Punjab’s statue man: ದಿನಗೂಲಿ ಮಾಡಿ ಬದುಕುತ್ತಿದ್ದ ಪಂಜಾಬ್ ವ್ಯಕ್ತಿಯೊಬ್ಬ ಈಗ ಪ್ರತಿಮೆಯಂತೆ ನಿಂತು ಹಣ ಸಂಪಾದನೆ ಮಾಡುತ್ತಿದ್ದಾರೆ!
ಯೂಟ್ಯೂಬ್ ನಲ್ಲಿ ವಿಡಿಯೋವೊಂದನ್ನು ನೋಡಿದ ಬಳಿಕ ಗೋಬಿಂದ್ ಸಿಂಗ್ ಗೆ ಇದನ್ನು ಮಾಡುವ ಪ್ರೇರಣೆ ಸಿಕ್ಕಿತಂತೆ.
ಮುಕ್ಸಾರ್ (ಪಂಜಾಬ್): ನಿಮಗಿಲ್ಲಿ ಕಾಣುತ್ತಿರೋದು ಪ್ರತಿಮೆ ಅಲ್ಲ ಮಾರಾಯ್ರೇ, ಬದಲಿಗೆ ಗೋಬಿಂದ್ ಸಿಂಗ್ (Gobind Singh) ಹೆಸರಿನ ಜೀವಂತ ವ್ಯಕ್ತಿ. ಪಂಜಾಬ್ (Punjab) ಮುಕ್ತ್ಸಾರ್ ನಿವಾಸಿಯಾಗಿರುವ ಸಿಂಗ್ ವೃತ್ತಿಯಿಂದ ಒಬ್ಬ ದಿನಗೂಲಿ ಕಾರ್ಮಿಕ. ಒಮ್ಮೆ ಹೊನ್ನವರ್ಣ (golden colour) ಇನ್ನೊಮ್ಮೆ ಬೆಳ್ಳಿ ಬಣ್ಣ ಬಳಿದುಕೊಂಡು ಅವರು ಹೀಗೆ ಪ್ರತಿಮೆಯ ಹಾಗೆ ನಿಶ್ಚಲರಾಗಿ ನಿಂತುಬಿಡುತ್ತಾರೆ. ರಸ್ತೆಯಲ್ಲಿ ಓಡಾಡುವ ಜನ ಇವರೊಂದಿಗೆ ಸೆಲ್ಫೀ ತೆಗೆದುಕೊಳ್ಳಲು ಮುಗಿ ಬೀಳುತ್ತಾರೆ. ಇದು ಅವರಿಗೆ ಆದಾಯದ ಮೂಲವಾಗಿ ಪರಿವರ್ತನೆಯಾಗಿದೆ.
‘ನಾನು ಈಗಲೂ ದಿನಗೂಲಿ ಕೆಲಸಕ್ಕೆ ಹೋಗುತ್ತೇನೆ. ಹಬ್ಬ ಹರಿದಿನಗಳಲ್ಲಿ, ಯಾವುದಾದರೂ ಸಮಾರಂಭವಿದ್ದಾಗ ಇಲ್ಲವೇ ರವಿವಾರದಂದು ಹೀಗೆ ಪ್ರತಿಮೆಯಾಗಿ ನಿಲ್ಲುತ್ತೇನೆ. ಜನ ನನ್ನನ್ನು ತುಂಬಾ ಇಷ್ಟಪಡುತ್ತಾರೆ. ವಿದ್ಯಾವಂತ ಜನ ಈ ಸಂಸ್ಕೃತಿಯನ್ನು ಅರ್ಥಮಾಡಿಕೊಂಡು ನನ್ನೊಂದಿಗೆ ಸೆಲ್ಫೀ ಮತ್ತು ಫೋಟೋಗಳನ್ನು ಕ್ಕಿಕ್ಕಿಸಿಕೊಳ್ಳುತ್ತಾರೆ,’ ಎಂದು ಪ್ರತಿಮೆ ಮನುಷ್ಯ ಗೋಬಿಂದ್ ಸಿಂಗ್ ಹೇಳುತ್ತಾರೆ.
ಯೂಟ್ಯೂಬ್ ನಲ್ಲಿ ವಿಡಿಯೋವೊಂದನ್ನು ನೋಡಿದ ಬಳಿಕ ಗೋಬಿಂದ್ ಸಿಂಗ್ ಗೆ ಇದನ್ನು ಮಾಡುವ ಪ್ರೇರಣೆ ಸಿಕ್ಕಿತಂತೆ.
‘ನಿಮಗೆ ನಿಜ ಹೇಳುತ್ತೇನೆ, ಯೂಟ್ಯೂಬ್ ಒಂದನ್ನು ನೋಡಿದ ಮೇಲೆ ನನಗೆ ಈ ಪ್ರೇರಣೆ ಸಿಕ್ಕಿತು. ಈಗ ಇದು ಜನರನ್ನು ಮನರಂಜಿಸುವ ಜೊತೆ ನನ್ನ ಆದಾಯದ ಮೂಲವೂ ಆಗಿದೆ,’ ಎಂದು ಗೋಬಿಂದ್ ಸಿಂಗ್ ಹೇಳುತ್ತಾರೆ.
ಇದನ್ನೂ ಓದಿ: ಖ್ಯಾತ ನಿರ್ದೇಶಕನ ಕಚೇರಿಯಿಂದ ಕೊಲೆ ಬೆದರಿಕೆ: ಉರ್ಫಿ ಜಾವೇದ್ ಆರೋಪ
ಜನರಿಗೆ ಮನರಂಜನೆ ಒದಗಿಸುವುದರಲ್ಲೇ ದಿನದ ಹೆಚ್ಚಿನ ಸಮಯವನ್ನು ಗೋಬಿಂದ್ ಸಿಂಗ್ ಕಳೆಯುತ್ತಾರೆ. ಜನ ಅವರ ಕಠಿಣ ಪರಿಶ್ರಮವನ್ನು ಮೆಚ್ಚಿ ಮಾತಾಡಿದಾಗ ಸಂತೃಪ್ತಿಯ ಭಾವ ಮೂಡುತ್ತದೆ ಎಂದು ಅವರು ಹೇಳುತ್ತಾರೆ. ಕೆಲವು ಸಲ ಅವರು ಸಿನಿಮಾಗಳಲ್ಲಿ ಅವಕಾಶ ಕೊಡಿಸುವಂತೆ ಜನರ ದುಂಬಾಲು ಬೀಳುತ್ತಾರೆ. ಮುಂದೊಂದು ದಿನ ಅವರಾಸೆ ಈಡೇರಿದರೆ ಆಶ್ಚರ್ಯವಿಲ್ಲ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ