Karnataka Assembly Polls; ನಾವು ಹಿಂದೂತ್ವ ಅಜೆಂಡಾದ ಮೇಲೆ ವೋಟು ಕೇಳಲಿಲ್ಲ, ಅದು ವಿರೋಧ ಪಕ್ಷಗಳ ಸೃಷ್ಟಿ: ಬಸವರಾಜ ಬೊಮ್ಮಾಯಿ

Karnataka Assembly Polls; ನಾವು ಹಿಂದೂತ್ವ ಅಜೆಂಡಾದ ಮೇಲೆ ವೋಟು ಕೇಳಲಿಲ್ಲ, ಅದು ವಿರೋಧ ಪಕ್ಷಗಳ ಸೃಷ್ಟಿ: ಬಸವರಾಜ ಬೊಮ್ಮಾಯಿ

ಅರುಣ್​ ಕುಮಾರ್​ ಬೆಳ್ಳಿ
|

Updated on: May 14, 2023 | 2:42 PM

ಮುಖ್ಯಮಂತ್ರಿ ರೇಸ್ ನಲ್ಲಿರುವ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಇಬ್ಬರಿಗೂ ಬೊಮ್ಮಾಯಿ ಶುಭ ಹಾರೈಸಿದರು.

ಬೆಂಗಳೂರು: ಬೆಂಗಳೂರಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತಾಡಿದ ಬಸವರಾಜ ಬೊಮ್ಮಾಯಿ (Basavaraj Bommai) ಅವರು ಬಿಜೆಪಿ ಯಾವತ್ತೂ ಹಿಂದೂತ್ವ (Hindutva) ಅಜೆಂಡ ಮುಂದಿಟ್ಟುಕೊಂಡು ಚುನಾವಣಾ ಹೋರಾಟಕ್ಕಿಳಿದಿಲ್ಲ, ಅದು ವಿರೋಧ ಪಕ್ಷಗಳ ಸೃಷ್ಟಿ ಎಂದು ಹೇಳಿದರು. ಫಲಿತಾಂಶ ಪ್ರಕಟಗೊಂಡ ಬಳಿಕ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು (PM Narendra Modi) ಮಾತಾಡಿ ಧೈರ್ಯ ತುಂಬಿದ್ದಾರೆ ಎಂದು ಹೇಳಿದ ಬೊಮ್ಮಾಯಿ, ರಾಜ್ಯದಲ್ಲಿ ಬಿಜೆಪಿ ಸೋಲಿಗೆ ಐದಾರು ಕಾರಣಗಳಿವೆ, ಅವುಗಳನ್ನು ವಿಶ್ಲೇಷಿಸಿ ಸರಿಪಡಿಸಿಕೊಳ್ಳಲಾಗುವುದು ಎಂದು ಹೇಳಿದರು. ಮುಖ್ಯಮಂತ್ರಿ ರೇಸ್ ನಲ್ಲಿರುವ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಇಬ್ಬರಿಗೂ ಬೊಮ್ಮಾಯಿ ಶುಭ ಹಾರೈಸಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ

ಮತ್ತಷ್ಟು ಚುನಾವಣಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ