ಅಸ್ಸಾಮಿನ ಕಾಜಿರಂಗ ರಾಷ್ಟ್ರೀಯ ಉದ್ಯಾನದಲ್ಲಿ ಘೇಂಡಾಮೃಗವೊಂದು ಸಫಾರಿ ಜೀಪ್ ಗಳ ಬೆನ್ನಟ್ಟಿ ಪ್ರವಾಸಿಗರ ಬೆನ್ನಹುರಿಯಲ್ಲಿ ನಡುಕ ಹುಟ್ಟಿಸಿತು!

ರಾಷ್ಟ್ರೀಯ ಪಾರ್ಕ್ ಪ್ರಾಧಿಕಾರ ಇತ್ತೀಚಿಗೆ ನಡೆಸಿದ ಗಣತಿಯೊಂದರ ಪ್ರಕಾರ ಕಾಜಿರಂಗ ರಾಷ್ಟ್ರೀಯ ಉದ್ಯಾವನದಲ್ಲಿ 2,613 ಘೇಂಡಾಮೃಗಳಿದ್ದು ಅವುಗಳ ಸಂಖ್ಯೆ ಪ್ರತಿ ವರ್ಷ ಹೆಚ್ಚುತ್ತಲೇ ಇದೆ.

ಅಸ್ಸಾಮಿನ ಕಾಜಿರಂಗ ರಾಷ್ಟ್ರೀಯ ಉದ್ಯಾನದಲ್ಲಿ ಘೇಂಡಾಮೃಗವೊಂದು ಸಫಾರಿ ಜೀಪ್ ಗಳ ಬೆನ್ನಟ್ಟಿ ಪ್ರವಾಸಿಗರ ಬೆನ್ನಹುರಿಯಲ್ಲಿ ನಡುಕ ಹುಟ್ಟಿಸಿತು!
ಸಫಾರಿ ವಾಹನಗಳ ಬೆನ್ನಟ್ಟಿರುವ ಘೇಂಡಾಮೃಗ
Follow us
TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on:Dec 31, 2022 | 4:34 PM

ವನ್ಯಪ್ರಾಣಿಗಳೇ ಹಾಗೆ ಮಾರಾಯ್ರೇ. ನಾವು ಸುಮ್ಮನಿದ್ದರೆ ಅವೂ ಕೂಡ ಸೌಮ್ಯವಾಗು ಬಿಹೇವ್ ಮಾಡುತ್ತವೆ ಅದರೆ ತಡವಿಕೊಂಡರೆ ಮಾತ್ರ ಉಳಿಗಾಲವಿಲ್ಲ. ಅಸ್ಸಾಮಿನ ಕಾಜಿರಂಗ ರಾಷ್ಟ್ರೀಯ ಉದ್ಯಾನವನದಿಂದ (Kaziranga National Park) ಒಂದು ವಿಡಿಯೋ ಲಭ್ಯವಾಗಿದ್ದು ಘೇಂಡಾಮೃಗವೊಂದು (rhinoceros) ಅಪಾಯಕಾರಿ ರೀತಿಯಲ್ಲಿ ಪಾರ್ಕ್ ನಲ್ಲಿ ಸಫಾರಿಗೆಂದು (safari) ತೆರಳಿದ ಪ್ರವಾಸಿಗರ ವಾಹನಗಳನ್ನು ಬೆನ್ನಟ್ಟಿದೆ. ವಿಡಿಯೋದಲ್ಲಿ ಘೇಂಡಾಮೃಗವು ಒಂದು ಇಕ್ಕಟ್ಟಾದ ಮತ್ತು ಕಚ್ಚಾ ರಸ್ತೆಯಲ್ಲಿ ಸಫಾರಿ ವಾಹನಗಳ ಬೆನ್ನಟ್ಟಿರುವುದನ್ನು ನೀವು ನೋಡಬಹುದು. ಮುಂಭಾಗದ ವಾಹನದಲ್ಲಿರುವ ವ್ಯಕ್ತಿಯೊಬ್ಬ ಆತಂಕದಿಂದ ‘ಓಡು’ ಅಂತ ಅರಚುವುದನ್ನು ಕೇಳಿಸಿಕೊಳ್ಳಬಹುದು. ಕೆಲ ಕಿಮೀಗಳವರೆಗೆ ಅವರ ಹಿಂದೆ ಓಡಿ ದಣಿಯುವ ಮೃಗವು ನಂತರ ಪೊದೆಗಳಲ್ಲಿ ಮಾಯವಾಗಿದೆ! ಅದೃಷ್ಟವಶಾತ್ ವಾಹನಗಳಲ್ಲಿದ್ದ ಯಾವುದೇ ಪ್ರವಾಸಿಗನಿಗೆ ಗಾಯವಾಗಿಲ್ಲ.

ಇದೇ ರೀತಿ, ಅಸ್ಸಾಮಿನ ಮಾನಸ್ ರಾಷ್ಟ್ರೀಯ ಉದ್ಯಾವನದಲ್ಲೂ ಘೇಂಡಾಮೃಗವೊಂದು ಸಫಾರಿ ವಾಹನವೊಂದರ ಹಿಂದೆ ಓಡಿದ ಘಟನೆ ಸಂಭವಿಸಿತ್ತು. ಎ ಎನ್ ಐ ಸುದ್ದಿಸಂಸ್ಥೆಯ ಪ್ರಕಾರ ಆ ಸಂದರ್ಭದಲ್ಲ್ಲೂ ಯಾರೂ ಗಾಯಗೊಂಡಿರಲಿಲ್ಲ. ಎಎನ್ ಐ ವರದಿಯಂತೆ ಸಫಾರಿ ಜೀಪ್ ಅರಣ್ಯ ಪ್ರದೇಶದಲ್ಲಿ ಚಲಿಸುತ್ತಿದ್ದಾಗ ಇದ್ದಕ್ಕಿದ್ದಂತೆ ಪೊದೆಯೊಂದರಿಂದ ಪ್ರತ್ಯಕ್ಷವಾದ ಘೇಂಡಾಮೃಗವೊಂದು ವಾಹನದ ಬೆನ್ನಟ್ಟಿತ್ತು. ಅಪಾಯದ ಸೂಚನೆ ಅರಿತ ಜೀಪಿನ ಚಾಲಕ ವೇಗವನನ್ನು ಹೆಚ್ಚಿಸಿ ಅದರಿಂದ ಪಾರಾಗಿದ್ದ.

ಇದನ್ನೂ ಓದಿ:  ವಿದೇಶಗಳಲ್ಲಿ ಕೊರೊನಾ ರೂಪಾಂತರಿ ವೈರಸ್ ಪತ್ತೆ ಬೆನ್ನಲ್ಲೇ ಕರ್ನಾಟಕದಲ್ಲಿ ಹೇಗಿದೆ ನೋಡಿ ಸಿದ್ದತೆ

ರಾಷ್ಟ್ರೀಯ ಪಾರ್ಕ್ ಪ್ರಾಧಿಕಾರ ಇತ್ತೀಚಿಗೆ ನಡೆಸಿದ ಗಣತಿಯೊಂದರ ಪ್ರಕಾರ ಕಾಜಿರಂಗ ರಾಷ್ಟ್ರೀಯ ಉದ್ಯಾವನದಲ್ಲಿ 2,613 ಘೇಂಡಾಮೃಗಳಿದ್ದು ಅವುಗಳ ಸಂಖ್ಯೆ ಪ್ರತಿ ವರ್ಷ ಹೆಚ್ಚುತ್ತಲೇ ಇದೆ.

ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 4:30 pm, Sat, 31 December 22