AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪರಾರಿಯಾಗಿರುವ ಅಮೃತಪಾಲ್ ಸಿಂಗ್‌ಗೆ ಸಹಾಯ ಮಾಡಿದ್ದಕ್ಕಾಗಿ ಪಂಜಾಬ್‌ನಲ್ಲಿ ವಕೀಲ ಸೇರಿದಂತೆ ಮೂವರ ಬಂಧನ

ಈ ಹಿಂದೆ ಏಪ್ರಿಲ್ 10 ರಂದು ರಾಜ್‌ಪುರ್ ಭಯ್ಯಾನ್ ಗ್ರಾಮದ ಇಬ್ಬರು ಸಹೋದರರನ್ನು ಪರಾರಿಯಾದವರಿಗೆ ಆಶ್ರಯ ನೀಡಿದ ಶಂಕೆಯ ಮೇಲೆ ಬಂಧಿಸಲಾಗಿತ್ತು. ಅವರು ಪೊಲೀಸ್ ರಿಮಾಂಡ್‌ನಲ್ಲಿದ್ದಾರೆ.

ಪರಾರಿಯಾಗಿರುವ ಅಮೃತಪಾಲ್ ಸಿಂಗ್‌ಗೆ ಸಹಾಯ ಮಾಡಿದ್ದಕ್ಕಾಗಿ ಪಂಜಾಬ್‌ನಲ್ಲಿ ವಕೀಲ ಸೇರಿದಂತೆ ಮೂವರ ಬಂಧನ
ಅಮೃತಪಾಲ್ ಸಿಂಗ್
ರಶ್ಮಿ ಕಲ್ಲಕಟ್ಟ
|

Updated on: Apr 15, 2023 | 1:08 PM

Share

ಮಾರ್ಚ್ 28 ರಿಂದ ಪರಾರಿಯಾಗಿರುವ ‘ವಾರಿಸ್ ಪಂಜಾಬ್ ದೇ’ ಮುಖ್ಯಸ್ಥ ಅಮೃತಪಾಲ್ ಸಿಂಗ್‌ಗೆ (Amritpal Singh) ಸಹಾಯ ಮಾಡಿದ ಆರೋಪದ ಮೇಲೆ ವಕೀಲ ಸೇರಿದಂತೆ ಮೂವರನ್ನು ಪಂಜಾಬ್‌ನ (Punjab) ಹೋಶಿಯಾರ್‌ಪುರ (Hoshiarpur) ಪೊಲೀಸರು ಬಂಧಿಸಿದ್ದಾರೆ. ಇಬ್ಬರು ವ್ಯಕ್ತಿಗಳು ಜಲಂಧರ್ ಜಿಲ್ಲೆಯವರು ಮತ್ತು ಒಬ್ಬರು ಹೋಶಿಯಾರ್‌ಪುರದ ಬಾಬಕ್‌ ಗ್ರಾಮದವರು ಎಂದು ವರದಿಯಾಗಿದೆ. ಅವರ ಬಂಧನದ ಬಗ್ಗೆ ಅಧಿಕಾರಿಗಳು ಮೌನವಾಗಿದ್ದರೂ, ಅವರು ಅಪರಾಧ ತನಿಖಾ ಸಂಸ್ಥೆ (ಸಿಐಎ) ವಶದಲ್ಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಅಮೃತಪಾಲ್ ಸಿಂಗ್ ಮತ್ತು ಆತನ ಆಪ್ತ-ಮಾರ್ಗದರ್ಶಿ ಪಾಪಲ್‌ಪ್ರೀತ್ ಸಿಂಗ್ ಮಾರ್ಚ್ 28 ರ ರಾತ್ರಿ ಮರ್ನಾಯನ್ ಗ್ರಾಮದಿಂದ ಪರಾರಿಯಾಗಿದ್ದರು.

ಈ ಹಿಂದೆ ಏಪ್ರಿಲ್ 10 ರಂದು ರಾಜ್‌ಪುರ್ ಭಯ್ಯಾನ್ ಗ್ರಾಮದ ಇಬ್ಬರು ಸಹೋದರರನ್ನು ಪರಾರಿಯಾದವರಿಗೆ ಆಶ್ರಯ ನೀಡಿದ ಶಂಕೆಯ ಮೇಲೆ ಬಂಧಿಸಲಾಗಿತ್ತು. ಅವರು ಪೊಲೀಸ್ ರಿಮಾಂಡ್‌ನಲ್ಲಿದ್ದಾರೆ.

ಪಾಕಿಸ್ತಾನದ ಐಎಸ್‌ಐಗೆ ನಿಕಟ ಸಂಪರ್ಕ ಹೊಂದಿರುವ ಸಂಘಟನೆಯ ತಂತ್ರಜ್ಞ ಎಂದು ಪರಿಗಣಿಸಲಾದ ಪಾಪಲ್‌ಪ್ರೀತ್ ಸಿಂಗ್ ಅವರನ್ನು ಕಳೆದ ವಾರ ಹೋಶಿಯಾರ್‌ಪುರದಿಂದ ಬಂಧಿಸಲಾಗಿದ್ದು, ರಾಷ್ಟ್ರೀಯ ಭದ್ರತಾ ಕಾಯ್ದೆ (ಎನ್‌ಎಸ್‌ಎ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ವಾರಿಸ್ ಪಂಜಾಬ್ ದೇ ಮತ್ತು ಅದರ ಸದಸ್ಯರ ವಿರುದ್ಧ ಪಂಜಾಬ್ ಪೊಲೀಸರು ಕಾರ್ಯಾಚರಣೆ ಪ್ರಾರಂಭಿಸಿದಾಗಿನಿಂದ ಅಮೃತಪಾಲ್ ಸಿಂಗ್ ಇನ್ನೂ ತಲೆಮರೆಸಿಕೊಂಡಿದ್ದಾನೆ.

ಇದನ್ನೂ ಓದಿ: Rahul Gandhi: ಏ.16ರಿಂದ ರಾಹುಲ್​ ಗಾಂಧಿ ಎರಡು ದಿನ ರಾಜ್ಯ ಪ್ರವಾಸ: ಕೋಲಾರದಲ್ಲಿ ಬೃಹತ್​ ಸಮಾವೇಶ

ಪಾಪಲ್‌ಪ್ರೀತ್ ಸಿಂಗ್ ನ್ನು ಉತ್ತರ ರಾಜ್ಯದಿಂದ 2500 ಕಿಮೀ ದೂರದಲ್ಲಿರುವ ಅಸ್ಸಾಂನ ದಿಬ್ರುಗಢಕ್ಕೆ ಕರೆತರಲಾಯಿತು. ಕಳೆದ ವಾರ ಕಳೆದ ವಾರ ಮಂಗಳವಾರ ಖಾಲಿಸ್ತಾನ್ ಪರ ಸಂಘಟನೆಯ ಇತರ ಏಳು ಮಂದಿಯೊಂದಿಗೆ ಕೇಂದ್ರ ಕಾರಾಗೃಹದಲ್ಲಿ ಇರಿಸಲಾಗಿತ್ತು. ಬಂಧಿತ ಸಹಚರನನ್ನು ಬಿಡುಗಡೆ ಮಾಡಲು ಅಮೃತ್‌ಪಾಲ್ ಮತ್ತು ಅವರ ಬೆಂಬಲಿಗರು ಅಮೃತಸರ ಬಳಿಯ ಅಜ್ನಾಲಾ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿದ ವಾರಗಳ ನಂತರ ವಾರಿಸ್ ಪಂಜಾಬ್ ದೆ ಮೇಲೆ ಕಾರ್ಯಾಚರಣೆ ಪ್ರಾರಂಭವಾಯಿತು.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ