ಇಬ್ಬರು ಪ್ರಮುಖ ನಾಯಕರು ನಾಳೆ ಕಾಂಗ್ರೆಸ್ ಸೇರಲಿದ್ದಾರೆ ಅಂತಷ್ಟೇ ಶಿವಕುಮಾರ್ ಹೇಳಿದರು, ಯಾರೂಂತ ಹೇಳಲಿಲ್ಲ!

|

Updated on: Nov 14, 2023 | 3:57 PM

ಬಿವೈ ವಿಜಯೇಂದ್ರ ಅವರನ್ನು ಬಿಜೆಪಿ ರಾಜ್ಯಾಧ್ಯಕ್ಷನಾಗಿ ವರಿಷ್ಠರು ಘೋಷಣೆ ಮಾಡಿದ ಬಳಿಕ ಪಕ್ಷದ ಹಲವಾರು ರಾಜ್ಯ ನಾಯಕರಲ್ಲಿ ಅಸಮಾಧಾನ ಮೂಡಿದೆ. ಸೋಮಣ್ಣ ವಿಧಾನ ಸಭಾ ಚುನಾವಣೆಗೆ ಮೊದಲೇ ಕಾಂಗ್ರೆಸ್ ಸೇರುವ ದಟ್ಟ ವದಂತಿ ಹರಡಿತ್ತು. ಅವರೇನಾದರೂ? ಅಥವಾ ಬಿಜೆಪಿ ನಾಯಕರನ್ನು ಬಹಿರಂಗವಾಗಿ ಟೀಕಿಸುತ್ತಿರುವ ಮಾಜಿ ಶಾಸಕ ಎಂಪಿ ರೇಣುಕಾಚಾರ್ಯ?

ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಹಾಗೂ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ಇಂದು ಮಧ್ಯಾಹ್ನ ಕೆಪಿಸಿಸಿ ಕಚೇರಿ ಮುಂಬಾಗದಲ್ಲಿ ಒಂದು ಕುತೂಹಲಕಾರಿ ಘೋಷಣೆಯನ್ನು ಮಾಡಿದರು. ಅವರು ಹೇಳಿದ ಸಂಗತಿ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳಿಗೆ ಶಾಕಿಂಗ್ ಅನಿಸಬಹುದು. ಅವರು ಹೇಳಿದ್ದೇನೆಂದರೆ ನಾಳೆ ಬೆಳಗ್ಗೆ 11:00 ಗಂಟೆಗೆ ಇಬ್ಬರು ಪ್ರಮುಖ ನಾಯಕರು (two prominent leaders) ಕಾಂಗ್ರೆಸ್ ಸೇರಲಿದ್ದಾರಂತೆ, ಅವರಿಗೆ ಸಮಯ ನಿಗದಿಪಡಿಸಲಾಗಿದೆ, ಅವರು ಯಾರು ಅಂತ ಈಗ ಹೇಳಲ್ಲ, ನಾಳೆಯೇ ಎಲ್ಲರಿಗೂ ಗೊತ್ತಾಗಲಿದೆ ಎಂದು ಹೇಳಿದರು. ಈ ಹೇಳಿಕೆಯನ್ನು ನೀಡುವ ಮೂಲಕ ಶಿವಕುಮಾರ್ ಕನ್ನಡಿಗರಲ್ಲಿ ಸಾಕಷ್ಟು ಕುತೂಹಲ ಮೂಡಿಸಿದ್ದಾರೆ. ಬಿವೈ ವಿಜಯೇಂದ್ರ ಅವರನ್ನು ಬಿಜೆಪಿ ರಾಜ್ಯಾಧ್ಯಕ್ಷನಾಗಿ ವರಿಷ್ಠರು ಘೋಷಣೆ ಮಾಡಿದ ಬಳಿಕ ಪಕ್ಷದ ಹಲವಾರು ರಾಜ್ಯ ನಾಯಕರಲ್ಲಿ ಅಸಮಾಧಾನ ಮೂಡಿದೆ.  ವಿ ಸೋಮಣ್ಣ ವಿಧಾನ ಸಭಾ ಚುನಾವಣೆಗೆ ಮೊದಲೇ ಕಾಂಗ್ರೆಸ್ ಸೇರುವ ದಟ್ಟ ವದಂತಿ ಹರಡಿತ್ತು. ಅವರೇನಾದರೂ? ಅಥವಾ ಬಿಜೆಪಿ ನಾಯಕರನ್ನು ಬಹಿರಂಗವಾಗಿ ಟೀಕಿಸುತ್ತಿರುವ ಮಾಜಿ ಶಾಸಕ ಎಂಪಿ ರೇಣುಕಾಚಾರ್ಯ? ಗೊತ್ತಿಲ್ಲ ಮಾರಾಯ್ರೇ.

ಗುರುಮಠಕಲ್ ಕ್ಷೇತ್ರದ ಜೆಡಿಎಸ್ ಶಾಸಕ ಶರಣಗೌಡ ಕಂದ್ಕೂರ್ ಆಯ್ಕೆಯಾದಾಗಿನಿಂದ ಬಂಡುಕೋರ ಪ್ರವೃತ್ತಿ ಪ್ರದರ್ಶಿಸುತ್ತಿದ್ದಾರೆ. ಅವರು ಅಲ್ಮೋಸ್ಟ್ ಕಾಂಗ್ರೆಸ್ ಸೇರ್ಪಡೆಯಾಗೇ ಬಿಟ್ಟರು ಎಂಬ ವದಂತಿಯೂ ಹರಡಿತ್ತು. ಮೊನ್ನೆ ಹಾಸನದಲ್ಲಿ ನಡೆದ ಜೆಡಿಎಸ್ ಶಾಸಕಾಂಗ ಪಕ್ಷದ ಸಭೆಗೆ ಅವರು ಹೋಗಿರಲಿಲ್ಲ. ಅವರೇನಾದರೂ? ಖಚಿತವಾಗಿ ಗೊತ್ತಿಲ್ಲ ಮಾರಾಯ್ರೇ. ನಾಳಿನವರೆಗೆ ಕಾಯ್ದರಾಯಿತು ಬಿಡಿ ಸ್ವಾಮಿ, ಎಲ್ಲ ಗೊತ್ತಾಗಲಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow us on