ನಂಬರ್ ಪ್ಲೇಟ್​​ ಸರಿಯಿಲ್ಲದಿದ್ದರೆ ಗಾಡಿ ಲಾಕ್; ಕಳ್ಳಾಟ ಆಡುವ ಸವಾರರ ಬೆನ್ನಿಗೆ ಬಿದ್ದ ಬೆಂಗಳೂರು ಸಂಚಾರಿ ಪೊಲೀಸರು

ಗಾಡಿಯ ನಂಬರ್ ಪ್ಲೇಟ್​ನಲ್ಲಿ ಸ್ವಲ್ಪ ಡೌಟ್ ಬಂದ್ರೂ ನಿಂತಲ್ಲೇ ಲಾಕ್ ಮಾಡ್ತಾರೆ. ಗಾಡಿ ಮೇಲೆ ಬೀಳೋ ಫೈನ್ ತಪ್ಪಿಸೋಕೆ ನಂಬರ್ ಬದಲಾಯಿಸಿಕೊಂಡು ಓಡಾಡುವ ಸವಾರರನ್ನೇ ಸಂಚಾರಿ ಪೊಲೀಸರು ಟಾರ್ಗೆಟ್ ಮಾಡಿ ಬಲೆ ಬೀಸಿದ್ದಾರೆ.

ನಂಬರ್ ಪ್ಲೇಟ್​​ ಸರಿಯಿಲ್ಲದಿದ್ದರೆ ಗಾಡಿ ಲಾಕ್; ಕಳ್ಳಾಟ ಆಡುವ ಸವಾರರ ಬೆನ್ನಿಗೆ ಬಿದ್ದ ಬೆಂಗಳೂರು ಸಂಚಾರಿ ಪೊಲೀಸರು
ನಂಬರ್ ಪ್ಲೇಟ್​​ ಸರಿಯಿಲ್ಲದಿದ್ದರೆ ಗಾಡಿ ಲಾಕ್
Follow us
TV9 Web
| Updated By: ಆಯೇಷಾ ಬಾನು

Updated on:Dec 25, 2022 | 11:42 AM

ಬೆಂಗಳೂರು: ರಸ್ತೆ ಬದಿ ಬೈಕ್​ ಪಾರ್ಕ್​ ಮಾಡುವ ಸಿಲಿಕಾನ್ ಸಿಟಿ ಮಂದಿ ಇನ್ನುಮುಂದೆ ಸ್ವಲ್ಪ ಎಚ್ಚರದಿಂದಿರಿ. ನಿಮ್ಮ ವಾಹನಗಳ ನಂಬರ್ ಪ್ಲೇಟ್​ ಸರಿಯಾಗಿ ಇಲ್ಲದಿದ್ದರೆ ಈ ಕೂಡಲೇ ಸರಿ ಮಾಡಿಸಿಕೊಳ್ಳಿ. ಏಕೆಂದರೆ ಬೆಂಗಳೂರು ಪೊಲೀಸರು ನಿಮ್ಮ ವಾಹನಗಳ ನಂಬರ್ ಪ್ಲೇಟ್​ಗಳ ಮೇಲೆ ಕಣ್ಣಿಟ್ಟಿದ್ದಾರೆ. ದೋಷಪೂರಿತ ನಂಬರ್ ಪ್ಲೇಟ್​ ಕಂಡು ಬಂದರೆ ನಿಮ್ಮ ವಾಹನಗಳ ವ್ಹೀಲ್ ಲಾಕ್ ಮಾಡಿ ಹೋಗ್ತಾರೆ.

ಗಾಡಿಯ ನಂಬರ್ ಪ್ಲೇಟ್​ನಲ್ಲಿ ಸ್ವಲ್ಪ ಡೌಟ್ ಬಂದ್ರೂ ನಿಂತಲ್ಲೇ ಲಾಕ್ ಮಾಡ್ತಾರೆ. ಗಾಡಿ ಮೇಲೆ ಬೀಳೋ ಫೈನ್ ತಪ್ಪಿಸೋಕೆ ನಂಬರ್ ಬದಲಾಯಿಸಿಕೊಂಡು ಓಡಾಡುವ ಸವಾರರನ್ನೇ ಸಂಚಾರಿ ಪೊಲೀಸರು ಟಾರ್ಗೆಟ್ ಮಾಡಿ ಬಲೆ ಬೀಸಿದ್ದಾರೆ. ನಗರದಲ್ಲಿ ದೋಷಪೂರಿತ ನಂಬರ್ ಪ್ಲೇಟ್​ಗಳ ಗಾಡಿಗಳು ಹೆಚ್ಚಾಗಿವೆ. ಕೆಲ ಕ್ರಿಮಿನಲ್​ಗಳು ದೋಷಪೂರಿತ ನಂಬರ್ ಪ್ಲೇಟ್ ಬಳಸಿ ಗಾಡಿ ಬಳಸುತ್ತಿದ್ದಾರೆ. ಫೇಕ್ ನಂಬರ್ ಪ್ಲೇಟ್, ದೋಷಪೂರಿತ ನಂಬರ್ ಪ್ಲೇಟ್ ಬಳಸಿ ವಾಹನ ಓಡಿಸುತ್ತಿದ್ದಾರೆ. ಮತ್ತೊಂದೆಡೆ ಯುವಕರು ಸ್ಟೈಲಿಷ್ ಆಗಿ ನಂಬರ್ ಪ್ಲೇಟ್ ಹಾಕಿಸಿಕೊಳ್ತಿದ್ದಾರೆ. ನಂಬರ್ ಸ್ಟೈಲಿಷ್, ಎಕ್ಸ್‌ಟ್ರಾ ಸ್ಟಿಕ್ಕರ್ ಹಾಕಿಸಿ ವಾಹನ ಬಳಕೆ ಮಾಡುತ್ತಿರುವ ಬಗ್ಗೆ ಸಂಚಾರಿ ಪೊಲೀಸರ ಗಮನಕ್ಕೆ ಬಂದಿದೆ. ಹೀಗಾಗಿ ಈ ರೀತಿ ಮಾಡೋರ ಮೇಲೆ ಸಂಚಾರಿ ಪೊಲೀಸರು ಕಣ್ಣಿಟ್ಟಿದ್ದಾರೆ.

ಇದನ್ನೂ ಓದಿ: ಇನ್ಮುಂದೆ ಪೊಲೀಸರ ಕಾರ್ಯಕ್ಕೂ ನೀಡಬಹುದು ಸ್ಟಾರ್​​ ರೇಟಿಂಗ್​; ಬೆಂಗಳೂರು ಪೊಲೀಸ್ ಠಾಣೆ ಮುಂದೆ ಇರಲಿದೆ ಕ್ಯೂ ಆರ್ ಕೋಡ್ ಬೋರ್ಡ್

ಒಮ್ಮೆ ಗಾಡಿ ಲಾಕ್​ ಆದ್ರೆ ಕೋರ್ಟ್​ನಲ್ಲೇ ಪಡೀಬೇಕು

ಈಗಾಗಲೇ ಕೆಲಸ ಶುರು ಮಾಡಿರೋ ಪಶ್ಚಿಮ‌ ವಿಭಾಗದ ಸಂಚಾರಿ ಪೊಲೀಸರು ಒಮ್ಮೆ ಗಾಡಿ ಲಾಕ್ ಮಾಡಿದ್ರೆ ಅದನ್ನು ಕೋರ್ಟ್ ನಲ್ಲಿಯೇ ಇತ್ಯಾರ್ಥ ಮಾಡಿ ದಂಡ ಕಟ್ಟಿ ಗಾಡಿ ಪಡೀಬೇಕು. ಯಾಕೆ ಆ ರೀತಿ ಸ್ಟಿಕ್ಕರ್ ಹಾಕಿಸಿದ್ದು, ದೋಷಪೂರಿತ ಪ್ಲೇಟ್ ಯಾಕೆ? ಈ ಎಲ್ಲಾ ಉತ್ತರದ ಜೊತೆಗೆ ಪಕ್ಕಾ ಡಾಕ್ಯುಮೆಂಟ್, ಲೈಸೆನ್ಸ್ ತೋರಿಸಿ ಗಾಡಿ ಹಿಂಪಡೆಯಬಹುದು. ಸದ್ಯ ದೋಷಪೂರಿತ ನಂಬರ್ ಪ್ಲೇಟ್ ಬಳಸೋ ವಾಹನ ಸವಾರರ ಮೇಲೆ ಪೊಲೀಸರು ಕಣ್ಣಿಟ್ಟಿದ್ದಾರೆ.

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 11:42 am, Sun, 25 December 22

ಕ್ರೇನ್ ಮೂಲಕ ಪುನಃ ಚಕ್ರಗಳ ಮೇಲೆ ನಿಲ್ಲುವಂದಾದ ಕೆಎಸ್ಸಾರ್ಟಿಟಿಸಿ ಬಸ್ಸು
ಕ್ರೇನ್ ಮೂಲಕ ಪುನಃ ಚಕ್ರಗಳ ಮೇಲೆ ನಿಲ್ಲುವಂದಾದ ಕೆಎಸ್ಸಾರ್ಟಿಟಿಸಿ ಬಸ್ಸು
ಪೊಲೀಸರು ನನ್ನ ಮಾತೇ ಕೇಳಲ್ಲ ಎಂದು ಜ್ಞಾನೇಂದ್ರ ಹೇಳಿದ್ದರು: ಯತ್ನಾಳ್
ಪೊಲೀಸರು ನನ್ನ ಮಾತೇ ಕೇಳಲ್ಲ ಎಂದು ಜ್ಞಾನೇಂದ್ರ ಹೇಳಿದ್ದರು: ಯತ್ನಾಳ್
‘ಬಾಯ್ಸ್ vs ಗರ್ಲ್ಸ್​’ ರಿಯಾಲಿಟಿ ಶೋನಲ್ಲಿ ಜಗದೀಶ್, ಶೋಭಾ ಶೆಟ್ಟಿ
‘ಬಾಯ್ಸ್ vs ಗರ್ಲ್ಸ್​’ ರಿಯಾಲಿಟಿ ಶೋನಲ್ಲಿ ಜಗದೀಶ್, ಶೋಭಾ ಶೆಟ್ಟಿ
ಯತ್ನಾಳ್ ದೂರು ನೀಡಿದರೆ ವಿಜಯೇಂದ್ರ ವಿರುದ್ಧ ತನಿಖೆ: ಪ್ರಿಯಾಂಕ್ ಖರ್ಗೆ
ಯತ್ನಾಳ್ ದೂರು ನೀಡಿದರೆ ವಿಜಯೇಂದ್ರ ವಿರುದ್ಧ ತನಿಖೆ: ಪ್ರಿಯಾಂಕ್ ಖರ್ಗೆ
ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
14 ತಿಂಗಳುಗಳ ಬಳಿಕ ಮೊಹಮ್ಮದ್ ಶಮಿ ಎಂಟ್ರಿ: ವಿಡಿಯೋ ಹಂಚಿಕೊಂಡ ಬಿಸಿಸಿಐ
14 ತಿಂಗಳುಗಳ ಬಳಿಕ ಮೊಹಮ್ಮದ್ ಶಮಿ ಎಂಟ್ರಿ: ವಿಡಿಯೋ ಹಂಚಿಕೊಂಡ ಬಿಸಿಸಿಐ
ವಿಜಯಪುರದಲ್ಲಿ ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್​
ವಿಜಯಪುರದಲ್ಲಿ ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್​
ಗೃಹ ಇಲಾಖೆ ನೀಡುವ ಸೂಚನೆಗಳನ್ನು ಬ್ಯಾಂಕ್​ಗಳು ಪಾಲಿಸುತ್ತಿಲ್ಲ: ಪರಮೇಶ್ವರ್
ಗೃಹ ಇಲಾಖೆ ನೀಡುವ ಸೂಚನೆಗಳನ್ನು ಬ್ಯಾಂಕ್​ಗಳು ಪಾಲಿಸುತ್ತಿಲ್ಲ: ಪರಮೇಶ್ವರ್
ಉದ್ಯಮಿಗೆ ಹಲ್ಲೆ ಮಾಡಿ ಹಣ ಕಸಿದು ಕಾರು ಸಮೇತ ಪರಾರಿಯಾದ ಮುಸುಕುಧಾರಿಗಳು
ಉದ್ಯಮಿಗೆ ಹಲ್ಲೆ ಮಾಡಿ ಹಣ ಕಸಿದು ಕಾರು ಸಮೇತ ಪರಾರಿಯಾದ ಮುಸುಕುಧಾರಿಗಳು
ಬಾಗಲಕೋಟೆಯ ಪ್ರೌಢ ಮತ್ತು ಪ್ರಾಥಮಿಕ ಶಾಲೆಗಳಿಗೆ ರಜೆ ಘೋಷಣೆ
ಬಾಗಲಕೋಟೆಯ ಪ್ರೌಢ ಮತ್ತು ಪ್ರಾಥಮಿಕ ಶಾಲೆಗಳಿಗೆ ರಜೆ ಘೋಷಣೆ