ವಿದೇಶಗಳಲ್ಲಿ ಕೊರೊನಾ ರೂಪಾಂತರಿ ವೈರಸ್ ಪತ್ತೆ ಬೆನ್ನಲ್ಲೇ ಕರ್ನಾಟಕದಲ್ಲಿ ಹೇಗಿದೆ ನೋಡಿ ಸಿದ್ದತೆ

ಚೀನಾ ಸೇರಿದಂತೆ‌ ಇತರೆ ದೇಶಗಳಲ್ಲಿ ಕೊರೊನಾ ಆರ್ಭಟಕ್ಕೆ ಬೆಂಗಳೂರು ತತ್ತರಿಸಿದೆ. ಹೀಗಾಗಿ ಪೂರ್ವ ಸಿದ್ಧತೆಗೆ ರಾಜ್ಯ ಸರ್ಕಾರ ಮುಂದಾಗಿದೆ.

ವಿದೇಶಗಳಲ್ಲಿ ಕೊರೊನಾ ರೂಪಾಂತರಿ ವೈರಸ್ ಪತ್ತೆ ಬೆನ್ನಲ್ಲೇ ಕರ್ನಾಟಕದಲ್ಲಿ ಹೇಗಿದೆ ನೋಡಿ ಸಿದ್ದತೆ
ಪ್ರಾತಿನಿಧಿಕ ಚಿತ್ರImage Credit source: PTI
Follow us
TV9 Web
| Updated By: ಆಯೇಷಾ ಬಾನು

Updated on: Dec 25, 2022 | 9:31 AM

ಬೆಂಗಳೂರು: ವಿದೇಶಗಳಲ್ಲಿ ಕೊರೊನಾ ರೂಪಾಂತರಿ ವೈರಸ್(Corona Variant) ಪತ್ತೆ ಬೆನ್ನಲ್ಲೇ ರಾಜ್ಯ ಸರ್ಕಾರ ಅಲರ್ಟ್​ ಆಗಿದೆ. ರಾಜ್ಯದಲ್ಲೂ ಕಟ್ಟೆಚ್ಚರ ವಹಿಸಿದೆ. ಒಮಿಕ್ರಾನ್(​​​​Omicron) ಉಪತಳಿ ಕಂಟ್ರೋಲ್‌ಗೆ ಸಮರೋಪಾದಿ ಸಿದ್ಧತೆ ಮಾಡ್ತಿದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಬೆಡ್ ವ್ಯವಸ್ಥೆಗೆ ಸರ್ಕಾರ ಸೂಚನೆ ನೀಡಿದೆ. ಸರ್ಕಾರದ ನಿರ್ದೇಶನ ಮೇರೆಗೆ ಆಸ್ಪತ್ರೆಗಳು ಕಾರ್ಯ ಪ್ರವೃತ್ತರಾಗಿವೆ. ಮೊದಲ ಮತ್ತು ಎರಡನೇ ಅಲೆಯ ರೀತಿಯೇ ಬೆಡ್​ಗಳ ವ್ಯವಸ್ಥೆ ಮಾಡಲಾಗುತ್ತಿದೆ.

ರಾಜ್ಯ ರಾಜಧಾನಿ ಬೆಂಗಳೂರಿನಲ್ಲೂ ಕೊರೊನಾ ಆತಂಕ ಹಿನ್ನೆಲೆ ಕೊರೊನಾ 4ನೇ ಅಲೆ ಎದುರಿಸಲು ಸರ್ಕಾರಿ ಆಸ್ಪತ್ರೆಗಳು ಸಜ್ಜಾಗಿವೆ. ರೋಗಿಗಳನ್ನ ದಾಖಲು ಮಾಡಿಕೊಳ್ಳಲು ರಾಜೀವ್ ಗಾಂಧಿ ಎದೆ ರೋಗಗಳ ಸಂಸ್ಥೆ ಸನ್ನದ್ಧವಾಗಿದೆ. SARI, ILI ಕೇಸ್​ಗಳಿಗೆ ಪ್ರತ್ಯೇಕ ಕೊಠಡಿ, ರೂಂಗಳ ವ್ಯವಸ್ಥೆ ಮಾಡಲಾಗಿದ್ದು ಸುಮಾರು 186 ಬೆಡ್​ಗಳನ್ನು ರಾಜೀವ್ ಗಾಂಧಿ ಆಸ್ಪತ್ರೆ ಸಿದ್ದಪಡಿಸಿದೆ. ಆಕ್ಸಿಜನ್, ವೆಂಟಿಲೇಟರ್ ಸೇರಿದಂತೆ ಉತ್ತಮ ವ್ಯವಸ್ಥೆಯೊಂದಿಗೆ ಸಕಲ ಸಿದ್ದತೆ ಮಾಡಿಕೊಳ್ಳಲಾಗಿದೆ ಎಂದು ರಾಜೀವ್ ಗಾಂಧಿ ಎದೆ ರೋಗಗಳ ಸಂಸ್ಥೆಯ ನಿರ್ದೇಶಕ ಡಾ‌.ಸಿ ನಾಗರಾಜ್ ತಿಳಿಸಿದ್ದಾರೆ.

ಕೊರೊನಾ ಕಂಟ್ರೋಲ್​ಗೆ ಬೆಂಗಳೂರಲ್ಲಿ ಹೇಗಿದೆ ಸಿದ್ಧತೆ?

ಚೀನಾ ಸೇರಿದಂತೆ‌ ಇತರೆ ದೇಶಗಳಲ್ಲಿ ಕೊರೊನಾ ಆರ್ಭಟಕ್ಕೆ ಬೆಂಗಳೂರು ತತ್ತರಿಸಿದೆ. ಹೀಗಾಗಿ ಪೂರ್ವ ಸಿದ್ಧತೆಗೆ ರಾಜ್ಯ ಸರ್ಕಾರ ಮುಂದಾಗಿದೆ. ಜನ ಸೇರುವ ಪ್ರದೇಶಗಳು, ಹೋಟೆಲ್, ಪಬ್, ಮಾರುಕಟ್ಟೆ, ಸ್ಲಮ್ ಗಳ ಮೇಲೆ ತೀವ್ರ ನಿಗಾ ಇಡಲಾಗುತ್ತಿದೆ. ಬೆಂಗಳೂರಿನಲ್ಲಿ ಕ್ಲೋಸ್ ಆಗಿದ್ದ ಕೋವಿಡ್ ಸೆಂಟರ್​ಗಳು ರೀ ಓಪನ್ ಆಗುವ ಸಾಧ್ಯತೆ ಇದೆ. ಆಸ್ಪತ್ರೆಗಳಲ್ಲಿ ಕೋವಿಡ್ ವಾರ್ಡ್ ನಿರ್ಮಾಣಕ್ಕೆ ಸಿದ್ಧತೆ ನಡೆಯುತ್ತಿದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಆಕ್ಸಿಜನ್ ವ್ಯವಸ್ಥೆ, ಕೋವಿಡ್ ಕೇರ್ ಸೆಂಟರ್​ಗಳ ನಿರ್ಮಾಣ ಮಾಡಲಾಗುತ್ತಿದೆ. ಸಿಬ್ಬಂದಿಗಳು ಹಾಗೂ ವೈದ್ಯರನ್ನ ಸ್ಟ್ಯಾಂಡ್ ಬೈನಲ್ಲಿ ಇಟ್ಟುಕೊಳ್ಳಲಾಗುತ್ತಿದೆ.

ಇದನ್ನೂ ಓದಿ: 4th Dose Vaccination: ಚೀನಾದಲ್ಲಿ ಕೊರೊನಾ ಸೋಂಕು ತೀವ್ರಗೊಂಡ ಬೆನ್ನಲ್ಲೇ ಭಾರತದಲ್ಲಿ 4ನೇ ಡೋಸ್ ಲಸಿಕೆ ಬಗ್ಗೆ ಚಿಂತನೆ ಆರಂಭ

ಕೊರೊನಾ ಸ್ಥಿತಿಗತಿ ಬಗ್ಗೆ ಸೋಮವಾರ ಸಭೆ ನಡೆಯಲಿದೆ. ಸಭೆಯಲ್ಲಿ ವಿದೇಶಿ ಪ್ರಯಾಣಿಕರಿಗೆ ಕಡ್ಡಾಯ ಕೋವಿಡ್ ನೆಗೆಟಿವ್ ರಿಪೋರ್ಟ್ ಬಗ್ಗೆ, ಬೇರೆ ದೇಶದಲ್ಲಿ ಯಾವ ರೀತಿಯ ಸ್ಥಿತಿ ಇದೆ ಎಂಬುವುದರ ಬಗ್ಗೆ ಚರ್ಚೆ ನಡೆಯಲಿದೆ. ಬೆಂಗಳೂರಿಗೆ ಹೊಸ ವೈರಸ್ ಎಂಟ್ರಿ ಕೊಟ್ರೆ ಯಾವ ದೇಶದಿಂದ ಬರಬಹುದು? ವಿದೇಶಿ ಪ್ರಯಾಣಿಕರ ಮೇಲೆ ಹೇಗೆ ನಿಗಾ ಇಡಬೇಕು? ಜನರಲ್ಲಿ ಜಾಗೃತಿ ಮೂಡಿಸುವುದು ಹೇಗೆ? ಕಠಿಣ ಕ್ರಮಕ್ಕಿಂತ ಬೇರೆ ಉಪಾಯ ಏನಿದೆ? ಆರ್ಥಿಕತೆ ಮೇಲೆ ಪ್ರಭಾವ ಬೀರದಂತೆ ಕೊರೊನಾ ತಡೆಗಟ್ಟುವುದು ಹೇಗೆ? ಬೆಂಗಳೂರಿಗೆ ಕಠಿಣ ರೂಲ್ಸ್ ಅವಶ್ಯಕತೆ ಇದೆಯಾ? ನ್ಯೂಇಯರ್ ನಿಂದ ಬೆಂಗಳೂರಿಗೆ ಗಂಡಾಂತರ ಇದೆಯಾ? ನ್ಯೂಇಯರ್ ಸೆಲೆಬ್ರೆಶನ್ ಹೇಗಿರಬೇಕೆಂದ್ದು ಚರ್ಚೆ ನಡೆಯಲಿದೆ. ಬೂಸ್ಟರ್ ಡೋಸ್ ಕಡ್ಡಾಯಗೊಳಿಸುವ ಬಗ್ಗೆ ಚರ್ಚೆ ನಡೆಯಲಿದೆ. ಕಂದಾಯ ಸಚಿವ ಅಶೋಕ್, ಸಚಿವ ಸುಧಾಕರ್, ಆರೋಗ್ಯ ಇಲಾಖೆ ಆಯುಕ್ತರು, ಕೋವಿಡ್ ತಜ್ಞರ ಸಲಹಾ ಸಮಿತಿ, ಬಿಬಿಎಂಪಿ ಮುಖ್ಯ ಆಯುಕ್ತ, ಪೊಲೀಸ್ ಇಲಾಖೆ ಸೇರಿದಂತೆ ಹಿರಿಯ ಅಧಿಕಾರಿಗಳು ಭಾಗಿಯಾಗುವ ಸಾಧ್ಯತೆ ಇದೆ.

ಬೆಂಗಳೂರಿನ ಪ್ರತ್ಯೇಕ ಗೈಡ್ಲೈನ್ಸ್ ಹೇಗಿರುತ್ತೆ?

ನ್ಯೂಇಯರ್ ಗೆ ಸಂಬಂಧಿಸಿದಂತೆ ಪ್ರತ್ಯೇಕ ಗೈಡ್ಲೈನ್ಸ್ ಬರುವ ಸಾಧ್ಯತೆ ಇದೆ, ಬ್ರಿಗೇಡ್ ರೋಡ್, ಎಂಜಿ ರೋಡ್, ಚರ್ಚ್ ಸ್ಟ್ರೀಟ್, ಕೋರಮಂಗಲ, ಇಂದಿರಾ ನಗರ ಭಾಗದಲ್ಲಿ ಭಾರೀ ಜನ ಸಂಖ್ಯೆ ಸೇರುವ ಕಾರಣ ರೋಡ್ ಸೆಲೆಬ್ರೆಷನ್​ನಲ್ಲಿ ಜನಜಂಗುಳಿ ಹಿನ್ನಲೆ ಪ್ರತ್ಯೇಕ ಗೈಡ್ಲೈನ್ಸ್ ತರುವ ಸಾಧ್ಯತೆ ಇದೆ. ವ್ಯಾಪಾರ ವಹಿವಾಟಿಗೆ ಧಕ್ಕೆ ಬಾರದಂತೆ ಗೈಡ್ಲೈನ್ಸ್ ಜಾರಿ ಮಾಡಲಾಗುತ್ತೆ. ರೋಡ್ ಸೆಲೆಬ್ರೆಷನ್​ಗೆ ಬ್ರೇಕ್ ಬೀಳುವ ಸಾಧ್ಯತೆ ಇದೆ. ಪಬ್, ಬಾರ್, ರೆಸ್ಟೋರೆಂಟ್ ವ್ಯಾಪಾರಕ್ಕೆ ಯಾವುದೇ ಅಡ್ಡಿ ಇರಲ್ಲ.

ಇದನ್ನೂ ಓದಿ: Corona in India: BF.7 ಕೊರೊನಾ ತಳಿ ನಿಮ್ಮ ಬಳಿ ಸುಳಿಯದಿರಲು ವೈದ್ಯರ ಈ ಸಲಹೆ ಪಾಲಿಸಿ

ವಿದೇಶದಿಂದ ಬರುವ ಪ್ರಯಾಣಿಕರಿಗೆ ಆರ್​ಟಿಪಿಸಿಆರ್​​ ಟೆಸ್ಟ್

ಕೊರೊನಾ ಒಮಿಕ್ರಾನ್ ರೂಪಾಂತರಿ ತಳಿ BF.7 ಭೀತಿ ಹಿನ್ನೆಲೆ RT-PCR​​​​ ಟೆಸ್ಟ್​​ಗೆ ಕೆಂಪೇಗೌಡ ವಿಮಾನ ನಿಲ್ದಾಣದಲ್ಲೂ ಸಿದ್ಧತೆ ಜೋರಾಗಿದೆ. ಚೀನಾ, ಹಾಂಕಾಂಗ್​, ಜಪಾನ್​, ದ.​ಕೊರಿಯಾ, ಥೈಲ್ಯಾಂಡ್ ಸೇರಿ ಸೋಂಕು ಹೆಚ್ಚಿರುವ ದೇಶಗಳಿಂದ ಬರುವವರಿಗೆ ಆರ್​ಟಿಪಿಸಿಆರ್​​ ಟೆಸ್ಟ್​ ಕಡ್ಡಾಯ ಮಾಡಲಾಗಿದೆ. ಆರೋಗ್ಯ ಇಲಾಖೆ RT-PCR ಟೆಸ್ಟ್​​ಗೆ ಕೌಂಟರ್​ಗಳನ್ನು ತೆರೆದಿದೆ. 2 ನೋಂದಣಿ​ ಕೌಂಟರ್​ ಹಾಗೂ 6 ಟೆಸ್ಟಿಂಗ್​ ಕೌಂಟರ್​ ಓಪನ್​ ಮಾಡಿದೆ. ಟೆಸ್ಟ್ ವೇಳೆ ಪಾಸಿಟಿವ್​ ಬರುವ ಪ್ರಯಾಣಿಕರಿಗೆ ಕ್ವಾರಂಟೈನ್ ಮಾಡಲಾಗುತ್ತೆ. ಈಗಾಗಲೇ ಟೆಸ್ಟಿಂಗ್​​ಗಾಗಿ ಆರೋಗ್ಯ ಇಲಾಖೆ ಸಿಬ್ಬಂದಿ ನೇಮಕ ಮಾಡಿದೆ.

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್