Karnataka Assembly Polls: ಕನಕಪುರಲ್ಲಿ ನಾಮಪತ್ರ ಸಲ್ಲಿಸುವ ಮೊದಲು ಡಿಕೆ ಶಿವಕುಮಾರ್ ದೇವಿ ಕೆಂಕೇರಮ್ಮನಿಗೆ ಪೂಜೆ ಸಲ್ಲಿಸಿ ತಮ್ಮ ತಾಯಿಯ ಪಾದ ಮುಟ್ಟಿದರು

|

Updated on: Apr 17, 2023 | 3:14 PM

ಡಿಕೆ ಸುರೇಶ್ ಸಹ ದೇವಿಗೆ ನಮಸ್ಕರಿಸಿ, ತಾಯಿಯ ಪಾದ ಮುಟ್ಟಿ ನಮಸ್ಕರಿದ ಬಳಿಕ ಅಣ್ಣ ಮತ್ತು ಅತ್ತಿಗೆಯವರ ಕಾಲಿಗೂ ವಂದಿಸುತ್ತಾರೆ.

ರಾಮನಗರ: ಡಿಕೆ ಶಿವಕುಮಾರ್ (DK Shivakumar) ಇಂದು ರಾಮನಗರ ಕನಕಪುರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸುವ ಮೊದಲು ಕ್ಷೇತ್ರದ ಕೆಂಕೇರಮ್ಮ ದೇವಸ್ಥಾನಲ್ಲಿ (Kenkeramma temple) ಕುಟುಂಬಸಮೇತರಾಗಿ ಪೂಜೆ ಸಲ್ಲಿಸಿದರು. ಪತ್ನಿಯೊಂದಿಗೆ ಪೂಜೆ ಸಲ್ಲಿಸಿದ ಬಳಿಕ ಅವರು ತಮ್ಮ ತಾಯಿ ಗೌರಮ್ಮನವರ ಆಶೀರ್ವಾದವನ್ನೂ ಪಡೆದುಕೊಳ್ಳುತ್ತಾರೆ. ಶಿವಕುಮಾರ್ ಜೊತೆ ಆಗಮಿಸಿದ್ದ ಅವರ ಸಹೋದರ ಮತ್ತು ರಾಮನಗರ ಸಂಸದ ಡಿಕೆ ಸುರೇಶ್ (DK Suresh) ಸಹ ದೇವಿಗೆ ನಮಸ್ಕರಿಸಿ, ತಾಯಿಯ ಪಾದ ಮುಟ್ಟಿ ನಮಸ್ಕರಿದ ಬಳಿಕ ಅಣ್ಣ ಮತ್ತು ಅತ್ತಿಗೆಯವರ ಕಾಲಿಗೂ ವಂದಿಸುತ್ತಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮತ್ತಷ್ಟು ಚುನಾವಣಾಅ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Apr 17, 2023 03:14 PM