Who would be CM: ದೆಹಲಿಯಲ್ಲಿ ಪತ್ರಕರ್ತರು ಕೇಳಿದ ಪ್ರಶ್ನೆಗೆ ಶಿವಕುಮಾರ್, ‘ಖಾನಾ ಖಾನಾ ಖಾನಾ’ ಅಂತ ಉತ್ತರಿಸಿದರು!
ಅವರು ಯಾವ ಅರ್ಥದಲ್ಲಿ ಖಾನಾ ಖಾನಾ ಖಾನಾ ಅಂತ ಹೇಳಿದರೆನ್ನುವುದು ಯಾವ ಭಾಷೆಯ ಪತ್ರಕರ್ತನಿಗೂ ಅರ್ಥವಾಗಲಿಲ್ಲ!
ದೆಹಲಿ: ರಾಜ್ಯದ ಮುಂದಿನ ಮುಖ್ಯಮಂತ್ರಿ ಯಾರು ಅನ್ನೋದು ಇನ್ನೂ ಒಗಟಾಗೇ ಉಳಿದಿದೆ. ಡಿಕೆ ಶಿವಕುಮಾರ್ (DK Shivakumar) ಅವರು ದೆಹಲಿ ತಲುಪಿಯಾಗಿದೆ. ಅವರು ನೇರವಾಗಿ ತಮ್ಮ ಸಹೋದರ ಡಿಕೆ ಸುರೇಶ್ (DK Suresh) ಮನೆಗೆ ಹೋಗಿ ಎಐಸಿಸಿ ಕಚೇರಿಗೆ ಬಂದಾಗ ಸಹಜವಾಗೇ ಕನ್ನಡ ಮತ್ತು ರಾಷ್ಟ್ರೀಯ ವಾಹಿನಿಗಳ (national channels) ಪ್ರತಿನಿಧಿಗಳು ಅವರನ್ನು ಮುತ್ತಿದರು. ಮುಖ್ಯಮಂತ್ರಿ ಯಾರಾಗಲಿದ್ದಾರೆ ಅಂತ ಪತ್ರಕರ್ತರು ಅವರನ್ನು ಕೇಳಿದಾಗ, ‘ಖಾನಾ ಖಾನಾ ಖಾನಾ’ ಅಂತ ಒಗಟಿನಲ್ಲಿ ಉತ್ತರಿಸುತ್ತಾರೆ. ಖಾನಾ ಅಂದರೆ ಊಟ, ಅಥವಾ ತಿನ್ನುವುದು ಅಂತ ನಮಗೆ ಗೊತ್ತು. ಶಿವಕುಮಾರ್ ಊಟಕ್ಕೆ ಹೋಗುತ್ತಿದ್ದೇನೆ ಅಂತ ಹೇಳಿದರೆ? ಅವರು ಯಾವ ಅರ್ಥದಲ್ಲಿ ಖಾನಾ ಖಾನಾ ಖಾನಾ ಅಂತ ಹೇಳಿದರೆನ್ನುವುದು ಯಾವ ಭಾಷೆಯ ಪತ್ರಕರ್ತನಿಗೂ ಅರ್ಥವಾಗಲಿಲ್ಲ!
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ
Latest Videos