Karnataka Assembly Polls: ಕೆಪಿಸಿಸಿ ಕಚೇರಿಯಲ್ಲಿ ಎಡವಟ್ಟಿನ ಮೇಲೆ ಎಡವಟ್ಟು ಮಾಡಿದ ಸಿದ್ದರಾಮಯ್ಯ ಅಮರ್ ಸಿಂಹರನ್ನು ಪ್ರತಾಪ್ ಸಿಂಹ ಎಂದರು!

Karnataka Assembly Polls: ಕೆಪಿಸಿಸಿ ಕಚೇರಿಯಲ್ಲಿ ಎಡವಟ್ಟಿನ ಮೇಲೆ ಎಡವಟ್ಟು ಮಾಡಿದ ಸಿದ್ದರಾಮಯ್ಯ ಅಮರ್ ಸಿಂಹರನ್ನು ಪ್ರತಾಪ್ ಸಿಂಹ ಎಂದರು!

ಅರುಣ್​ ಕುಮಾರ್​ ಬೆಳ್ಳಿ
|

Updated on: Apr 17, 2023 | 12:29 PM

ಪಕ್ಕದಲ್ಲಿದ್ದ ಶಿವಕುಮಾರ್ ‘ಅಮರ್ ಸಿಂಹ, ಅಮರ್ ಸಿಂಹ’ ಎನ್ನುತ್ತಾರೆ. ಸಿದ್ದರಾಮಯ್ಯ ‘ಸಾರಿ ಸಾರಿ’ ತಲೆ ಕೆರೆದುಕೊಳ್ಳಲಾರಂಭಿಸಿದಾಗ ಅಲ್ಲಿ ನೆರೆದಿರುವವರ ಪೈಕಿ ಒಬ್ಬರು ‘ನೀವು ಮೈಸೂರಿಗೆ ಹೋಗಿ ಬಿಟ್ರಿ!’ ಅಂತ ನಗೆಯಾಡುತ್ತಾರೆ.

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ (Siddaramaiah) ಅರಳು ಮರಳು ಶುರವಾದಂತಿದೆ ಮಾರಾಯ್ರೇ| ಇಂದು ಕೆಪಿಸಿಸಿ ಜಗದೀಶ್ ಶೆಟ್ಟರ್ (Jagadish Shettar) ಮತ್ತು ಇತರ ನಾಯಕರನ್ನು ಪಕ್ಷದ ಕಚೇರಿಯಲ್ಲಿ ಪಕ್ಷಕ್ಕೆ ಸ್ವಾಗತ ಕೋರುತ್ತಾ ಮಾತಾಡುವಾಗಿ ಸಿದ್ದರಾಮಯ್ಯ ಮೇಲಿಂದ ಮೇಲೆ ಎಡವಟ್ಟುಗಳನ್ನು ಮಾಡಿದರು. ಮೊದಲಿಗೆ ಅವರು ಸಲ್ಯೂಟೇಶನ್ ಮಾಡುವಾಗ ಡಿಕೆ ಶಿವಕುಮಾರ್ (DK Shivakumar) ಹೆಸರು ಹೇಳುವುದನ್ನು ಮರೆಯುತ್ತಾರೆ. ನಂತರ ಅಮರ್ ಸಿಂಹ ಅವರನ್ನು ಪಕ್ಷಕ್ಕೆ ಸ್ವಾಗತ ಮಾಡುತ್ತೇನೆ ಅಂತ ಹೇಳುವ ಬದಲು ಪ್ರತಾಪ್ ಸಿಂಹ ಅವರಿಗೆ ಸ್ವಾಗತ ಕೋರುತ್ತೇನೆ ಅನ್ನುತ್ತಾರೆ. ಪಕ್ಕದಲ್ಲಿದ್ದ ಶಿವಕುಮಾರ್ ‘ಅಮರ್ ಸಿಂಹ, ಅಮರ್ ಸಿಂಹ’ ಎನ್ನುತ್ತಾರೆ. ಸಿದ್ದರಾಮಯ್ಯ ‘ಸಾರಿ ಸಾರಿ’ ತಲೆ ಕೆರೆದುಕೊಳ್ಳಲಾರಂಭಿಸಿದಾಗ ಅಲ್ಲಿ ನೆರೆದಿರುವವರ ಪೈಕಿ ಒಬ್ಬರು ‘ನೀವು ಮೈಸೂರಿಗೆ ಹೋಗಿ ಬಿಟ್ರಿ!’ ಅಂತ ನಗೆಯಾಡುತ್ತಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮತ್ತಷ್ಟು ಚುನಾವಣಾಅ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ