Karnataka Assembly Polls: ಬಿಜೆಪಿ ಕಾರ್ಯಕರ್ತರನ್ನು ಹುರಿದುಂಬಿಸುವ ಪ್ರಯತ್ನದಲ್ಲಿ ನೆಟ್ಟಿಗರಿಂದ ತರಾಟೆಗೊಳಗಾದ ಸಂಸದ ಪ್ರತಾಪ್ ಸಿಂಹ!
ಒಬ್ಬ ನೆಟ್ಟಿಗ ನಿಮಗೆ ಅಧಿಕಾರ ನೀಡಿದ್ದು ಯಾವಾಗ? ಐಟಿ, ಈಡಿ ಅಂತ ಶಾಸಕರನ್ನು ಹೆದರಿಸಿ ಸರ್ಕಾರ ಬೀಳಿಸಿ ಸರ್ಕಾರ ರಚಿಸಿದವರು ನೀವು ಅಂತ ಪ್ರತಿಕ್ರಿಯಿಸಿದ್ದಾರೆ.
ಮೈಸೂರು: ಸಾಮಾಜಿಕ ಜಾಲತಾಣಗಳೇ ಹಾಗೆ ಮಾರಾಯ್ರೇ, ನೀವು ಮಾಡಿದ ಪೋಸ್ಟ್ ನಲ್ಲಿ ಟೀಕಿಸುವ ಸಂಗತಿಯೇನಾದರೂ ಕಾಣಿಸಿದರೆ ನೆಟ್ಟಿಗರು ಸುಮ್ಮನೆ ಬಿಡುವುದಿಲ್ಲ. ಸಂಸದ ಪ್ರತಾಪ್ ಸಿಂಹ (Pratap Simha) ಅವರು ಕಾರ್ಯಕರ್ತರನ್ನು ಟ್ವೀಟ್ ಮೂಲಕ ಹುರಿದುಂಬಿಸಲು ಪ್ರಯತ್ನಿಸಿ ಟ್ರೋಲ್ (troll) ಆಗಿದ್ದಾರೆ. ರಾಜ್ಯದಲ್ಲಿ ಬಿಜೆಪಿ ಸೋತಿರುವುದಕ್ಕೆ ಅಧೀರರಾಗಬೇಡಿ, ಮತದಾರ ನಮಗಿಂತ ಬುದ್ಧಿವಂತ, ನಮ್ಮನ್ನು ಎರಡು ಬಾರಿ ಅಧಿಕಾರಕ್ಕೆ ತಂದಿದ್ದು ಮತದಾರನೇ ಅಂತ ಅವರು ಮಾಡಿದ ಟ್ವೀಟ್ ಗೆ, ಜನ ಬಗೆಬಗೆಯ ಪ್ರತಿಕ್ರಿಯೆ ನೀಡಿ ತರಾಟೆಗೆ ತೆಗೆದುಕೊಂಡಿದ್ದಾರೆ. ಒಬ್ಬ ನೆಟ್ಟಿಗ ನಿಮಗೆ ಅಧಿಕಾರ ನೀಡಿದ್ದು ಯಾವಾಗ? ಐಟಿ, ಈಡಿ (IT, ED) ಅಂತ ಶಾಸಕರನ್ನು ಹೆದರಿಸಿ ಸರ್ಕಾರ ಬೀಳಿಸಿ ಸರ್ಕಾರ ರಚಿಸಿದವರು ನೀವು ಅಂತ ಪ್ರತಿಕ್ರಿಯಿಸಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ
ಮತ್ತಷ್ಟು ಚುನಾವಣಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ
Latest Videos