ಲೋಕಸಭಾ ಚುನಾವಣೆಯಲ್ಲಿ ಎಲ್ಲೂ ಹೊಂದಾಣಿಕೆಯಾಗಿಲ್ಲ: ಡಿಕೆ ಶಿವಕಮಾರ್, ಕೆಪಿಸಿಸಿ ಅಧ್ಯಕ್ಷ

|

Updated on: Jul 12, 2024 | 4:50 PM

ಲೋಕಸಭಾ ಚುನಾವಣೆಯಲ್ಲಿ ಯಾವ ಕ್ಷೇತ್ರದಲ್ಲೂ ಹೊಂದಾಣಿಕೆಯಾಗಿಲ್ಲ, ಆ ಆರೋಪಗಳೆಲ್ಲ ಸತ್ಯಕ್ಕೆ ದೂರ, ಕಾಂಗ್ರೆಸ್ ಕಾರ್ಯಕರ್ತರು ಎಲ್ಲ ಕ್ಷೇತ್ರಗಳಲ್ಲಿ ಶ್ರಮವಹಿಸಿ ದುಡಿದಿದ್ದಾರೆ, ಕೆಲವು ಕಡೆ ಸಚಿವರ ಮಕ್ಕಳನ್ನು ಕಣಕ್ಕಿಳಿಸುವುದು ಒಮ್ಮತದ ನಿರ್ಧಾರವಾಗಿತ್ತು, ಕೆಲವರು ಗೆದ್ದರೆ ಉಳಿದವರು ಸೋತಿದ್ದಾರೆ ಎಂದು ಶಿವಕುಮಾರ್ ಹೇಳಿದರು.

ಬೆಂಗಳೂರು: ಫಾರ್ ಎ ಚೇಂಜ್ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಇಂದು ಸೂಟುಧಾರಿಯಾಗಿದ್ದರು. ಎಐಸಿಸಿಯಿಂದ ಸತ್ಯ ಶೋಧನಾ ಸಮಿತಿ ಬಂದಿರುವ ಬಗ್ಗೆ ಮಾತಾಡಿದ ಅವರು, ನಿನ್ನೆಯಂತೆ ಇವತ್ತು ಸಹ ಸಮಿತಿ ಸದಸ್ಯರು ಲೋಕಸಭಾ ಚುನಾವಣೆಯಲ್ಲಿ ಸೋತವರು ಗೆದ್ದವರು ಮತ್ತು ರಾಜ್ಯದ ಮುಖಂಡರ ಜೊತೆ ಮಾತುಕತೆ ನಡೆಸಿದ್ದಾರೆ. ಮುಖ್ಯಮಂತ್ರಿಯವರು ಸಹ ಮಧ್ಯಾಹ್ನವೇ ಸಮಿತಿಯೊಂದಿಗೆ ಮಾತಾಡಬೇಕಿತ್ತು, ಕಾರಣಾಂತರಗಳಿಂದ ಬರಲಾಗಿಲ್ಲ, ಅದರೆ ಸಮಿತಿ ಸದಸ್ಯರು ವಾಪಸ್ಸು ಹೋಗುವ ಮೊದಲು ಸಿಎಂ ಅವರನ್ನು ಭೇಟಿಯಾಗಲಿದ್ದಾರೆ ಎಂದು ಹೇಳಿದರು. ಇಲ್ಲಿಯ ಎಲ್ಲ ವಿದ್ಯಮಾನಗಳ ಬಗ್ಗೆ ಅವರು ಎಐಸಿಸಿಗೆ ವರದಿ ಸಲ್ಲಿಸಲಿದ್ದಾರೆ, ಮತ್ತು ಇಲ್ಲಿ ಅಗಿರುವ ಲೋಪದೋಷಗಳನ್ನು ಸರಿಪಡಿಸಿಕೊಳ್ಳುವ ದಿಶೆಯಲ್ಲಿ ಸಲಹೆ ಸೂಚನೆ ನೀಡಲಿದ್ದಾರೆ ಎಂದು ಶಿವಕುಮಾರ್ ಹೇಳಿದರು. ಮುಡಾ ಬಗ್ಗೆ ಕೇಳಿದ ಪ್ರಶ್ನೆಗೆ ಖಡಕ್ಕಾಗಿ ಉತ್ತರಿಸಿದ ಶಿವಕುಮಾರ್, ಅದರಲ್ಲಿ ತಪ್ಪೇನಾಗಿದೆ? ಬಿಜೆಪಿಯವರೇ ನಡೆಸಿರುವ ಅವಾಂತರ ಅದು, ಅವರ ಎಲ್ಲ ಸವಾಲುಗಳಿಗೆ ಅಸೆಂಬ್ಲಿ ಅಧಿವೇಶನದಲ್ಲಿ ಉತ್ತರ ಕೊಡಲು ತಯಾರಿದ್ದೇವೆ ಎಂದು ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:   ಸರ್ಕಾರಕ್ಕೆ ಯಾವುದೇ ಅರ್ಥಿಕ ಸಂಕಷ್ಟವಿಲ್ಲ, ಎಲ್ಲವೂ ಸ್ಟ್ರೀಮ್ ಲೈನ್ ಆಗುತ್ತಿದೆ: ಡಿಕೆ ಶಿವಕುಮಾರ್