Sign In

By signing in or creating an account, you agree with Associated Broadcasting Company's Terms & Conditions and Privacy Policy.

Karnataka Assembly Polls; ಜನರ ವಿಶ್ವಾಸಕ್ಕೆ ದ್ರೋಹವಾಗದ ಹಾಗೆ ಕಾಂಗ್ರೆಸ್ ಸರ್ಕಾರ ಕೆಲಸ ಮಾಡಲಿದೆ: ಲಕ್ಷ್ಮಣ ಸವದಿ

Karnataka Assembly Polls; ಜನರ ವಿಶ್ವಾಸಕ್ಕೆ ದ್ರೋಹವಾಗದ ಹಾಗೆ ಕಾಂಗ್ರೆಸ್ ಸರ್ಕಾರ ಕೆಲಸ ಮಾಡಲಿದೆ: ಲಕ್ಷ್ಮಣ ಸವದಿ

ಅರುಣ್​ ಕುಮಾರ್​ ಬೆಳ್ಳಿ
|

Updated on: May 14, 2023 | 12:53 PM

ಶಾಸಕನಾದವನಿಗೆ ಮಂತ್ರಿಯಾಗುವ, ಉಪ-ಮುಖ್ಯಮಂತ್ರಿಯಾಗುವ ಮತ್ತು ಮುಖ್ಯಮಂತ್ರಿಯಾಗುವ ಆಸೆ ಇದ್ದೇ ಇರುತ್ತದೆ, ಯಾರೂ ಸನ್ಯಾಸಿಗಳಲ್ಲ, ಎಂದು ಸವದಿ ಹೇಳಿದರು.

ಬೆಳಗಾವಿ: ಜಿಲ್ಲೆಯ ಒಟ್ಟು 17 ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ 11 ರಲ್ಲಿ ಗೆಲುವು ಸಾಧಿಸಿ ಅಧಿಪತ್ಯ ಮೆರೆದಿದೆ. ಗೆದ್ದವರಲ್ಲಿ ಲಕ್ಷ್ಮಣ ಸವದಿ (Laxman Savadi) ಮತ್ತು ಲಕ್ಷ್ಮಿ ಹೆಬ್ಬಾಳ್ಕರ್ (Lakshmi Hebbalkar) ಸಹ ಸೇರಿದ್ದಾರೆ. ಇಂದು ಬೆಂಗಳೂರಿಗೆ ತೆರಳುವ ಮುನ್ನ ನಗರದ ಹೊರವಲಯದಲ್ಲಿರುವ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ (Sambra Airport) ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಸವದಿ, ರಾಜ್ಯದಲ್ಲಿ ಕಾಂಗ್ರೆಸ್ ಅಲೆ ಎದ್ದಿದೆ, ಸ್ವಂತ ಬಲದಲ್ಲಿ ಸರ್ಕಾರ ರಚಿಸುವ ಅವಕಾಶವನ್ನು ಮತದಾರ ನೀಡಿದ್ದಾನೆ, ಮುಂದಿನ 5 ವರ್ಷಗಳ ಕಾಲ ಜನತೆಯ ವಿಶ್ವಾಸಕ್ಕೆ ಧಕ್ಕೆಯಾಗದ ಹಾಗೆ ಎಲ್ಲ ಶಾಸಕರು ಕೆಲಸ ಮಾಡಲಿದ್ದಾರೆ ಎಂದು ಹೇಳಿದರು. ಮಂತ್ರಿಯಾಗುವ ಆಸೆಯ ಬಗ್ಗೆ ಕೇಳಿದಾಗ, ಶಾಸಕನಾದವನಿಗೆ ಮಂತ್ರಿಯಾಗುವ, ಉಪ-ಮುಖ್ಯಮಂತ್ರಿಯಾಗುವ ಮತ್ತು ಮುಖ್ಯಮಂತ್ರಿಯಾಗುವ ಆಸೆ ಇದ್ದೇ ಇರುತ್ತದೆ, ಯಾರೂ ಸನ್ಯಾಸಿಗಳಲ್ಲ, ಎಂದು ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ

ಮತ್ತಷ್ಟು ಚುನಾವಣಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ