ಬಾಲಿವುಡ್ ಬಿದ್ದೋಯ್ತು, ಇದು ಸ್ಯಾಂಡಲ್ವುಡ್ ಸಮಯ: ಡಿಕೆಶಿ
DCM DK Shivakumar: ಮಲಯಾಳಂ ಸ್ಟಾರ್ ನಟ ಮೋಹನ್ಲಾಲ್ ನಟಿಸಿ, ನಂದ ಕಿಶೋರ್ ನಿರ್ದೇಶನ ಮಾಡಿರುವ ‘ವೃಷಭ’ ಸಿನಿಮಾದ ಕಾರ್ಯಕ್ರಮ ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆಯಿತು. ಕಾರ್ಯಕ್ರಮದ ಅತಿಥಿಯಾಗಿ ರಾಜ್ಯದ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಮಾತನಾಡಿದ ಡಿಕೆಶಿ ಅವರು, ‘ಬಾಲಿವುಡ್ ಬಿದ್ದು ಹೋಗಿದೆ, ಆದರೆ ಸ್ಯಾಂಡಲ್ವುಡ್ ಬೆಳೆದು ನಿಂತಿದೆ’ ಎಂದರು.
ಮಲಯಾಳಂ ಸ್ಟಾರ್ ನಟ ಮೋಹನ್ಲಾಲ್ (Mohanlal) ನಟಿಸಿ, ನಂದ ಕಿಶೋರ್ ನಿರ್ದೇಶನ ಮಾಡಿರುವ ‘ವೃಷಭ’ ಸಿನಿಮಾದ ಕಾರ್ಯಕ್ರಮ ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆಯಿತು. ಕಾರ್ಯಕ್ರಮದ ಅತಿಥಿಯಾಗಿ ರಾಜ್ಯದ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಮಾತನಾಡಿದ ಡಿಕೆಶಿ ಅವರು, ತಾವು ಮುಂಬೈಗೆ, ಮಾಜಿ ಸಿಎಂ ಮಗಳ ಮದುವೆಗೆ ಹೋಗಿದ್ದಾಗ ಅಲ್ಲಿ ಕನ್ನಡ ಚಿತ್ರರಂಗದ ಬಗ್ಗೆ ನಡೆದ ಚರ್ಚೆಯ ಬಗ್ಗೆ ಹೇಳಿದರು. ಬಾಲಿವುಡ್ನ ಕೆಲವರು ನನ್ನೊಂದಿಗೆ ಅಂದು ಮಾತನಾಡಿದರು, ‘ಬಾಲಿವುಡ್ ಬಿದ್ದು ಹೋಗಿದೆ, ಆದರೆ ಸ್ಯಾಂಡಲ್ವುಡ್ ಬೆಳೆದು ನಿಂತಿದೆ’ ಎಂದು ಅವರು ಹೇಳಿದರೆಂದು ಡಿಕೆಶಿ ಹೇಳಿದರು. ವಿಡಿಯೋ ನೋಡಿ…
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
