ಲಕ್ಷ್ಮಣ ಸವದಿಯನ್ನ ಸೋಲಿಸುವ ಜವಾಬ್ದಾರಿ ನಿಮ್ದು, ಶೆಟ್ಟರ್ ಸೋಲಿಸುವ ಜವಾಬ್ದಾರಿ ನಂದು: ಯಡಿಯೂರಪ್ಪ ಶಪಥ
ಬಿಜೆಪಿ ಬೆನ್ನಿಗೆ ಚೂರಿ ಹಾಕಿದ ಲಕ್ಷ್ಮಣ ಸವದಿ ಅವರಿಗೆ ಚುನಾವಣೆಯಲ್ಲಿ ಪಾಠ ಕಲಿಸಿ. ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಲಕ್ಷ್ಮಣ ಸವದಿ ಸೋಲುವುದು ನಿಶ್ಚಿತ ಎಂದು ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಭವಿಷ್ಯ ನುಡಿದರು.
ಬೆಳಗಾವಿ: ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರದ (Hubli-Dharwad Central Assembly Constituency) ಕಾಂಗ್ರೆಸ್ ಅಭ್ಯರ್ಥಿ ಜಗದೀಶ್ ಶೆಟ್ಟರ್ (Jagadish Shettar) ಅವರನ್ನು ಸೋಲಿಸುವ ಜವಾಬ್ದಾರಿ ನಾನು ತೆಗೆದುಕೊಳ್ಳುತ್ತೇನೆ. ಅಥಣಿ ಕ್ಷೇತ್ರದ (Athani Assembly Constituency) ಕಾಂಗ್ರೆಸ್ ಅಭ್ಯರ್ಥಿ ಲಕ್ಷ್ಮಣ ಸವದಿಯವರನ್ನು (Laxaman Savdi) ಸೋಲಿಸುವ ಜವಾಬ್ದಾರಿ ಕ್ಷೇತ್ರದ ಜನ ತೆಗೆದುಕೊಳ್ಳಿ ಎಂದು ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ (BS Yediyurappa) ಕರೆ ಕೊಟ್ಟರು. ಬಿಜೆಪಿ ಬೆನ್ನಿಗೆ ಚೂರಿ ಹಾಕಿದ ಲಕ್ಷ್ಮಣ ಸವದಿ ಅವರಿಗೆ ಚುನಾವಣೆಯಲ್ಲಿ ಪಾಠ ಕಲಿಸಿ. ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಲಕ್ಷ್ಮಣ ಸವದಿ ಸೋಲುವುದು ನಿಶ್ಚಿತ ಎಂದು ಭವಿಷ್ಯ ನುಡಿದರು.
ಜಿಲ್ಲೆಯ ಅಥಣಿಯಲ್ಲಿ ನಡೆದ ಬಿಜೆಪಿ ಸಮಾವೇಶದಲ್ಲಿ ಮಾತನಾಡಿದ ಅವರು ನಿಮಗೆ ಇನ್ನೂ ಐದು ವರ್ಷ ಸಮಯವಿತ್ತು ಇಷ್ಟಿದ್ರೂ ಬಿಜೆಪಿ ಬೆನ್ನಿಗೆ ಚೂರಿ ಹಾಕಿದ್ದೀರಿ. ಲಕ್ಷ್ಮಣ ಸವದಿ ಮನೆಗೆ ಹೋಗುವುದು ನಿಶ್ಚಿತ, ಮಹೇಶ್ ಕುಮಟಳ್ಳಿ ಗೆಲ್ಲೋದು ನಿಶ್ಚಿತ. ಇಡೀ ದೇಶ ಬಿಜೆಪಿ, ನರೇಂದ್ರ ಮೋದಿ ಕಡೆ ನೋಡುತ್ತಿದೆ. ಕಾಂಗ್ರೆಸ್ ಪಕ್ಷವನ್ನು ಇಡೀ ದೇಶದ ಜನರು ತಿರಸ್ಕಾರ ಮಾಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮುಂದೆ ರಾಹುಲ್ ಸಮನಾಗಲು ಸಾಧ್ಯವಿದೆಯಾ? ಕರ್ನಾಟಕದಲ್ಲಿ 130ಕ್ಕೂ ಹೆಚ್ಚು ಸ್ಥಾನ ಗೆದ್ದು ಬಿಜೆಪಿ ಅಧಿಕಾರಕ್ಕೆ ತರುತ್ತೇವೆ ಎಂದು ಹೇಳಿದರು.
ಇದನ್ನೂ ಓದಿ: ಮತದಾರರ ಬಳಿಗೆ ಹೋಗುವ ಮುನ್ನ ಕರ್ನಾಟಕದ 50 ಲಕ್ಷ ಬಿಜೆಪಿ ಕಾರ್ಯಕರ್ತರೊಂದಿಗೆ ನಾಳೆ ಮೋದಿ ಮಾತು!
ಬಿಎಸ್ ಯಡಿಯೂರಪ್ಪ, ಮಹೇಶ್ ಕುಮಟಳ್ಳಿ ಬೆನ್ನಿಗೆ ಚೂರಿ ಹಾಕಿದ್ದು ಸವದಿ
ರಾಜ್ಯದಲ್ಲಿ ಸ್ಪಷ್ಟ ಬಹುಮತದೊಂದಿಗೆ ಬಿಜೆಪಿ ಅಧಿಕಾರಕ್ಕೆ ಬರಲಿದೆ. ಬಿಎಸ್ ಯಡಿಯೂರಪ್ಪ, ಮಹೇಶ್ ಕುಮಟಳ್ಳಿ ಬೆನ್ನಿಗೆ ಚೂರಿ ಹಾಕಿದ್ದು ಲಕ್ಷ್ಮಣ ಸವದಿ. ಮಹೇಶ್ ಕುಮಟಳ್ಳಿ ಸಾಫ್ಟ್ ಆಗಿ ಮಾತಾಡುವುದನ್ನು ಬಿಡಬೇಕು. ಪಂಚಮಸಾಲಿಯಲ್ಲಿ ಹುಟ್ಟಿ ಅವರ ರಕ್ತದಂತೆ ಮುಂದುವರಿಯಬೇಕು. ಬಸನಗೌಡ ಪಾಟೀಲ್ ಯತ್ನಾಳ್ ಬಳಿ ಮಹೇಶ್ ಕುಮಟಳ್ಳಿ ಟ್ರೈನಿಂಗ್ ತೆಗೆದುಕೊಳ್ಳಲಿ. ಪಕ್ಷಕ್ಕೆ ದ್ರೋಹ ಮಾಡಿದ ಲಕ್ಷ್ಮಣ ಸವದಿಗೆ ಬುದ್ಧಿ ಕಲಿಸಬೇಕು ಎಂದು ಶಾಸಕ ರಮೇಶ್ ಜಾರಕಿಹೊಳಿ ಆಕ್ರೋಶ ವ್ಯಕ್ತಪಡಿಸಿದರು.
ಬಿಎಸ್ ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆ ಬಂತು. ಒಂದೇ ಪಕ್ಷದಲ್ಲಿದ್ದರೂ ಲಕ್ಷ್ಮಣ ಸವದಿಯವರನ್ನು ಸೋಲಿಸಲು ತಯಾರಿ ಮಾಡಿದ್ದೇವು. ಬಿ.ಎಸ್.ಯಡಿಯೂರಪ್ಪ, ನಳೀನ್ ಕುಮಾರ್ ಕಟೀಲ ಅವರು ಹೇಳಿದ ಕಾರಣ ಹಿಂದೆ ಸರಿದೆವು ಎಂದು ತಿಳಿಸಿದರು.
ಸಿಎಂ ಸ್ಥಾನದಿಂದ ಬಿ.ಎಸ್.ಯಡಿಯೂರಪ್ಪರನ್ನು ತೆಗೆದಿದ್ದು ಲಕ್ಷ್ಮಣ ಸವದಿ. ಬಿ ಎಸ್ ಯಡಿಯೂಪರಪ್ ಅವರ ಸ್ಥಾನ ತುಂಬುತ್ತಾರೆ ಅಂತಾ ಲಕ್ಷ್ಮಣ ಸವದಿಯನ್ನು ಡಿಸಿಎಂ ಮಾಡಿದರು. ಲಕ್ಷ್ಮಣ ಸವದಿ ಯಾರಿಗೂ ಉಪಕಾರ ಮಾಡಿಲ್ಲ, ಅವರ ಮನೆ ತುಂಬಿಕೊಂಡ. ಗಂಡಸಾಗಿದ್ದರೆ ನಾನು ಮಂತ್ರಿಯಾಗಲ್ಲ ಅಂತಾ ಹೇಳಬೇಕಿತ್ತು. ಸ್ವಾಭಿಮಾನಕ್ಕೆ ಪೆಟ್ಟು ಬಿತ್ತು ಅಂತ ಈಗ ಹೇಳ್ತಿದ್ದಾನೆ ಈ ಗಂಡಸ. ಅವನ್ನ ಕೆಡವಿ ಎಲ್ಲಾ ಖಾಲಿ ಮಾಡಿ ಉಗಾರ್ ಫ್ಯಾಕ್ಟರಿ ಕಬ್ಬು ಕಡಿಯಲು ಕಳಸೋಣ ಎಂದು ವಾಗ್ದಾಳಿ ಮಾಡಿದರು.
ಮೊದಲು ಡಿಬಿ ಪವಾರ್‌ಗೆ, ಲೀಲಾವತಿಗೆ, ಯಡಿಯೂರಪ್ಪ, ಸಂತೋಷ್ ಅವರಿಗೆ ಮುಗಿಸಿದ. ಈಗ ಕಾಂಗ್ರೆಸ್ನಲ್ಲಿ ಸಿದ್ದರಾಮಯ್ಯ ಮತ್ತು ಸತೀಶ್ ಜಾರಕಿಹೊಳಿ ಮುಗಿಸುತ್ತಾರೆ. ಲಕ್ಷ್ಮಣ ಸವದಿಯನ್ನ ಪಕ್ಷಕ್ಕೆ ಸೇರಿಸಿಕೊಳ್ಳಲು ಸಿದ್ದರಾಮಯ್ಯನವರಿಗೆ ಇಷ್ಟ ಇರಲಿಲ್ಲ. ಯಡಿಯೂರಪ್ಪ ಅವರ ಮುಂದೆ ರಮೇಶ್, ಮಹೇಶ್ ಕಾಂಗ್ರೆಸ್ ಹೋಗ್ತಾರೆ ಅಂತಾ ಚಾಡಿ ಹೇಳಿದರೂ. ಆದ್ರೇ ನಾವು ಪಕ್ಷ ಬಿಡುವುದಿಲ್ಲ ಇಲ್ಲೇ ಕೊನೆ. ಲಕ್ಷ್ಮಣ ಮುಕ್ತ ಬಿಜೆಪಿ ಆಗಿದೆ ಇದೀಗ ಅಥಣಿ ಸವದಿ ಮುಕ್ತ ಆಗಲಿ ಎಂದು ಕರೆ ನೀಡಿದರು.
ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ