AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Mozambique: ಮೊಜಾಂಬಿಕಾ ದೇಶಕ್ಕೆ ಭೇಟಿ ನೀಡಿರುವ ಭಾರತದ ಮೊದಲ ವಿದೇಶಾಂಗ ಸಚಿವ! ‘ಮೇಡ್ ಇನ್ ಇಂಡಿಯಾ’ ರೈಲಿನಲ್ಲಿ ಎಸ್ ಜೈಶಂಕರ್ ಸವಾರಿ

External Affairs Minister S Jaishankar: "ಇಂದು ಸಂಜೆ ಮಾಪುಟೋದಲ್ಲಿರುವ ಶ್ರೀ ವಿಶ್ವಂಭರ ಮಹಾದೇವ ಮಂದಿರದಲ್ಲಿ ಪ್ರಾರ್ಥನೆಯನ್ನು ಸಲ್ಲಿಸಿದೆ. ಅಲ್ಲಿನ ಭಾರತೀಯ ಸಮುದಾಯದೊಂದಿಗೆ ಸಂವಹನ ನಡೆಸಲು ತುಂಬಾ ಸಂತೋಷವಾಗಿದೆ" ಎಂದು ಸಚಿವ ಜೈಶಂಕರ್ ಟ್ವೀಟ್ ಮಾಡಿದ್ದಾರೆ.

Mozambique: ಮೊಜಾಂಬಿಕಾ ದೇಶಕ್ಕೆ ಭೇಟಿ ನೀಡಿರುವ ಭಾರತದ ಮೊದಲ ವಿದೇಶಾಂಗ ಸಚಿವ! 'ಮೇಡ್ ಇನ್ ಇಂಡಿಯಾ' ರೈಲಿನಲ್ಲಿ ಎಸ್ ಜೈಶಂಕರ್ ಸವಾರಿ
ಮೊಜಾಂಬಿಕಾ ದೇಶದಲ್ಲಿ 'ಮೇಡ್ ಇನ್ ಇಂಡಿಯಾ ರೈಲಿನಲ್ಲಿ ಜೈಶಂಕರ್ ಸವಾರಿ
ಸಾಧು ಶ್ರೀನಾಥ್​
ಸಾಧು ಶ್ರೀನಾಥ್​|

Updated on: Apr 14, 2023 | 11:12 AM

Share

ಮಾಪುಟೊ: ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರು (External Affairs Minister S Jaishankar) ಮೊಜಾಂಬಿಕಾ (Mozambique) ಪ್ರವಾಸದಲ್ಲಿದ್ದು, ನಿನ್ನೆ ಗುರುವಾರ ‘ಮೇಡ್ ಇನ್ ಇಂಡಿಯಾ’ (Made in India) ರೈಲಿನಲ್ಲಿ ಸವಾರಿ ಮಾಡಿದರು. ಅವರು ಭಾರತದಲ್ಲಿ ತಯಾರಿಸಿದ ರೈಲಿನಲ್ಲಿ (Train) ಸವಾರಿ ಮಾಡಿದರು. ರೈಲ್ವೆ ಜಾಲಗಳಲ್ಲಿ ವಿದ್ಯುತ್ ಬಳಕೆ ಮತ್ತು ಜಲಮಾರ್ಗ ಸಂಪರ್ಕವನ್ನು ವಿಸ್ತರಿಸಲು ಸಹಾಯ ಮಾಡುವಲ್ಲಿ ಭಾರತದ ಪಾಲುದಾರಿಕೆಯ ಬಗ್ಗೆ ಮೊಜಾಂಬಿಕಾ ಸಾರಿಗೆ ಸಚಿವರೊಂದಿಗೆ ಚರ್ಚಿಸಿದರು. ಜೈಶಂಕರ್ ಅವರು ಮೂರು ದಿನಗಳ ಭೇಟಿಗಾಗಿ ಗುರುವಾರ ಮೊಜಾಂಬಿಕ್‌ನ ರಾಜಧಾನಿಗೆ ಆಗಮಿಸಿದರು ಮತ್ತು ದ್ವಿಪಕ್ಷೀಯ ಸಹಕಾರವನ್ನು ಬಲಪಡಿಸಲು ಆಫ್ರಿಕನ್ ದೇಶದ ಸಂಸತ್ತಿನ ಅಧ್ಯಕ್ಷರನ್ನು ಭೇಟಿ ಮಾಡಿದರು. ಏಪ್ರಿಲ್ 13 ರಿಂದ 15 ರವರೆಗೆ ಅವರ ಮೊಜಾಂಬಿಕಾ ಭೇಟಿಯು ಭಾರತದ ವಿದೇಶಾಂಗ ವ್ಯವಹಾರಗಳ ಸಚಿವರೊಬ್ಬರು ಆ ದೇಶಕ್ಕೆ ನೀಡಿರುವ ಮೊದಲ ಭೇಟಿಯಾಗಿದೆ.

ಮೊಜಾಂಬಿಕ ಸಾರಿಗೆ ಮತ್ತು ಸಂವಹನ ಸಚಿವರು ಮತ್ತು ಮೊಜಾಂಬಿಕ ಬಂದರು ಮತ್ತು ರೈಲು ಪ್ರಾಧಿಕಾರದ ಅಧ್ಯಕ್ಷ ಮೇಟಿಯುಸ್ ಮಗಲಾ ಅವರ ಜೊತೆ ನಡೆಸಿದ ಹಸಿರು ಸಾರಿಗೆ ಸಂಭಾಷಣೆ ಅದ್ಭುತವಾಗಿದೆ. ರೈಲು ಜಾಲಗಳು, ವಿದ್ಯುತ್ ಚಲನಶೀಲತೆ ಮತ್ತು ಜಲಮಾರ್ಗಗಳ ಸಂಪರ್ಕವನ್ನು ವಿಸ್ತರಿಸುವ ಕುರಿತು ಮಾತನಾಡಿದೆವು. ಈ ನಿಟ್ಟಿನಲ್ಲಿ ಭಾರತವು ವಿಶ್ವಾಸಾರ್ಹ ಪಾಲುದಾರ ರಾಷ್ಟ್ರವಾಗಿದೆ” ಎಂದು ಸಚಿವ ಜೈಶಂಕರ್ ಟ್ವೀಟ್ ಮಾಡಿದ್ದಾರೆ.

“ಮೊಜಾಂಬಿಕನ್ ಸಾರಿಗೆ ಸಚಿವ ಮೇಟಿಯುಸ್ ಮಾಗಾಲಾ ಅವರೊಂದಿಗೆ ಮಾಪುಟೊದಿಂದ ಮಚಾವಾಗೆ ‘ಮೇಡ್ ಇನ್ ಇಂಡಿಯಾ’ ರೈಲಿನಲ್ಲಿ ಜೈಶಂಕರ್ ಸವಾರಿ ಮಾಡಿದರು. ಸಿಎಂಡಿ ರೈಟ್ಸ್ (CMD RITES) ರಾಹುಲ್ ಮಿಥಾಲ್ ಅವರು ಪ್ರಯಾಣದಲ್ಲಿ ನಮ್ಮೊಂದಿಗೆ ಸೇರಿಕೊಂಡಿದ್ದನ್ನು ಶ್ಲಾಘಿಸಿ” ಜೈಶಂಕರ್ ಅವರು ಟ್ವೀಟ್ ಮಾಡಿದ್ದಾರೆ. ಅವರು ಭಾರತೀಯ ಸಮುದಾಯದೊಂದಿಗೆ ಸಂವಾದ ನಡೆಸಿದರು ಮತ್ತು ದೇವಸ್ಥಾನಕ್ಕೆ ಭೇಟಿ ನೀಡಿದರು.

“ಇಂದು ಸಂಜೆ ಮಾಪುಟೋದಲ್ಲಿರುವ ಶ್ರೀ ವಿಶ್ವಂಭರ ಮಹಾದೇವ ಮಂದಿರದಲ್ಲಿ (Shree Vishvambhar Mahadev Mandir) ಪ್ರಾರ್ಥನೆಯನ್ನು ಸಲ್ಲಿಸಿದೆ. ಅಲ್ಲಿನ ಭಾರತೀಯ ಸಮುದಾಯದೊಂದಿಗೆ ಸಂವಹನ ನಡೆಸಲು ತುಂಬಾ ಸಂತೋಷವಾಗಿದೆ” ಎಂದು ಅವರು ಟ್ವೀಟ್ ಮಾಡಿದ್ದಾರೆ.

ಜೈಶಂಕರ್ ಅವರು ಉಗಾಂಡಾದಿಂದ ಮಾಪುಟೊಗೆ ಆಗಮಿಸಿದರು. ಅಲ್ಲಿ ಅವರು ಅಧ್ಯಕ್ಷ ಯೊವೆರಿ ಮುಸೆವೆನಿ ಸೇರಿದಂತೆ ದೇಶದ ಉನ್ನತ ನಾಯಕರೊಂದಿಗೆ ಮಾತುಕತೆ ನಡೆಸಿದರು ಮತ್ತು ವ್ಯಾಪಾರ, ಮೂಲಸೌಕರ್ಯ, ಇಂಧನ ಮತ್ತು ರಕ್ಷಣಾ ಕ್ಷೇತ್ರಗಳಲ್ಲಿ ಸಂಭವನೀಯ ಸಹಕಾರದ ಕುರಿತು ಚರ್ಚಿಸಿದರು.

ಮತ್ತಷ್ಟು ವಿದೇಶ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಸಾಧು ಶ್ರೀನಾಥ್​
ಸಾಧು ಶ್ರೀನಾಥ್​

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಫರೇಷನ್’
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಫರೇಷನ್’
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಅಲ್ಪಸಂಖ್ಯಾತ ಮತದಾರರ ವೋಟ್ ಡಿಲಿಟ್, BJP ಮುಖಂಡರ ಮೇಲೆ FIR ದಾಖಲು
ಅಲ್ಪಸಂಖ್ಯಾತ ಮತದಾರರ ವೋಟ್ ಡಿಲಿಟ್, BJP ಮುಖಂಡರ ಮೇಲೆ FIR ದಾಖಲು
ದರ್ಶನ್ ಕೇಸ್: ಮಾಫಿ ಸಾಕ್ಷಿ ವಿಡಿಯೋ ವೈರಲ್ ಮಾಡಿದವರಿಗೆ ಕೋರ್ಟ್ ಶಾಕ್
ದರ್ಶನ್ ಕೇಸ್: ಮಾಫಿ ಸಾಕ್ಷಿ ವಿಡಿಯೋ ವೈರಲ್ ಮಾಡಿದವರಿಗೆ ಕೋರ್ಟ್ ಶಾಕ್