Karnataka Assembly Polls; ನಾನು ಕಾಂಗ್ರೆಸ್ ಸೇರಿದ್ದನ್ನು ಪ್ರಶ್ನಿಸುವ ನೈತಿಕ ಹಕ್ಕು ಯಡಿಯೂರಪ್ಪನವರಿಗಿಲ್ಲ: ಲಕ್ಷ್ಮಣ ಸವದಿ
ಬಿಜೆಪಿ ಪಕ್ಷದಿಂದ ಮುಖ್ಯಮಂತ್ರಿ, ವಿರೋಧ ಪಕ್ಷದ ನಾಯಕನಾಗಿದ್ದರೂ ಅವರು ಅಲ್ಲಿಂದ ಹೊರಬಂದು ಯಡಿಯೂರಪ್ಪ ಕೆಜೆಪಿ ಪಕ್ಷ ಕಟ್ಟಿದ್ದರು ಎಂದು ಸವದಿ ತಿರುಗೇಟು ನೀಡಿದರು.
ಬೆಳಗಾವಿ: ಕಳೆದರೆಡು ದಿನಗಳಿಂದ ರಾಜ್ಯದ ಮತ್ತು ರಾಷ್ಟ್ರೀಯ ನಾಯಕರು ಅಥಣಿಯಲ್ಲಿ ಮಹೇಶ್ ಕುಮಟಳ್ಳಿ (Mahesh Kumatalli) ಪರ ಪ್ರಚಾರ ಮಾಡಿದರೂ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಲಕ್ಷ್ಮಣ ಸವದಿ (Laxman Savadi) ವಿಚಲಿತರಾಗಿಲ್ಲ. ಇಂದು ಬೆಳಗ್ಗೆ ಟಿವಿ9 ಕನ್ನಡ ವಾಹಿನಿಯ ಬೆಳಗಾವಿ ವರದಿಗಾರನೊಂದಿಗೆ ಮಾತಾಡಿದ ಸವದಿಯವರು ತಮ್ಮ ಬಗ್ಗೆ ಬೇರೆ ಪಕ್ಷದ ನಾಯಕರು ಮಾತಾಡಿದರೆ ಗಣನೆಗೆ ತೆಗೆದುಕೊಳ್ಳುವುದಿಲ, ಅವರ ಟೀಕೆಗಳು ತೂಕವಿಲ್ಲದವು ಎಂದು ಹೇಳಿದರು. ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ (BS Yediyurappa) ತನ್ನ ಬಗ್ಗೆ ಮಾಡಿದ ಕಾಮೆಂಟ್ ಗಳಿಗೆ ಉತ್ತರಿಸಿದ ಸವದಿ, ಪಕ್ಷ ಬಿಟ್ಟಿರುವ ಬಗ್ಗೆ ಮಾತಾಡಲು ಅವರಿಗೆ ನೈತಿಕ ಹಕ್ಕಿಲ್ಲ, ಬಿಜೆಪಿ ಪಕ್ಷದಿಂದ ಮುಖ್ಯಮಂತ್ರಿ, ವಿರೋಧ ಪಕ್ಷದ ನಾಯಕನಾಗಿದ್ದರೂ ಅವರು ಅಲ್ಲಿಂದ ಹೊರಬಂದು ಕೆಜೆಪಿ ಪಕ್ಷ ಕಟ್ಟಿದ್ದರು ಎಂದು ತಿರುಗೇಟು ನೀಡಿದರು. ಮುಂದುವರಿದು ಮಾತಾಡಿದ ಅವರು ತಮ್ಮನ್ನು ಸೋಲಿಸುವುದು ಗೆಲ್ಲಿಸುವುದು ಅಥಣಿ ಕ್ಷೇತ್ರದ ಮತದಾರರ ಕೈಯಲ್ಲಿದೆ ಮತ್ತು ಅವರು ತನ್ನ ಕೈಬಿಡಲಾರರು ಎಂದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಮತ್ತಷ್ಟು ಚುನಾವಣಾಅ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ