ಪಂಜಾಬ್​ನ ಬಟಿಂಡಾದಲ್ಲಿ ಫೈರಿಂಗ್​ ಪ್ರಕರಣ: ಬಾಗಲಕೋಟೆ ಮೂಲದ ಯೋಧ ಹುತಾತ್ಮ

ಪಂಜಾಬ್​ನ ಬಟಿಂಡಾದ ಮಿಲಿಟರಿ ಸ್ಟೇಷನ್​ನಲ್ಲಿ ಫೈರಿಂಗ್​ ಪ್ರಕರಣದಲ್ಲಿ ರಾಜ್ಯದ ಯೋಧರೊಬ್ಬರು ಹುತಾತ್ಮ ಆಗಿದ್ದಾರೆ. ಸಂತೋಷ್ ಮಲ್ಲಪ್ಪ ನಾಗರಾಳ(24) ಹುತಾತ್ಮ ಆದ ಯೋಧ.

ಪಂಜಾಬ್​ನ ಬಟಿಂಡಾದಲ್ಲಿ ಫೈರಿಂಗ್​ ಪ್ರಕರಣ: ಬಾಗಲಕೋಟೆ ಮೂಲದ ಯೋಧ ಹುತಾತ್ಮ
ಸಂತೋಷ್ ಮಲ್ಲಪ್ಪ ನಾಗರಾಳ(24) ಹುತಾತ್ಮ ಯೋಧ
Follow us
ಗಂಗಾಧರ​ ಬ. ಸಾಬೋಜಿ
|

Updated on: Apr 12, 2023 | 9:25 PM

ಬಾಗಲಕೋಟೆ: ಪಂಜಾಬ್​ನ ಬಟಿಂಡಾದ ಮಿಲಿಟರಿ ಸ್ಟೇಷನ್​ನಲ್ಲಿ (Bathinda Army Station) ಫೈರಿಂಗ್​ ಪ್ರಕರಣದಲ್ಲಿ ರಾಜ್ಯದ ಯೋಧರೊಬ್ಬರು ಹುತಾತ್ಮ ಆಗಿದ್ದಾರೆ. ಸಂತೋಷ್ ಮಲ್ಲಪ್ಪ ನಾಗರಾಳ(24) ಹುತಾತ್ಮ ಆದ ಯೋಧ. ಜಿಲ್ಲೆಯ ಬಾದಾಮಿ ತಾಲೂಕಿನ ಇನಾಮಹನಮನೇರಿ ನಿವಾಸಿ. ಕಳೆದ 4 ವರ್ಷಗಳಿಂದ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು. ಇಂದು ಮುಂಜಾನೆ ನಡೆದ ಫೈರಿಂಗ್​ನಲ್ಲಿ ಯೋಧ ಸಂತೋಷ್​ ಹುತಾತ್ಮರಾಗಿದ್ದಾರೆ. ಇಂದು (ಏ.12) ಬೆಳಗ್ಗೆ ಪಂಜಾಬ್​​ನ ಬಟಿಂಡಾ ಸೇನಾ ಠಾಣೆಯೊಳಗೆ ಗುಂಡಿನ ದಾಳಿ ನಡೆದಿದೆ ಎಂದು ಭಾರತೀಯ ಸೇನೆಯ ಸೌತ್ ವೆಸ್ಟರ್ನ್ ಕಮಾಂಡ್ ತಿಳಿಸಿತ್ತು. ಇದೀಗ ಈ ಪ್ರದೇಶದಲ್ಲಿ ತಂಡಗಳು ಸಕ್ರಿಯಗೊಂಡು ತ್ವರಿತ ಕಾರ್ಯಚರಣೆಯನ್ನು ನಡೆಸುತ್ತಿದ್ದಾರೆ. ಸದ್ಯ ರಕ್ಷಣಾ ಸಿಬ್ಬಂದಿಗಳು ಈ ಪ್ರದೇಶವನ್ನು ಸುತ್ತುವರೆದಿದ್ದು, ಕೆಲವೊಂದು ಕಡೆ ನಿರ್ಬಂಧವೇರಿದ್ದಾರೆ. ಹಂತಕರ ಹುಡುಕಾಟ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ದಾಳಿಯಲ್ಲಿ ನಾಲ್ಕು ಜನ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.

ಕರ್ತವ್ಯದಲ್ಲಿದ್ದ ದಾವಣಗೆರೆ ಮೂಲದ ಯೋಧ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣು

ದಾವಣಗೆರೆ: ಗುಂಡು ಹಾರಿಸಿಕೊಂಡು ದಾವಣಗೆರೆ ಮೂಲದ ಯೋಧ ಆತ್ಮಹತ್ಯೆ ಮಾಡಿಕೊಂಡಿರುವಂತಹ ದುರಂತ ಘಟನೆ ಇತ್ತೀಚೆಗೆ ನಡೆದಿತ್ತು. ತಾಲೂಕಿನ ಹದಡಿ ಗ್ರಾಮದ ನಾಗರಾಜ್(32) ಆತ್ಮ‌ಹತ್ಯೆಗೆ ಶರಣಾದ ಯೋಧ. ಕರ್ತವ್ಯದಲ್ಲಿದ್ದಾಗ ನಿನ್ನೆ ಬೆಳಗ್ಗೆ 4ಗಂಟೆಗೆ ಗುಂಡು ಹಾರಿಸಿಕೊಂಡಿದ್ದರು. ಆತ್ಮಹತ್ಯೆಗೆ ವೈಯಕ್ತಿಕ ಕಾರಣ ಎನ್ನಲಾಗಿದೆ. ಪಂಜಾಬ್, ಹರಿಯಾಣ ಸೆಕ್ರೆಟರಿಯೇಟ್​ನಲ್ಲಿ ಸೇವೆ ಸಲ್ಲಿಸುತ್ತಿದ್ದರು. ಕಳೆದ 6 ವರ್ಷಗಳಿಂದ ಕೇಂದ್ರ ಕೈಗಾರಿಕಾ ಭದ್ರತಾ ಪಡೆ ಸಿಬ್ಬಂದಿಯಾಗಿದ್ದರು. ದಾವಣಗೆರೆ ಮೂಲದ ಶಿಲ್ಪಾ ಎಂಬುವರನ್ನ ಮದುವೆ ಆಗಿದ್ದು, ಇಬ್ಬರು ಪುತ್ರಿಯರಿದ್ದಾರೆ. ನಾಗರಾಜ್​ ಅವರ ಪಾರ್ಥಿವ ಶರೀರವನ್ನು ಮಂಗಳವಾರ ಸ್ವಗ್ರಾಮ ಹದಡಿಗೆ ತರಲಾಗುತ್ತದೆ ಎಂದು ಜಿಲ್ಲಾ ರಕ್ಷಣಾಧಿಕಾರಿ ಸಿ.ಬಿ ರಿಷ್ಯಂತ ತಿಳಿಸಿದ್ದಾರೆ.

ಇದನ್ನೂ ಓದಿ: New Jersey: ನ್ಯೂ ಜೆರ್ಸಿ ಹೋಟೆಲ್‌ನಲ್ಲಿ ಹಣ ಹಿಂದುರಿಗಿಸದ ವೇಶ್ಯೆಯನ್ನು ಚಾಕುವಿನಿಂದ ಇರಿದ ವ್ಯಕ್ತಿ

ವಿವಿಪುರಂನಲ್ಲಿ ಕೋಟ್ಯಂತರ ಮೌಲ್ಯದ ಡ್ರಗ್ಸ್​ ಪತ್ತೆ

ಬೆಂಗಳೂರು: ವಿವಿಪುರಂನಲ್ಲಿ ಕೋಟ್ಯಂತರ ಮೌಲ್ಯದ ಡ್ರಗ್ಸ್​ ಪತ್ತೆ ಚುನಾವಣೆ ಹೊಸ್ತಿಲಿನಲ್ಲಿ ಹಲವು ಅನುಮಾನಗಳನ್ನ ಹುಟ್ಟು ಹಾಕಿದೆ. ಬರೀ ವಿವಿಐಪಿಗಳೆ ಬಳಸುವ ಬರೋಬ್ಬರಿ ನಾಲ್ಕು ಕೋಟಿ ಮೌಲ್ಯದ 1 ಕೇಜಿ 40 ಗ್ರಾಂ ಬ್ರೌನ್ ಎಂಡಿಎಂಎ ಪತ್ತೆಯಾಗಿವೆ. ಈ ಹಿನ್ನೆಲೆ ನಗರದಲ್ಲಿ ಭಾರೀ ಪ್ರಮಾಣದ ವಿವಿಐಪಿಗಳು ಡ್ರಗ್ಸ್ ಬಳಸುತ್ತಿರುವ ಶಂಕೆ ವ್ಯಕ್ತವಾಗಿದೆ.

ಕಳೆದ ಕೆಲವುದಿನಗಳ ಹಿಂದೆ ವಿವಿಪುರಂ ಹಾಗೂ ಜಯನಗರ ನಗರ ಪೊಲೀಸರು ಐವರು ವಿದೇಶಿ ಡ್ರಗ್ ಪೆಡ್ಲರ್​ಗಳ ಬಂಧಿಸಿದ್ದರು. ಈ ವೇಳೆ ಬರೋಬ್ಬರಿ 8 ಕೋಟಿ 20 ಲಕ್ಷ ಮೌಲ್ಯದ ವಿವಿಧ ರೀತಿಯ ಡ್ರಗ್ಸ್ ಪೊಲೀಸರು ವಶಪಡಿಸಿಕೊಂಡಿದ್ದರು. ಇದರಲ್ಲಿ ನಾಲ್ಕು ಕೋಟಿ ಮೌಲ್ಯದ ಬ್ರೌನ್ ಎಂಡಿಎಂಎ ಪತ್ತೆಯಾಗಿತ್ತು. ಹೀಗಾಗಿ ಇದನ್ನ ನಗರದಲ್ಲಿ ಬಳಸುತ್ತಿದ್ದ ವಿವಿಐಪಿಗಳು, ಸೆಲಬ್ರೆಟಿಗಳು ಯಾರು ಎಂದು ಪೊಲೀಸರು ಪತ್ತೆ ಹಚ್ಚುತ್ತಿದ್ದಾರೆ.

ಇದನ್ನೂ ಓದಿ: IndianMoney Ffreedom App: ಆ್ಯಪ್ ಅಭಿವೃದ್ಧಿ ಮಾಡಿ ವಂಚನೆ; ಇಂಡಿಯನ್​ಮನಿ ಫ್ರೀಡಂ ಆ್ಯಪ್ ಸಿಇಒ ಸೇರಿ ಇಬ್ಬರು ಅರೆಸ್ಟ್

ಚಿಕ್ಕಬಳ್ಳಾಪುರ: ನದಿಯಲ್ಲಿ ಮೀನು ಹಿಡಿಯಲು ಹೋಗಿದ್ದ ಇಬ್ಬರು ನೀರುಪಾಲು

ಚಿಕ್ಕಬಳ್ಳಾಪುರ: ನದಿಯಲ್ಲಿ ಮೀನು ಹಿಡಿಯಲು ಹೋಗಿದ್ದ ಇಬ್ಬರು ನೀರುಪಾಲದ ಘಟನೆ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಪಾಪಗ್ನಿ ನದಿಯಲ್ಲಿ ನಡೆದಿದೆ. ಪಲಿಚೇರ್ಲು ಗ್ರಾಮದ ಮಂಜುನಾಥ (32), ಮಂಜುನಾಥ (42) ಸಾವನ್ನಪ್ಪಿದವರು. ನದಿಗಿಳಿದು ಮೀನು ಹಿಡಿಯಲು ಬೀಸಿದ ಬಲೆ ಇಬ್ಬರ ಕಾಲಿಗೆ ಸಿಲುಕಿದೆ. ಪರಿಣಾಮ ಇಬ್ಬರೂ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು
ಧಾರವಾಡದಲ್ಲಿ ರೈತರೊಂದಿಗೆ ವಿತಂಡವಾದಕ್ಕಿಳಿದ ಸಚಿವ ಸಂತೋಷ್ ಲಾಡ್
ಧಾರವಾಡದಲ್ಲಿ ರೈತರೊಂದಿಗೆ ವಿತಂಡವಾದಕ್ಕಿಳಿದ ಸಚಿವ ಸಂತೋಷ್ ಲಾಡ್
ನೋಟೀಸ್ ಹಿಂಪಡೆಯಲು ಸಿದ್ದರಾಮಯ್ಯ ಮೌಖಿಕ ಆದೇಶ ನೀಡಿದ್ದಾರೆ: ರೆಡ್ಡಿ
ನೋಟೀಸ್ ಹಿಂಪಡೆಯಲು ಸಿದ್ದರಾಮಯ್ಯ ಮೌಖಿಕ ಆದೇಶ ನೀಡಿದ್ದಾರೆ: ರೆಡ್ಡಿ