‘ನಿಮಗೆಲ್ಲ ಅರ್ಹತೆ ಇಲ್ಲ’; ವಿಶೇಷ ವ್ಯಕ್ತಿಗೆ ಕಿಚ್ಚನ ಚಪ್ಪಾಳೆ
ಕಿಚ್ಚ ಸುದೀಪ್ ಅವರು ಈಗ ರಾಂಗ್ ಆಗಿದ್ದಾರೆ. ‘ಬಿಗ್ ಬಾಸ್ ಕನ್ನಡ ಸೀಸನ್ 12’ರ ಸ್ಪರ್ಧಿಗಳ ವಿರುದ್ಧ ಅವರು ಸಿಡಿದೆದ್ದಿದ್ದಾರೆ. ಅರ್ಹತೆ ಇಲ್ಲದವರು ಎಂದು ಅವರನ್ನು ಕರೆದಿದ್ದಾರೆ. ಇದಕ್ಕೆ ಕಾರಣವೂ ಇದೆ. ಯಾವ ಸ್ಪರ್ಧಿಗಳೂ ಸರಿಯಾಗಿ ಆಡುತ್ತಿಲ್ಲ ಎಂಬುದು ಅವರ ಆರೋಪ.
ಈ ವಾರ ಜಂಟಿ ಸ್ಪರ್ಧಿಗಳು ಚೆನ್ನಾಗಿ ಆಟ ಆಡಿಲ್ಲ. ಈ ಬಗ್ಗೆ ಸುದೀಪ್ ಅವರು ನೇರವಾಗಿ ಅಸಮಾಧಾನ ಹೊರ ಹಾಕಿದ್ದಾರೆ. ಜಂಟಿ ಸ್ಪರ್ಧಿಗಳು ಅರ್ಹರಲ್ಲ ಎಂಬರ್ಥದಲ್ಲಿ ಮಾತನಾಡಿದ್ದಾರೆ. ಅಲ್ಲದೆ, ಅರ್ಧದಷ್ಟು ಜನರು ಎಲಿಮಿನೇಟ್ ಆದರೆ ಅವರನ್ನು ಕರೆತರೋಕೆ ಸ್ಪರ್ಧಿಗಳು ರೆಡಿ ಇದ್ದಾರೆ ಎಂದು ಎಚ್ಚರಿಸಿದ್ದಾರೆ. ಮೂರನೇ ವಾರದಲ್ಲಿ ಒಂದು ಫಿನಾಲೆ ನಡೆಯಲಿದೆ ಎಂದು ಈಗಾಗಲೇ ಘೋಷಣೆ ಮಾಡಲಾಗಿದೆ. ವಿಶೇಷ ವ್ಯಕ್ತಿಗೆ ಸುದೀಪ್ ಕಿಚ್ಚನ ಚಪ್ಪಾಳೆ ಕೊಟ್ಟಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published on: Oct 04, 2025 03:45 PM
Latest Videos

