‘ಮುತ್ತು’ರಾಜ ರೇಣುಕಾಚಾರ್ಯ ಬಿಜೆಪಿಯ ರಾಜಕುಮಾರ, ಅವರ ಬಗ್ಗೆ ಕಾಮೆಂಟ್ ಮಾಡಲ್ಲ ಎಂದರು ಡಿಕೆ ಶಿವಕುಮಾರ

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Feb 09, 2022 | 7:23 PM

ಬುಧವಾರದಂದು ಬೆಂಗಳೂರಿನಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ ಅವರಿಗೆ ಹೊನ್ನಾಳಿ ಶಾಸಕರ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ಕೇಳಿದಾಗ ಅವರು ‘ಮುತ್ತು’ರಾಜನ ಬಗ್ಗೆ ಏನನ್ನೂ ಕಾಮೆಂಟ್ ಮಾಡಲ್ಲ ಎಂದರು. ಮುತ್ತುರಾಜ ಅಂದರೆ ನಮ್ಮ ಪಕ್ಕದ ಮನೆಯ ರಾಜಕುಮಾರ ಅಲ್ಲ, ರೇಣುಕಾಚಾರ್ಯ ಬಿಜೆಪಿಯ ರಾಜಕುಮಾರ ಎಂದು ಹೇಳಿದರು.

ಸಮವಸ್ತ್ರ, ಮಹಿಳೆಯರು ತೊಡುವ ಬಟ್ಟೆ ಬಗ್ಗೆ ರಾಜಕೀಯ ಧುರೀಣರು, ಹಿಂದೆ ಮಂತ್ರಿಯಾಗಿದ್ದವರು ಸಹ ತಮಗೆ ತೋಚಿದಂತೆ ಹೇಳಲಾರಂಭಿಸಿದ್ದಾರೆ. ಬಿಜೆಪಿ ಶಾಸಕ ಮತ್ತು ಮಂತ್ರಿಯಾಗುವ ತಹತಹಿಕೆಯಲ್ಲಿರುವ ರೇಣುಕಾಚಾರ್ಯ (MP Renukacharya) ಅವರು ಅತ್ಯಾಚಾರ ಪ್ರಕರಣಗಳು ಜಾಸ್ತಿಯಾಗುವುದಕ್ಕೆ ಮಹಿಳೆಯರು ಧರಿಸುವ ಉದ್ರೇಕಕಾರಿ ಉಡುಪುಗಳೇ ಕಾರಣ ಅಂತ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಬುಧವಾರದಂದು ಬೆಂಗಳೂರಿನಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ (DK Shivakumar) ಅವರಿಗೆ ಹೊನ್ನಾಳಿ (Honnali) ಶಾಸಕರ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ಕೇಳಿದಾಗ ಅವರು ‘ಮುತ್ತು’ರಾಜನ ಬಗ್ಗೆ ಏನನ್ನೂ ಕಾಮೆಂಟ್ ಮಾಡಲ್ಲ ಎಂದರು. ಮುತ್ತುರಾಜ ಅಂದರೆ ನಮ್ಮ ಪಕ್ಕದ ಮನೆಯ ರಾಜಕುಮಾರ ಅಲ್ಲ, ರೇಣುಕಾಚಾರ್ಯ ಬಿಜೆಪಿಯ ರಾಜಕುಮಾರ (Rajkumar) ಎಂದು ಹೇಳಿದರು. ಅವರು ‘ಮುತ್ತು’ರಾಜ ಅಂತ ಯಾಕೆ ಹೇಳಿದರು ಅಂತ ಅಲ್ಲಿದ್ದವರಿಗೆ ಕೂಡಲೇ ಅರ್ಥವಾಗಲಿಲ್ಲ.

ಹಿಜಾಬ್ ವಿವಾದ ಬಗ್ಗೆ ಕಾಂಗ್ರೆಸ್ ತಟಸ್ಥ ನಿಲುವು ತಳೆದಿರುವುದು ಯಾಕೆ ಅಂತ ಶಿವಕುಮಾರ ಅವರನ್ನು ಕೇಳಿದಾಗ ಅವರು, ‘ನಮ್ಮದು ತಟಸ್ಥ ನಿಲುವು ಅಲ್ಲ, ರಾಷ್ಟ್ರಧ್ವಜ ನಮ್ಮ ಧರ್ಮ ಮತ್ತು ಡಾ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ರಚಿಸಿದ ಸಂವಿಧಾನವೇ ನಮ್ಮ ಭಗವದ್ಗೀತೆ, ಕುರಾನ್ ಮತ್ತು ಬೈಬಲ್ ಎಂದರು. ಶಾಸಕನಾಗಿ ಅಯ್ಕೆಯಾಗಿ ಸಂವಿಧಾನದ ಪ್ರಮಾಣ ವಚನ ಸ್ವೀಕರಿಸಿದ ನಂತರ ನಾವು ಅದಕ್ಕೆ ಬದ್ಧರಾಗಿರುತ್ತೇವೆ,’ ಎಂದು ಹೇಳಿದರು.

‘ನಾನೊಬ್ಬ ಹಿಂದೂ. ಹಣೆಗೆ ತಿಲಕ ಇಲ್ಲವೇ ವಿಭೂತಿ ಇಟ್ಟುಕೊಳ್ಳುತ್ತೇನೆ. ಹಾಗೆಯೇ ಆಯಾ ಧರ್ಮದವರು ತಮ್ಮ ತಮ್ಮ ಸಂಪ್ರದಾಯಗಳಿಗೆ ಅನುಗುಣವಾಗಿ ಉಡುವ-ತೊಡುವ ಅಧಿಕಾರ ಇದೆ ಅಂದರು,’ ಅದನ್ನು ಪ್ರಶ್ನೆ ಮಾಡಲಾಗದು ಎಂದು ಶಿವಕುಮಾರ ಹೇಳಿದರು.

ಮಾಧ್ಯಮದರು ಮತ್ತೇನೋ ಪ್ರಶ್ನೆ ಕೇಳಿದಾಗ ಶಿವಕುಮಾರ ಅದಕ್ಕೆಲ್ಲ ದೊಡ್ಡವರು ಉತ್ತರ ಕೊಡುತ್ತಾರೆ ಅಂತ ಹೇಳುತ್ತಾ ಅಲ್ಲಿಂದ ನಡೆದರು.

ಇದನ್ನೂ ಓದಿ:  ಹಿಜಾಬ್ ಗಲಾಟೆಯ ಹಿಂದೆ SDPI ಇದೆ: ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್​ಗೆ ಸಂಪೂರ್ಣ ಮಾಹಿತಿ ನೀಡಿದ ಕರಾವಳಿ ಕಾಂಗ್ರೆಸ್