Kaziranga National Park: ಕಾಜಿರಂಗ ರಾಷ್ಟ್ರೀಯ ಉದ್ಯಾನ ಇನ್ನೆರಡು ದಿನಗಳಲ್ಲಿ ಬಂದ್​, ಆನೆ ಸಫಾರಿ ಇಲ್ಲ!

Kaziranga National Park: ಕಾಜಿರಂಗ ರಾಷ್ಟ್ರೀಯ ಉದ್ಯಾನ ಇನ್ನೆರಡು ದಿನಗಳಲ್ಲಿ ಬಂದ್​, ಆನೆ ಸಫಾರಿ ಇಲ್ಲ!

ಅರುಣ್​ ಕುಮಾರ್​ ಬೆಳ್ಳಿ
| Updated By: Digi Tech Desk

Updated on:Apr 28, 2023 | 9:06 AM

ಕಾಜಿರಂಗ ರಾಷ್ಟ್ರೀಯ ಉದ್ಯಾನದಲ್ಲಿ ಆನೆ ಸಫಾರಿ ಮೇ 1 ರಿಂದ ನಿಲ್ಲಿಸಲಾಗುವುದು ಮತ್ತು ಜೀಪ್ ಸಫಾರಿಯನ್ನು 16 ರಿಂದ ಸಸ್ಪೆಂಡ್ ಮಾಡಲಾಗುವುದು.

ಅಸ್ಸಾಂ ರಾಜ್ಯದ ಗೊಲಘಾಟ್ ಮತ್ತು ನಗಾಂವ್ ಜಿಲ್ಲೆಗಳಲ್ಲಿರುವ ಕಾಜಿರಂಗ ರಾಷ್ಟ್ರೀಯ ಉದ್ಯಾನದ (Kaziranga National Park) ದ್ವಾರಗಳು ಇಷ್ಟರಲ್ಲೇ ಮುಚ್ಚಲಿದ್ದು ಪ್ರವಾಸಿಗರ (visitors) ಭೇಟಿಗೆ ಅವಕಾಶವಿರುವುದಿಲ್ಲ. ಅಧಿಕಾರಿಗಳ ಪ್ರಕಾರ ಉದ್ಯಾನದಲ್ಲಿ ಆನೆ ಸಫಾರಿ (elephant safari) ಮೇ 1 ರಿಂದ ನಿಲ್ಲಿಸಲಾಗುವುದು ಮತ್ತು ಜೀಪ್ ಸಫಾರಿಯನ್ನು 16 ರಿಂದ ಸಸ್ಪೆಂಡ್ ಮಾಡಲಾಗುವುದು.

ಇದನ್ನೂ ಓದಿ: ಬೆಂಗಳೂರಿನಲ್ಲಿ ನಕಲಿ ದಾಖಲಾತಿ ದಂಧೆ; ವಿದೇಶಿ ವಿದ್ಯಾರ್ಥಿಗಳಿಗೆ ವಂಚಿಸುತ್ತಿದ್ದ ಆರೋಪಿ ಅರೆಸ್ಟ್

‘ಪ್ರತಿವರ್ಷ ಕಾಜಿರಂಗದಲ್ಲಿ ಏಪ್ರಿಲ್ 30ರವರೆಗೆ ಆನೆ ಸಫಾರಿ ಜಾರಿಯಲ್ಲಿರುತ್ತದೆ. ಈ ವರ್ಷವೂ ಅದನ್ನು ಏಪ್ರಿಲ್ 30 ರವರೆಗೆ ನಡೆಸಲಾಗುವುದು. ಅಸ್ಸಾಂನಲ್ಲಿ ಮಾನ್ಸೂನ್ ಪ್ರವೇಶವಾಗಿದೆ ಮತ್ತು ಮಳೆಯಿಂದ ರಸ್ತೆಗಳು ಕೆಸರುಮಯವಾಗುವುದರಿಂದ ಪ್ರವಾಸಿಗರಿಗೆ ಓಡಾಡುವುದು, ಸಫಾರಿಗೆ ತೆರಳುವುದು ಕಷ್ಟವಾಗುತ್ತದೆ. ಹಾಗಾಗೇ, ಸಫಾರಿಯನ್ನು ಇನ್ನೆರಡು ಮೂರು ದಿನಗಳಲ್ಲಿ ನಿಲ್ಲಿಸಿಬಿಡುತ್ತೇವೆ. ಆನೆ ಸಫಾರಿಗೆ ಬೇಸಿಗೆ ದಿನಗಳು ಸೂಕ್ತವಲ್ಲ ಮತ್ತು ತಾಪಮಾನ ಹೆಚ್ಚಾದಾಗ ಆನೆಗಳನ್ನು ಕೆಲಸಕ್ಕೆ ಬಳಸುವುದು ಸರಿಯಲ್ಲ,’ ಎಂದು ಅರಣ್ಯಾಧಿಕಾರಿ ರಮೇಶ್ ಗೊಗೋಯಿ ಹೇಳುತ್ತಾರೆ.

ಇದನ್ನೂ ಓದಿ: Raghavendra Stores Review: ‘ರಾಘವೇಂದ್ರ ಸ್ಟೋರ್ಸ್​’ನಲ್ಲಿ ಸಂದೇಶಗಳ ರೀಸೈಕಲ್​; ಜಗ್ಗೇಶ್ ಅಭಿಮಾನಿಗಳಿಗೆ ನಗುವಿನ ರಸದೌತಣ

ಮಳೆಗಾಲದ ದಿನಗಳಲ್ಲಿ ಕಾಜಿರಂಗ ಉದ್ಯಾನದೆಲ್ಲೆಡೆ ನೀರು ನಿಂತುಕೊಳ್ಳುವುದರಿಂದ ಅದನ್ನು ನವೆಂಬರ್ ವರೆಗೆ ಪ್ರವಾಸಿಗರಿಗೆ ಮುಚ್ಚಲಾಗುತ್ತದೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Apr 28, 2023 08:11 AM