Karnataka Assembly Polls: ಪ್ರಧಾನಿ ಮೋದಿಯನ್ನು ನಾಗರಹಾವಿಗೆ ಹೋಲಿಸುವ ಖರ್ಗೆ ಅಧಿನಾಯಕಿ ಸೋನಿಯಾ ಗಾಂಧಿ ವಿಷಕನ್ಯೆಯೇ? ಬಸನಗೌಡ ಯತ್ನಾಳ್

Karnataka Assembly Polls: ಪ್ರಧಾನಿ ಮೋದಿಯನ್ನು ನಾಗರಹಾವಿಗೆ ಹೋಲಿಸುವ ಖರ್ಗೆ ಅಧಿನಾಯಕಿ ಸೋನಿಯಾ ಗಾಂಧಿ ವಿಷಕನ್ಯೆಯೇ? ಬಸನಗೌಡ ಯತ್ನಾಳ್

ಅರುಣ್​ ಕುಮಾರ್​ ಬೆಳ್ಳಿ
|

Updated on: Apr 28, 2023 | 3:53 PM

ಕಳೆದ ಲೋಕಸಭೆ ಚುನಾವಣೆಯಲ್ಲಿ ಪ್ರಧಾನಿಗಳನ್ನು ಕುರಿತು ಹೀಗೆಲ್ಲ ಮಾತಾಡಿದ್ದರಿಂದಲೇ ಖರ್ಗೆ ಕಲಬುರಗಿಯಲ್ಲಿ ಸೋಲುಂಡರು ಎಂದು ಯತ್ನಾಳ್ ಹೇಳಿದರು.

ಕೊಪ್ಪಳ: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಪ್ರಧಾನ ಮಂತ್ರಿ ನರೇಂದ್ರ ಮೋದಿಯವರನ್ನು (PM Narendra Modi) ನಾಗರಹಾವಿಗೆ ಹೋಲಿಸಿದಕ್ಕೆ ಪ್ರತಿಕ್ರಿಯಿಸಿರುವ ಬಿಜೆಪಿ ನಾಯಕ ಬಸನಗೌಡ ಪಾಟೀಲ್ ಯತ್ನಾಳ್ (Basangouda Patil Yatnal), ಸೋನಿಯಾ ಗಾಂಧಿ (Sonia Gandhi) ವಿಷಕನ್ಯೆಯೇ ಎಂದು ಕೇಳಿದ್ದಾರೆ. ಕೊಪ್ಪಳದಲ್ಲಿಂದು ಚುನಾವಣಾ ಪ್ರಚಾರ ಸಭೆಯೊಂದನ್ನು ಉದ್ದೇಶಿಸಿ ಮಾತಾಡಿದ ಯತ್ನಾಳ್, ವಿಶ್ವದ ಅತ್ಯಂತ ಮುಂದುವರಿದ ಮತ್ತು ಶ್ರೀಮಂತ ರಾಷ್ಟ್ರವಾಗಿರುವ ಅಮೆರಿಕ, ಪ್ರಧಾನಿ ಮೋದಿಯವರ ನಾಯಕತ್ವದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿರಬೇಕಾದರೆ, ಕಾಂಗ್ರೆಸ್ ಅಧ್ಯಕ್ಷರ ಬಾಯಿಂದ ಇಂಥ ಪದಗಳು ಬರುತ್ತಿರುವುದು ಅವರಿಗೆ ಮತ್ತು ಪಕ್ಷಕ್ಕೆ ಶೋಭೆ ತರುವಂಥದಲ್ಲ ಎಂದರು. ಮಲ್ಲಿಕಾರ್ಜುನ ಖರ್ಗೆ ಒಬ್ಬ ಹಿರಿಯ ನಾಯಕರಾಗಿದ್ದಾರೆ ಮತ್ತು ಅವರ ಬಗ್ಗೆ ತಮಗೆ ಗೌರವ ಇದೆ ಎಂದ ಯತ್ನಾಳ್, ಕಳೆದ ಲೋಕಸಭೆ ಚುನಾವಣೆಯಲ್ಲಿ ಪ್ರಧಾನಿಗಳನ್ನು ಕುರಿತು ಹೀಗೆಲ್ಲ ಮಾತಾಡಿದ್ದರಿಂದಲೇ ಕಲಬುರಗಿಯಲ್ಲಿ ಸೋಲುಂಡರು ಎಂದು ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮತ್ತಷ್ಟು ಚುನಾವಣಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ