ಜಾಮೀನು ಮೇಲೆ ಜೈಲಿಂದ ಹೊರಬಂದು ವೀರೋಚಿತ ಮೆರವಣಿಗೆ ಮಾಡಿಸಿಕೊಂಡ ದೇಶದ ಏಕೈಕ ರಾಜಕಾರಣಿ ಡಿಕೆ ಶಿವಕುಮಾರ್: ಕೆಎಸ್ ಈಶ್ವರಪ್ಪ

|

Updated on: Oct 19, 2023 | 3:00 PM

ವ್ಯಕ್ತಿಯೊಬ್ಬನ ವಿಚಾರಣೆ ಅಥವಾ ತನಿಖೆ ನಡೆಯುವಾಗ ಅವನು ಮಾಧ್ಯಮದವರು ಕೇಳುವ ಪ್ರಶ್ನೆಗಳಿಗೆ ಸೌಮ್ಯವಾಗಿ ಸೌಜನ್ಯತೆಯಿಂದ ಉತ್ತರಿಸುತ್ತಾನೆಯೇ ಹೊರತು ಶಿವಕುಮಾರ್ ನಂತೆ ಗೂಂಡಾಗಳ ಹಾಗಲ್ಲ ಎಂದು ಈಶ್ವರಪ್ಪ ಹೇಳಿದರು. ತನ್ನ ವಿರುದ್ಧ ಆಪಾದನೆ ಮಾಡಿದವರ ಹಗರಣಗಳನ್ನು ಬಿಚ್ಚಿಡುತ್ತೇನೆ ಅಂತ ಆರ್ಭಟಿಸಿದ್ದ ಅವರು ಯಾಕೆ ಸುಮ್ಮನಿದ್ದಾರೆ ಎಂದು ಬಿಜೆಪಿ ನಾಯಕ ಪ್ರಶ್ನಿಸಿದರು.

ಶಿವಮೊಗ್ಗ: ನಗರದಲ್ಲಿಂದು ಸುದ್ದಿಗೋಷ್ಟಿ ನಡೆಸಿ ಮಾತಾಡಿದ ಹಿರಿಯ ಬಿಜೆಪಿ ನಾಯಕ ಕೆಎಸ್ ಈಶ್ವರಪ್ಪ (KS Eshwarappa), ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಹೈಕೋರ್ಟ್ ನಿಂದ ಇಂದು ಹಿನ್ನಡೆ ಎದುರಿಸಿರುವ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ಅವರನ್ನು ಲೇವಡಿ ಮಾಡಿದರು. ಇದೇ ಪ್ರಕರಣದಲ್ಲಿ ತಿಹಾರ್ ಜೈಲಲ್ಲಿದ್ದ (Tihar jail) ಶಿವಕುಮಾರ್ ಜಾಮೀನು ಪಡೆದು ಬೆಂಗಳೂರಿಗೆ ವಾಪಸ್ಸು ಬಂದಾಗ ಪ್ರಕರಣದಿಂದ ಖುಲಾಸೆಯಾಗಿ ಬಂದಿದ್ದಾರೇನೋ ಎಂಬಂತೆ ಮೆರವಣಿಗೆ ಮಾಡಲಾಗಿತ್ತು. ರಾಜಕಾರಣಿಗಳು ಜೈಲಿಗೆ ಹೋಗೋದು ಹೊಸದೇನಲ್ಲ, ಅರೋಪ ಮುಕ್ತರಾದ ಬಳಿಕ ಅಲ್ಲಿಂದ ಹೊರಬರುತ್ತಾರೆ. ಆದರೆ, ಜಾಮೀನು ಪಡೆದು ಹೊರಬಂದರೂ ವೀರೋಚಿತ ಮೆರವಣಿಗೆಯಲ್ಲಿ ಮನೆಗೆ ವಾಪಸ್ಸಾದ ದೇಶದ ಏಕೈಕ ರಾಜಕಾರಣಿ ಶಿವಕುಮಾರ್ ಎಂದು ಈಶ್ವರಪ್ಪ ಹೇಳಿದರು. ವ್ಯಕ್ತಿಯೊಬ್ಬನ ವಿಚಾರಣೆ ಅಥವಾ ತನಿಖೆ ನಡೆಯುವಾಗ ಅವನು ಮಾಧ್ಯಮದವರು ಕೇಳುವ ಪ್ರಶ್ನೆಗಳಿಗೆ ಸೌಮ್ಯವಾಗಿ ಸೌಜನ್ಯತೆಯಿಂದ ಉತ್ತರಿಸುತ್ತಾನೆಯೇ ಹೊರತು ಶಿವಕುಮಾರ್ ನಂತೆ ಗೂಂಡಾಗಳ ಹಾಗಲ್ಲ ಎಂದು ಈಶ್ವರಪ್ಪ ಹೇಳಿದರು. ತನ್ನ ವಿರುದ್ಧ ಆಪಾದನೆ ಮಾಡಿದವರ ಹಗರಣಗಳನ್ನು ಬಿಚ್ಚಿಡುತ್ತೇನೆ ಅಂತ ಆರ್ಭಟಿಸಿದ್ದ ಅವರು ಯಾಕೆ ಸುಮ್ಮನಿದ್ದಾರೆ ಎಂದು ಬಿಜೆಪಿ ನಾಯಕ ಪ್ರಶ್ನಿಸಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ