ಈ ಮೂರು ‘ಕೆ’ ಗಳನ್ನು ಯಾವತ್ತೂ ಮರೆಯಬಾರದು: ಟೀಕೆಗಳಿಗೆ ತಲೆಕೆಡಿಸಿಕೊಳ್ಳಲ್ಲ, ಇತಿಹಾಸ ಸೃಷ್ಟಿಸೋ ಕೆಲಸ ಮಾಡ್ತೀವಿ ಎಂದ ಸಿಎಂ ಡಿಕೆ ಶಿವಕುಮಾರ್

Updated on: Jun 27, 2026 | 5:34 PM

ಮುಖ್ಯಾಂಶಗಳು

  • ಟೀಕೆಗಳು ತಾತ್ಕಾಲಿಕ, ಆದರೆ ಮಾಡಿದ ಕೆಲಸಗಳು ಶಾಶ್ವತ
  • ಬೆಂಗಳೂರಿನ ಪ್ರಗತಿಗೆ ಕೊಡುಗೆ ನೀಡಿದ ಮೂರು ಕೆ ಗಳನ್ನು ನೆನೆಪಿನಲ್ಲಿಟ್ಟುಕೊಳ್ಳಬೇಕು
  • ಬೆಂಗಳೂರಿನ ಬೆಳವಣಿಗೆಗೆ ಈ ಯೋಜನೆಗಳು ಅತ್ಯಗತ್ಯ

ಕೆಂಪೇಗೌಡ ಜಯಂತಿ ಕಾರ್ಯಕ್ರಮದಲ್ಲಿ ಸಿಎಂ ಡಿಕೆಶಿ ಬೆಂಗಳೂರು ಅಭಿವೃದ್ಧಿಗೆ ಒಂದೂವರೆ ಲಕ್ಷ ಕೋಟಿ ರೂ. ವೆಚ್ಚದ ಯೋಜನೆಗಳನ್ನು ಪ್ರಸ್ತಾಪಿಸಿದರು. ಟೀಕೆಗಳಿಗಿಂತ ಕೆಲಸಗಳು ಶಾಶ್ವತ ಎಂದು ಹೇಳಿದ ಅವರು, ಕೆಂಪೇಗೌಡ, ಕೆಂಗಲ್ ಹನುಮಂತಯ್ಯ ಹಾಗೂ ಎಸ್.ಎಂ. ಕೃಷ್ಣರವರ ಕೊಡುಗೆಗಳನ್ನು ಸ್ಮರಿಸಿದರು. ಪೆರಿಫೆರಲ್ ರಿಂಗ್ ರಸ್ತೆ ವಿಸ್ತರಣೆ ಮತ್ತು ಭೂಸ್ವಾಧೀನದ ಐತಿಹಾಸಿಕ ನಿರ್ಧಾರಗಳ ಬಗ್ಗೆ ಮಾಹಿತಿ ನೀಡಿದರು.

ಬೆಂಗಳೂರು, ಜೂ.27: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಬೆಂಗಳೂರು ಅಭಿವೃದ್ಧಿಗೆ ಒಂದೂವರೆ ಲಕ್ಷ ಕೋಟಿ ರೂಪಾಯಿಗಳ ಬೃಹತ್ ಯೋಜನೆಯನ್ನು ಅನಾವರಣಗೊಳಿಸಿದರು. ಕೆಂಪೇಗೌಡ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಟೀಕೆಗಳು ತಾತ್ಕಾಲಿಕ, ಆದರೆ ಮಾಡಿದ ಕೆಲಸಗಳು ಶಾಶ್ವತ ಎಂದು ಹೇಳಿದರು. ಈ ಸಂದರ್ಭದಲ್ಲಿ ಅವರು ಬೆಂಗಳೂರಿನ ಪ್ರಗತಿಗೆ ಕೊಡುಗೆ ನೀಡಿದ ಮೂರು ಕೆ ಗಳನ್ನು ನೆನೆಪಿನಲ್ಲಿಟ್ಟುಕೊಳ್ಳಬೇಕು ಎಂದು ಹೇಳಿದರು. ಬೆಂಗಳೂರನ್ನು ಸ್ಥಾಪಿಸಿದ ನಾಡಪ್ರಭು ಕೆಂಪೇಗೌಡರು, ವಿಧಾನ ಸೌಧವನ್ನು ನಿರ್ಮಿಸಿದ ಕೆಂಗಲ್ ಹನುಮಂತಯ್ಯ ಮತ್ತು ಬೆಂಗಳೂರನ್ನು ಅಂತರರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದ ಎಸ್.ಎಂ. ಕೃಷ್ಣ. ಈ ಮೂವರೂ ಬಿಟ್ಟು ಹೋದ “ಸಾಕ್ಷಿ ಗುಡ್ಡೆಗಳೇ” ಅವರ ಕೆಲಸಗಳಿಗೆ ಸಾಕ್ಷಿ ಎಂದರು. ಹಿಂದಿನ ಸರ್ಕಾರಗಳು ನಿರ್ಲಕ್ಷಿಸಿದ್ದ 11 ಕಿಲೋಮೀಟರ್ ರಸ್ತೆಯನ್ನು 123 ಕಿಲೋಮೀಟರ್ ಪೆರಿಫೆರಲ್ ರಿಂಗ್ ರಸ್ತೆಯನ್ನಾಗಿ ವಿಸ್ತರಿಸುವ ಮಹತ್ವದ ಯೋಜನೆಯನ್ನು ಡಿ.ಕೆ. ಶಿವಕುಮಾರ್ ಘೋಷಿಸಿದರು. ಎಸ್.ಎಂ. ಕೃಷ್ಣ ಅವರ ಹೆಸರಿನಲ್ಲಿ 10 ಪಥಗಳ ರಸ್ತೆಯನ್ನು ಅವರ ಕುಟುಂಬದ ಸದಸ್ಯರ ಸಮ್ಮುಖದಲ್ಲಿ ಉದ್ಘಾಟಿಸಲಾಯಿತು. ಭೂಸ್ವಾಧೀನಕ್ಕೆ ಸಂಬಂಧಿಸಿದಂತೆ ಐತಿಹಾಸಿಕ ನಿರ್ಧಾರಗಳನ್ನು ತಿಳಿಸಿದ ಅವರು, ಬೆಂಗಳೂರಿನ ಬೆಳವಣಿಗೆಗೆ ಈ ಯೋಜನೆಗಳು ಅತ್ಯಗತ್ಯ ಎಂದು ಪ್ರತಿಪಾದಿಸಿದರು.

ವಿಡಿಯೋ ಸುದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published on: Jun 27, 2026 05:34 PM
Follow Us