Karnataka Assembly Polls: 5 ವರ್ಷ ನಾಪತ್ತೆಯಾಗಿ ಈಗ ವೋಟು ಕೇಳಲು ಬಂದ ಬಿಜೆಪಿ ಶಾಸಕನನ್ನು ತರಾಟೆಗೆ ತೆಗೆದುಕೊಂಡ ದೇವರ ಹಿಪ್ಪರಗಿ ಮತದಾರರು
5 ವರ್ಷಗಳಲ್ಲಿ ಅವರನ್ನು ಕೇವಲ ಎರಡನೇ ಬಾರಿ ಅವರನ್ನು ನೋಡುತ್ತಿದ್ದೇವೆ ಎಂದು ಕಾನ್ಯಾಳ ಗ್ರಾಮಸ್ಥರು ಅರೋಪಿಸುತ್ತಿದ್ದಾರೆ.
ವಿಜಯಪುರ: ಚುನಾವಣೆಯಲ್ಲಿ ಗೆದ್ದ ಬಳಿಕ ವೋಟು ನೀಡಿದ ಮತದಾರರನ್ನು ಕಡೆಗಣಿಸಿದರೆ ಹೀಗೆಯೇ ಆಗುತ್ತದೆ. ದೇವರ ಹಿಪ್ಪರಗಿ (Devara Hipparagi) ಕ್ಷೇತ್ರದ ಬಿಜೆಪಿ ಶಾಸಕ ಸೋಮನಗೌಡ ಪಾಟೀಲ್ ಸಾಸನೂರ್ (Somanagouda Patil Sasnur) ಕ್ಷೇತ್ರದ ಕಾನ್ಯಾಳ (Kanyal) ಗ್ರಾಮದ ನಿವಾಸಿಗಳಿಂದ ಹೀಗೆ ತರಾಟೆಗೊಳಗಾದರು. ಗ್ರಾಮಸ್ಥರು ಹೇಳೋದೇನೆಂದರೆ 2018ರಲ್ಲಿ ವಿಧಾನ ಸಭೆಗೆ ಆಯ್ಕೆಯಾದ ಬಳಿಕ ಕಾನ್ಯಾಳ ಗ್ರಾಮಕ್ಕೆ ಒಮ್ಮೆಯೂ ಬೇಟಿ ನೀಡಿಲ್ವಂತೆ. ಆಗ ವೋಟು ಕೇಳಲು ಬಂದವರು ಈಗ ಚುನಾವಣೆ ಸಮಯದಲ್ಲಿ ಮಾತ್ರ ಬಂದಿದ್ದಾರೆ, 5 ವರ್ಷಗಳಲ್ಲಿ ಅವರನ್ನು ಕೇವಲ ಎರಡನೇ ಬಾರಿ ಅವರನ್ನು ನೋಡುತ್ತಿದ್ದೇವೆ ಎಂದು ಗ್ರಾಮಸ್ಥರು ಅರೋಪಿಸುತ್ತಿದ್ದಾರೆ. ಬಿಜೆಪಿ ಕಾರ್ಯಕರ್ತರು ಸಮಾಧಾನಪಡಿಸುತ್ತಿದ್ದಾರಾದರೂ ರೊಚ್ಚಿಗೆದ್ದಿರುವ ಜನ ಕೇಳಲು ತಯಾರಿಲ್ಲ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಮತ್ತಷ್ಟು ಚುನಾವಣಾಅ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ನೀವು ನೋಡಿರದ ಸುಂದರವಾದ ಈಶಾನ್ಯ ರಾಜ್ಯಗಳ ಕಿರುನೋಟ ಇಲ್ಲಿದೆ

ಮನು ಅಂದ್ರೆ ಜೀವ ಬಿಡುತ್ತಿದ್ದೆ, ಅಪ್ಪಣ್ಣ ಕಾಟ ಕೊಟ್ಟಿಲ್ಲ: ಸಂತ್ರಸ್ತ ನಟಿ

ಪ್ರಚಾರಕ್ಕಾಗಿ ನಟ ಮೆಡನೂರು ಮನು ವಿರುದ್ಧ ಆರೋಪ: ಸಂತ್ರಸ್ತೆ ಉತ್ತರವೇನು?

ಈಶಾನ್ಯ ರಾಜ್ಯಗಳು ಹೂಡಿಕೆಯ ಕೇಂದ್ರವಾಗುತ್ತಿದೆ; ಜ್ಯೋತಿರಾದಿತ್ಯ ಸಿಂಧಿಯಾ
