Karnataka Assembly Polls; ಗೀತಕ್ಕ ನನ್ನ ಬಲೆಗೆ ಬೀಳಲಿಲ್ಲ ಆದರೆ ರಾಹುಲ್ ಗಾಂಧಿ ಬಲೆಗೆ ಬಿದ್ದಿದ್ದಾರೆ: ಡಿಕೆ ಶಿವಕುಮಾರ್

Karnataka Assembly Polls; ಗೀತಕ್ಕ ನನ್ನ ಬಲೆಗೆ ಬೀಳಲಿಲ್ಲ ಆದರೆ ರಾಹುಲ್ ಗಾಂಧಿ ಬಲೆಗೆ ಬಿದ್ದಿದ್ದಾರೆ: ಡಿಕೆ ಶಿವಕುಮಾರ್

ಅರುಣ್​ ಕುಮಾರ್​ ಬೆಳ್ಳಿ
|

Updated on:Apr 28, 2023 | 2:36 PM

ಸೋನಿಯಾ ಮತ್ತು ರಾಹುಲ್ ಗಾಂಧಿ ಅವರಿಗೆ ಮಹಿಳೆಯರ ಬಗ್ಗೆ ಇರುವ ಗೌರವ ಮತ್ತು ವಾತ್ಸಲ್ಯ ಕಂಡು ಗೀತಕ್ಕ ಕಾಂಗ್ರೆಸ್ ಸೇರುವ ನಿರ್ಧಾರ ಮಾಡಿದ್ದಾರೆ, ಅವರಿಗೆ ತುಂಬು ಹೃದಯದ ಸ್ವಾಗತ ಎಂದು ಶಿವಕುಮಾರ್ ಹೇಳಿದರು.

ಬೆಂಗಳೂರು: ಕರ್ನಾಟಕದಲ್ಲಿ ದೊಡ್ಮನೆ ಅಂತ ಗುರುತಿಸಿಕೊಳ್ಳುವ ದಿವಂಗತ ಡಾ ರಾಜ್ ಕುಮಾರ್ (Dr Raj Kumar) ಅವರ ಕುಟುಂಬದ ಹಿರಿ ಸೊಸೆ ಮತ್ತು ನಟ ಶಿವರಾಜಕುಮಾರ್ ಅವರ ಪತ್ನಿ ಗೀತಾ ಶಿವರಾಜಕುಮಾರ್ (Geeta Shivarajkumar) ಇಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ (DK Shivakumar) ಸಮಕ್ಷಮ ಕಾಂಗ್ರೆಸ್ ಪಕ್ಷ ಸೇರಿದರು. ಅವರನ್ನು ಪಕ್ಷಕ್ಕೆ ಬರಮಾಡಿಕೊಂಡ ಬಳಿಕ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಟಿಯೊಂದನ್ನು ಉದ್ದೇಶಿಸಿ ಮಾತಾಡಿದ ಶಿವಕುಮಾರ್, ‘ಗೀತಕ್ಕ ನನ್ನ ಬಲೆಗೆ ಬೀಳಲಿಲ್ಲ ಆದರೆ ರಾಹುಲ್ ಗಾಂಧಿ ಬಲೆಗೆ ಬಿದ್ದಿದ್ದಾರೆ,’ ಎಂದು ನಗೆಯಾಡಿದರು. ದೊಡ್ಮನೆಯ ಸೊಸೆ, ಶಿವಣ್ಣನವರ ಧರ್ಮಪತ್ನಿ, ತಮ್ಮ ಅಚ್ಚುಮೆಚ್ಚಿನ ನಾಯಕ ದಿವಂಗತ ಬಂಗಾರಪ್ಪನವರ ಪುತ್ರ ಮತ್ತು ಕಾಂಗ್ರೆಸ್ ನಾಯಕ ಮಧು ಬಂಗಾರಪ್ಪ ಅವರ ಅಕ್ಕ ಗೀತಾ ಅವರು; ಸೋನಿಯಾ ಮತ್ತು ರಾಹುಲ್ ಗಾಂಧಿ ಅವರಿಗೆ ಮಹಿಳೆಯರ ಬಗ್ಗೆ ಇರುವ ಗೌರವ ಮತ್ತು ವಾತ್ಸಲ್ಯ ಕಂಡು ಕಾಂಗ್ರೆಸ್ ಸೇರುವ ನಿರ್ಧಾರ ಮಾಡಿದ್ದಾರೆ, ಅವರಿಗೆ ತುಂಬು ಹೃದಯದ ಸ್ವಾಗತ ಎಂದು ಶಿವಕುಮಾರ್ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮತ್ತಷ್ಟು ಚುನಾವಣಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Apr 28, 2023 02:35 PM