Prajadhvani Yatre: ಪಿರಿಯಾಪಟ್ಟಣ ಸಭೆಯಲ್ಲಿ ವೇದಿಕೆಯ ಪಕ್ಕ ನಿಂತು ಜೋರಾಗಿ ಮಾತಾಡುತ್ತಿದ್ದ ವ್ಯಕ್ತಿಯನ್ನು ಗದರಿದ ಡಿಕೆ ಶಿವಕುಮಾರ್
ಗಲಾಟೆ ಮಾಡುತ್ತಿದ್ದ ವ್ಯಕ್ತಿಯ ಮೇಲೆ ಕೋಪ ಕಾರಿದ ಶಿವಕುಮಾರ್ ನನ್ನ ಮಾತು ಕೇಳುವ ಇಚ್ಛೆ ಇರದಿದ್ದರೆ ಅಲ್ಲಿಂದ ಹೋಗುವಂತೆ ಹೇಳುತ್ತಾರೆ. ನಂತರ ಮಾತು ಮುಂದುವರಿಸುವ ಅವರು ತಡವಾಗಿ ಆಗಮಿಸಿದ್ದಕ್ಕೆ ಜನರ ಕ್ಷಮೆ ಕೇಳುತ್ತಾರೆ.
ಮೈಸೂರು: ಗುರುವಾರದಂದು ಪ್ರಜಾಧ್ವನಿ ಯಾತ್ರೆಯ (Prajadhvani Yatre) ಅಂಗವಾಗಿ ಮೈಸೂರಿನ ಪಿರಿಯಾಪಟ್ಟಣವನ್ನು (Piriyapatna) ಬಹಳ ತಡವಾಗಿ ತಲುಪಿದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ (DK Shivakumar) ಅಲ್ಲಿಗೆ ಮುಟ್ಟುವಾಗಲೇ ತಾಳ್ಮೆ ಕಳೆದುಕೊಂಡಿದ್ದರು. ಅವರು ಭಾಷಣ ಆರಂಭಿಸಿದಾಗ ವೇದಿಕೆಯ ಬಲಭಾಗದಲ್ಲಿ ನಿಂತಿದ್ದ ವ್ಯಕ್ತಿಯೊಬ್ಬ ಜೋರಾದ ಧ್ವನಿಯಲ್ಲಿ ಮಾತಾಡುತ್ತಿದ್ದ. ಆ ಗಲಾಟೆಯಿಂದ ಶಿವಕುಮಾರ್ ಸಹನೆ ಮತ್ತಷ್ಟು ಕೆಟ್ಟಿತು. ಗಲಾಟೆ ಮಾಡುತ್ತಿದ್ದ ವ್ಯಕ್ತಿಯ ಮೇಲೆ ಕೋಪ ಕಾರಿದ ಶಿವಕುಮಾರ್ ನನ್ನ ಮಾತು ಕೇಳುವ ಇಚ್ಛೆ ಇರದಿದ್ದರೆ ಅಲ್ಲಿಂದ ಹೋಗುವಂತೆ ಹೇಳುತ್ತಾರೆ. ನಂತರ ಮಾತು ಮುಂದುವರಿಸುವ ಅವರು ತಡವಾಗಿ ಆಗಮಿಸಿದ್ದಕ್ಕೆ ಜನರ ಕ್ಷಮೆ ಕೇಳುತ್ತಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published on: Feb 17, 2023 12:30 PM