Karnataka Assembly Polls: ರಾಮನಗರದ ಗಂಟಕನದೊಡ್ಡಿ ಚೆಕ್ಪೋಸ್ಟ್ ಬಳಿ ದಾಖಲೆಯಿಲ್ಲದೆ ಸಾಗಿಸುತ್ತಿದ್ದ ರೂ. 2 ಕೋಟಿ ಚುನಾವಣಾಧಿಕಾರಿಗಳ ವಶಕ್ಕೆ
ಸೋಜಿಗದ ಸಂಗತಿಯೆಂದರೆ, ಹಣ ಯಾರಿಗೆ ಸೇರಿದ್ದು, ಯಾರಿಗೆ ತಲುಪಿಸಲಾಗುತಿತ್ತು ಅನ್ನೋದು ಜನಸಾಮಾನ್ಯರಿಗೆ ಕೊನೆವರೆಗೆ ಗೊತ್ತಾಗುವುದಿಲ್ಲ.
ರಾಮನಗರ: ಎಟಿಎಮ್ ಕಿಯಾಸ್ಕ್ ಗಳಿಗೆ ಹಣ ತುಂಬಿಸಲು ನೋಟಿನ ಕಂತೆಗಳನ್ನು ಸಾಗಿಸುವ ವಾಹನವೊಂದರಲ್ಲಿ ದಾಖಲೆಯಿಲ್ಲದೆ ಸಾಗಿಸುತ್ತಿದ್ದ ರೂ. 2 ಕೋಟಿ ಮೊತ್ತದ ದುಡ್ಡನ್ನು ಜಿಲ್ಲೆಯ ಹಾರೋಹಳ್ಳಿ ತಾಲ್ಲೂಕಿನ ಗಂಟಕನದೊಡ್ಡಿಯಲ್ಲಿ (Gantakandoddi) ಸ್ಥಾಪಿಸಲಾಗಿರುವ ಚೆಕ್ ಪೋಸ್ಟ್ ಬಳಿ ಚುನಾವಣಾಧಿಕಾರಿ (poll body) ಮತ್ತು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸಂಜೆ 6 ಗಂಟೆಯ ನಂತರ ಹಣವನ್ನು ಸಾಗಿಸಲಾಗುತ್ತಿತ್ತು ಮತ್ತು ವಾಹನದಲ್ಲಿ ಗನ್ ಮ್ಯಾನ್ (gun man) ಕೂಡ ಇರಲಿಲ್ಲ. ಅನುಮಾನಗೊಡು ಪೊಲೀಸರು ತಪಾಸಣೆ ನಡೆಸಿದಾಗ ದಾಖಲೆಯಿಲ್ಲದ ಹಣ ಸಿಕ್ಕಿದೆ. ಹಣ ಮತ್ತು ಅದನ್ನು ವಾಹನದಲ್ಲಿ ಸಾಗಿಸುತ್ತಿದ್ದವರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಆದರೆ, ಸೋಜಿಗದ ಸಂಗತಿಯೆಂದರೆ, ಹಣ ಯಾರಿಗೆ ಸೇರಿದ್ದು, ಯಾರಿಗೆ ತಲುಪಿಸಲಾಗುತಿತ್ತು ಅನ್ನೋದು ಜನಸಾಮಾನ್ಯರಿಗೆ ಕೊನೆವರೆಗೆ ಗೊತ್ತಾಗುವುದಿಲ್ಲ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಮತ್ತಷ್ಟು ಚುನಾವಣಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published on: Apr 18, 2023 11:26 AM
Latest Videos