Karnataka Assembly Polls: ಬೇರೆಯವರು ಮುಖ್ಯಮಂತ್ರಿಯಾಗಿದ್ದಾಗ ತಾಳ್ಮೆಯಿಂದ ಸಹಕಾರ ನೀಡಲಿಲ್ಲವೇ ಅಂತ ಶಿವಕುಮಾರ್ ಹೇಳಿದ್ದಕ್ಕೆ ಅರ್ಥವೇನು?
ನೊಣವಿನಕೆರೆ ಮಠದಲ್ಲಿ ಇಂದು ಪತ್ರಿಕಾ ಗೋಷ್ಟಿಯೊಂದನ್ನು ನಡೆಸಿ ಮಾತಾಡಿದ ಶಿವಕುಮಾರ್ ಪಕ್ಷದ ಶಾಸಕಾಂಗ ಸಭೆ ಮತ್ತು ಹೈಕಮಾಂಡ್ ನಿರ್ಧಾರ ತೆಗೆದುಕೊಳ್ಳಲಿದೆ ಅಂತ ಹೇಳಿದರು.
ತುಮಕೂರು: ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ (DK Shivakumar) ತಾನೇ ರಾಜ್ಯದ ಮುಂದಿನ ಮುಖ್ಯಮಂತ್ರಿ (chief minister) ಅನ್ನೋದನ್ನು ಪರೋಕ್ಷವಾಗಿ ಹೇಳುತ್ತಿದ್ದಾರೆಯೇ? ಜಿಲ್ಲೆಯ ತಿಪಟೂರಿನಲ್ಲಿರುವ ನೊಣವಿನಕೆರೆ ಮಠದಲ್ಲಿ ಇಂದು ಪತ್ರಿಕಾ ಗೋಷ್ಟಿಯೊಂದನ್ನು ನಡೆಸಿ ಮಾತಾಡಿದ ಅವರು ಪಕ್ಷದ ಶಾಸಕಾಂಗ ಸಭೆ ಮತ್ತು ಹೈಕಮಾಂಡ್ ನಿರ್ಧಾರ ತೆಗೆದುಕೊಳ್ಳಲಿದೆ ಅಂತ ಹೇಳಿದರಾದರೂ, ತಾವು ಪಕ್ಷಕ್ಕಾಗಿ ಪಟ್ಟ ಶ್ರಮ, ಕಠಿಣ ಸಂದರ್ಭದಲ್ಲಿ ಕೆಪಿಸಿಸಿ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದು, ಜೈಲಿಗೆ ಹೋಗಿ ಬಂದಿದ್ದು ಮೊದಲಾದ ಸಂಗತಿಗಳನ್ನು ಹೈಲೈಟ್ ಮಾಡಿದರು. ಸಿದ್ದರಾಮಯ್ಯ ಹೆಸರು ಉಲ್ಲೇಖಿಸದೆ ಬೇರೆಯವರು ಮುಖ್ಯಮಂತ್ರಿಯಾಗಿದ್ದಾಗ ತಾನು ತಾಳ್ಮೆಯಿಂದ ಸಹಕರಿಸಲಿಲ್ಲವೇ ಅಂತ ಅವರು ಹೇಳಿದ್ದರ ಅರ್ಥ ಏನು ಅಂತ ಜನ ಕಲ್ಪಿಸಿಕೊಳ್ಳಬಹುದಾಗಿದೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ
ಮತ್ತಷ್ಟು ಚುನಾವಣಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ