕೆಗಳಲ್ಲಿ ಹೈನುಗಾರಿಕೆ, ಕೋಳಿ ಸಾಕಾಣಿಕೆ ಮತ್ತು ರೇಷ್ಮೆ ಕೃಷಿಗಳನ್ನು ಹೊಂದಿದ್ದಾರೆ. ರೇಷ್ಮೆ ಕೃಷಿಯು ಗಣನೀಯ ಪ್ರಮಾಣದಲ್ಲಿದೆ ಎಂದು ನಮೂದಿಸಲಾಗಿದೆ. ಕುಟುಂಬವು ಹೊಂದಿರುವ ವಾಸದ ಮನೆಗಳ ಸಂಖ್ಯೆ ನಾಲ್ಕರಿಂದ ಐದು ಎಂದು ಹೇಳಲಾಗಿದೆ.
ವಿಡಿಯೋ ಸುದ್ದಿಗಳು ಇಲ್ಲಿ ಕ್ಲಿಕ್ ಮಾಡಿ
Published on: Oct 04, 2025 04:39 PM
